23rd May 2024
Share

TUMAKURU: SHAKTHIPEETA FOUNDATION

ತುಮಕೂರು ತ್ರಿವಳಿ ನಗರ’ಕ್ಕೊಂದು ಮುಕುಟ ರುರ್ಬನ್’ ಯೋಜನೆ. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕೇಂದ್ರ ಸರ್ಕಾರದ ಯೋಜನೆಯಾದ ಶ್ಯಾಮ್ ಪ್ರಸಾದ್ ಮುಖರ್ಜಿ ರುರ್ಬನ್ ಮಿಷನ್ ಯೋಜನೆಗೆ ತುಮಕೂರು ನಗರದ ಹೊರವಲಯದ  ಸುತ್ತ ಇರುವ ಪ್ರದೇಶಗಳನ್ನು ಆಯ್ಕೆ ಮಾಡುವ ಮೂಲಕ ದೂರದೃಷ್ಠಿ ಯೋಜನೆಗೆ ಮುನ್ನುಡಿ ಬರೆದಿದ್ದಾರೆ.

ಏನಿದು ತ್ರಿವಳಿ ನಗರ : ತುಮಕೂರು ಮಹಾನಗರ ಪಾಲಿಕೆ ಹಾಲಿ ವ್ಯಾಪ್ತಿ ಸುಮಾರು 12500 ಎಕರೆ ಪ್ರದೇಶದಲ್ಲಿದೆ. ತಮಕೂರು ಇಂಡಸ್ಟ್ರಿಯಲ್ ಕಾರಿಡಾರ್/ನೋಡ್/ನಿಮ್ಜ್ ಸುಮಾರು 13500 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ. ಇವೆರಡರ ಮಧ್ಯೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಸುಮಾರು 125000 ಎಕರೆ ಪ್ರದೇಶದಲ್ಲಿ ನಗರ ಬೆಳೆಯಲಿದೆ.

ತುಮಕೂರು ನಗರದ ಸುತ್ತ ಈಗಾಗಲೇ ಅಭಿವೃದ್ಧಿ ಹೊಂದುತ್ತಿದೆ. ಎರಡು ರಾಷ್ಟ್ರೀಯ ಹೆದ್ಧಾರಿಗಳಾದ ತುಮಕೂರು- ಹೊನ್ನಾವರ ಮತ್ತು ಬೆಂಗಳೂರು-ಪುಣೆ  ತುಮಕೂರು ನಗರದ ಮೂಲಕ ಹಾದು ಹೋಗಲಿವೆ, ಇನ್ನೊಂದು ಹೊಸ ಹೆದ್ಧಾರಿಯಾಗಿ ಕೊಳ್ಳೆಗಾಲ-ಪಾವಗಡ ರಸ್ತೆಗೆ ಕೇಂದ್ರ ಸರ್ಕಾರದಿಂದ ಇನ್ ಪ್ರಿನ್ಸಿಪಲ್ ಅಪ್ರೂವಲ್’ದೊರೆತಿದೆ.

ಇಂದಲ್ಲ- ನಾಳೆ ತುಮಕೂರು ನಗರಕ್ಕೆ ಫೆರಿ-ಫೆರಿಯಲ್ ರಿಂಗ್ ರಸ್ತೆ ಆಗಲೇ ಬೇಕಿದೆ. ಬೆಂಗಳೂರು ನಗರದ ಫೆರಿ-ಫೆರಿಯಲ್ ರಿಂಗ್ ರಸ್ತೆ ಮತ್ತು ತುಮಕೂರು ಫೆರಿ-ಫೆರಿಯಲ್ ರಿಂಗ್ ರಸ್ತೆ ಮಧ್ಯೆ ಕೇವಲ 7-8  ಕೀಮೀ ಅಂತರ ಇರಲಿದೆ. ನಗರದ ರೇಡಿಯಲ್ ರಸ್ತೆಗಳ ಮಾಸ್ಟರ್ ಪ್ಲಾನ್ ಸಿದ್ಧವಾಗುತ್ತಿದೆ.

ಅಂತರ ರಾಷ್ಟ್ರೀಯ ಮಟ್ಟದ 2 ನೇ ವಿಮಾನ ನಿಲ್ಧಾಣಕ್ಕೆ ತುಮಕೂರು ಪ್ರಾಶಸ್ತ್ಯ ಎಂದು ಯೋಜನಾ ಇಲಾಖೆ ಗುರುತಿಸಿದೆ. ತುಮಕೂರು ಜಿಲ್ಲೆಯಲ್ಲಿ ಒಂದು ಬಫರ್ ಡ್ಯಾಂ’ ನಿರ್ಮಾಣ ಮಾಡಲು ರಾಜ್ಯದ ನದಿ ಜೋಡಣೆ ನೋಡೆಲ್ ಆಫೀಸರ್ ಆದ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ರವರು ಸ್ಥಳ ಹುಡುಕುತ್ತಿದ್ದಾರೆ.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಈಗಾಗಲೇ ಒಂದು ಡ್ಯಾಂ ಜಾಗ ಗುರುತಿಸಿದ್ದಾರೆ. ಇದು ಸಹ ತುಮಕೂರುಶಿರಾಗುಬ್ಬಿ ಸೇರಿದಂತೆ 3 ತಾಲ್ಲೂಕಿನ ಪ್ರದೇಶದಲ್ಲಿ ತಲೆ ಎತ್ತಬಹುದು.

ಕೇಂದ್ರ ಸರ್ಕಾರದ  ರಾಷ್ಟ್ರೀಯ ಹೆದ್ಧಾರಿ ಮತ್ತು ಎಂ.ಎಸ್.ಎಂ.ಇ ಸಚಿವರಾದ ಶ್ರೀ ನಿತಿನ್ ಗಡ್ಕರಿಯವರು ಈಗ ತಾನೆ ಒಂದು ವಿನೂತನ ಯೋಜನೆ ರೂಪಿಸಿದ್ದಾರೆ. ಇವರ ಆಲೋಚನೆ ನಿರುದ್ಯೋಗಿಗಳಿಗೆ ವರದಾನವಾಗಲಿದೆ.

ನ್ಯಾಯಾಲಯದ ಆದೇಶದ ಪ್ರಕಾರ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ 10 ಕೀಮೀ ಸುತ್ತವಿರುವ ಸರ್ಕಾರಿ ಜಮೀನನ್ನು ಯಾರಿಗೂ ಮಂಜೂರು ಮಾಡುವ ಆಗಿಲ್ಲ. ಈಗಾಗಲೇ ಈ ಜಾಗವನ್ನು ತುಮಕೂರು ಉಪವಿಭಾಗಾಧಿಕಾರಿಗಳು ಮತ್ತು ತುಮಕೂರು ತಹಶೀಲ್ಧಾರ್ ರವರು ಸಂಸದರ ಸೂಚನೆ ಮೇರೆಗೆ ಗುರುತಿಸಿದ್ದಾರೆ.

ದಿನಾಂಕ:26.03.2021 ರಂದು ನಡೆದ ದಿಶಾ ಸಮಿತಿಯ ನಿರ್ಣಯದಂತೆ ತುಮಕೂರು ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರು ಈ ಸರ್ಕಾರಿ ಜಮೀನುಗಳ ಜಿಐಎಸ್ ಲೇಯರ್ ಅನ್ನು ಶೀಘ್ರವಾಗಿ ಘೋಷಣೆ ಮಾಡಲಿದ್ದಾರೆ.

 ಈ ವ್ಯಾಪ್ತಿಯಲ್ಲಿ ಹೇಮಾವತಿ ಮತ್ತು ಎತ್ತಿನಹೊಳೆ ಎರಡು ಯೋಜನೆಯ ಮುಖ್ಯ ಕಾಲುವೆ ಹಾದು ಹೋಗಲಿದೆ. ಇವೆಲ್ಲಾ ಅನೂಕೂಲವಿರು,  ಈ ಪ್ರದೇಶ ರುರ್ಬನ್ ಯೋಜನೆ ಮೂಲಕ ದೇಶದ ಗಮನ ಸೆಳೆಯಲಿದೆ. ನೋಡೆಲ್ ಆಫೀಸರ್ ಆಗಿ ತುಮಕೂರು ಉಪವಿಭಾಗಾಧಿಕಾರಿಯವರಾದ ಶ್ರೀ ಅಜಯ್ ರವರನ್ನು ದಿಶಾ ಸಮಿತಿಯಲ್ಲಿ ನೇಮಕ ಮಾಡಲು ನಿರ್ಣಯ ಮಾಡಿದ ಹಿನ್ನಲೆಯಲ್ಲಿ ದಿಶಾ ಸದಸ್ಯ ಕಾರ್ಯದರ್ಶಿಯವರಾದ ಶ್ರೀ ಗಂಗಾಧರ್ ಸ್ವಾಮಿಯವರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಮಾಸ್ಟರ್ ಪ್ಲಾನ್ ಮಾಡಲು ಚಾಲನೆ ನೀಡಲು ಶ್ರೀ ಅಜಯ್ ರವರು ಅದೇಶ ಕಾಯುತ್ತಿದ್ದಾರೆ.

ಕೊರಟಗೆರೆ ಶಾಸಕರಾದ ಶ್ರೀ ಡಾ.ಜಿ.ಪರಮೇಶ್ವರ್‌ರವರು, ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿ ಗಣೇಶ್ ರವರು, ತುಮಕೂರು ಗ್ರಾಮಾಂತರ ಶಾಸಕರಾದ ಶ್ರೀ ಗೌರಿಶಂಕರ್‌ರವರು ಮತ್ತು ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರನಿವಾಸ್‌ರವರು ಈ ಯೋಜನೆಗೆ ಬೆಂಬಲ ನೀಡುವುದರಲ್ಲಿ ಅನುಮಾನವಿಲ್ಲ.

ಶ್ರೀ ಜಿ.ಎಸ್.ಬಸವರಾಜ್ ರವರ ಕನಸಿನ ತುಮಕೂರು ತ್ರಿವಳಿ ನಗರದ ಪರಿಕಲ್ಪನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಕೈಜೋಡಿಸುವ ಮೂಲಕ ಹಸಿರು ಸ್ಮಾರ್ಟ್ ತ್ರಿವಳಿ ನಗರ ಕ್ಕೆ ಮುನ್ನುಡಿ ಬರೆಯಲಿದ್ದಾರೆ ಎಂಬ ಕನಸು ತುಮಕೂರು ನಗರದ ಜನತೆಯದ್ದಾಗಿದೆ.

ಈ ಯೋಜನೆ ನಗರದ ಹೊರವಲಯದ ಸುತ್ತ ಇರುವ ರೈತರಿಗೆ ವರದಾನವಾಗಲಿದೆ, ವಿಶೇಷವಾಗಿ ತಿಗಳರು ಬೆಳೆಯುವ ಬೆಳೆಗಳಿಗೆ ರಾಷ್ಟ್ರ ವ್ಯಾಪ್ತಿ ಮಾರುಕಟ್ಟೆ ದೊರೆಯಲಿದೆ. ಒಂದು ಜಿಲ್ಲೆ ಒಂದು ಉತ್ಪನ್ನಗಳ ಕ್ಲಸ್ಟರ್ ಈ ರುರ್ಬನ್ ಪ್ರದೇಶವಾಗಲಿದೆ. ತೆಂಗಿನ ಬೆಳೆಗಾರರಿಗೆ ಮೌಲ್ಯ ವರ್ಧಿತ ಉತ್ಪನ್ನಗಳ ತವರು ಮನೆಯಾಗಲಿದೆ. ಇದೇ ನಗರದ ಜನತೆ ಕಂಡ ಕನಸು.