22nd December 2024
Share

TUMAKURU:SHAKTHIPEETA FOUNDATION

ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಗುಬ್ಬಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಸಂಸದರ ಆದರ್ಶ ಗ್ರಾಮವಾಗಿ ಘೋಷಣೆ ಮಾಡಿದ್ದಾರೆ.

ಮಾರ್ಗಸೂಚಿಯನ್ವಯ ವಿಲೇಜ್ ಡೆವಲಪ್ ಪ್ಲಾನ್ ಮಾಡಲಾಗಿದೆಯೇ ಅಥವಾ ಕಾಟಾಚಾರಕ್ಕೆ ಮಾಡಲಾಗಿದೆಯೇ ಎಂಬ ಬಗ್ಗೆ ದಿನಾಂಕ:28.03.2021 ರಂದು ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಗೆ ಭೇಟಿ ನೀಡಿ, ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯನಾಗಿ ತಪಾಸಣೆ ಮಾಡಲಾಯಿತು.

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯವರಾದ ಶ್ರೀ ಗುರುಮೂರ್ತಿಯವರು ವಿಲೇಜ್ ಡೆವಲಪ್ ಮೆಂಟ್ ಪ್ಲಾನ್ ಬಗ್ಗೆ ವಿವರಿಸಿದರು. ಈ ಪ್ಲಾನ್ ಸಿದ್ಧಪಡಿಸಲು ಪಂಚಾಯಿತಿ ವ್ಯಾಪ್ತಿಯ 21 ಗ್ರಾಮಗಳು, 12 ಎಸ್.ಸಿ.ಕಾಲೋನಿಗಳು, 3 ಎಸ್ ಟಿ ಕಾಲೋನಿಗಳು ಮತ್ತು 3 ಗೊಲ್ಲರಹಟ್ಟಿ ಗಳಲ್ಲಿ ಗ್ರಾಮಸಭೆ ನಡೆಸಲಾಗಿದೆಯೇ?

ಸಂಸದರ ಆದರ್ಶ ಗ್ರಾಮ ಯೋಜನೆಯ ಬಗ್ಗೆ ಪಂಚಾಯಿತಿ ವ್ಯಾಪ್ತಿಯ 2252  ಕುಟುಂಬಗಳಿಗೆ ಯಾವ ರೀತಿ ಪ್ರಚಾರ ಮಾಡಲಾಗಿದೆ.8875 ಜನಸಂಖ್ಯೆ ಇರುವ ಪಂಚಾಯಿತಿಯಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಎಷ್ಟು ಅರ್ಜಿಗಳು ಬಂದಿವೆ.

ಯಾವ ಯಾವ ಇಲಾಖೆಯಡಿ ಯಾವ ಕಾಮಗಾರಿ ಕೈಗೊಳ್ಳಲಾಗುವುದು ಎಂಬ ಬಗ್ಗೆ ಇಲಾಖೆಗಳಿಂದ ದಾಖಲೆ ಸಹಿತ ಮಾಹಿತಿ ಸಂಗ್ರಹಿಸಲಾಗಿದಯೇ? ಇಲಾಖಾವಾರು ಕಡತಗಳನ್ನು ಮಾಡಲಾಗಿದಯೇ? ಡಿಜಿಟಲ್ ಕಡತ ಮಾಡಲಾಗಿದಯೇ.

 ಎಷ್ಟು ಜಿಐಎಸ್ ಲೇಯgರ್ ಮಾಡಲಾಗಿದೆ. ಈ ವರೆಗೆ ಎಷ್ಟು ಸಭೆಗಳನ್ನು ಎಲ್ಲೆಲ್ಲಿ ಮಾಡಲಾಗಿದೆ. ಆಯಾ ಸಭೆಗಳ ನಿರ್ಣಯ ಎಲ್ಲಿದೆ. ಇಲಾಖಾವಾರು ಯೋಜನೆಗಳ ಪಾಲಾನಾ ವರದಿ ಎಲ್ಲಿದೆ, ಸಂಸದರ ಅಧ್ಯಕ್ಷತೆಯ ದಿಶಾ ಸಮಿತಿಗಳಿಗೆ  ಸಲ್ಲಿಸಿದ ಪಾಲಾನಾ ವರದಿಗಳ ಪ್ರತಿ ಎಲ್ಲಿದೆ.

ಸಂಸದರು 84 ವಿಷಯಗಳ ಬಗ್ಗೆ ಪತ್ರ ನೀಡಿದ್ದರು, ವಿಷಯವಾರು ಏನೇನು ಕ್ರಮಕೈಗೊಳ್ಳಲಾಗಿದೆ. ಸಂಸದರ ಅಧ್ಯಕ್ಷತೆಯಲ್ಲಿ ಭಾಗವಹಿಸಿದ್ಧಾಗ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿ ಯಾವ ಯೋಜನೆಗಳನ್ನು ಕೈಗೊಳ್ಳ ಬಹುದು ಎಂಬ ಬಗ್ಗೆ ಭಾಷಣ ಮಾಡಿದ್ದರು. ಯಾವ ಇಲಾಖೆಯವರು ಏನೇನು ಯೋಜನೆ ಬಗ್ಗೆ ಹೇಳಿದ್ದರು ಆ ಪ್ರತಿ ಎಲ್ಲಿದೆ.

 ಎಂಬ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದಾಗ ಮೂರು ದಿವಸದಲ್ಲಿ ಎಲ್ಲಾ ದಾಖಲೆಗಳನ್ನು ನೀಡುವುದಾಗಿ ಪಿಡಿಓ ಸಮಯ ಕೇಳಿದರು. ಮೊದಲ ತಪಾಸಣೆ ಆಗಿದ್ದರಿಂದ ನಾನು ಯಾವುದೇ ವಿಷಯವನ್ನು ರೆಕಾರ್ಡ್ ಮಾಡಿ ಜಿಲ್ಲಾ ಪಂಚಾಯಿತಿ ಸಿಇಓ ಹಾಗೂ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸುವುದಿಲ್ಲಾ.

ನಾನು ದಿನಾಂಕ:02.04.2021  ರಂದು ಮತ್ತೆ ಬರುತ್ತೇನೆ ಯಾವುದಾದರೂ ಮೂರು ಗ್ರಾಮಗಳಿಗೂ ಭೇಟಿ ಮಾಡಿ ಯಾವ ಕಾಮಗಾರಿ ಸೇರ್ಪಡೆ ಮಾಡಿದ್ದೀರಿ ಎಂಬ ಬಗ್ಗೆ ತಪಾಸಣೆ ಮಾಡಲಿದ್ದೇನೆ ಎಂದು ತಿಳಿಸಲಾಯಿತು.

ಉಪಸ್ಥಿತರಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಸಾರ್ವಜನಿಕರು  ನಿಯಾಮಾನುಸಾರ ಈ ಸಂಸದರ ಅದರ್ಶ ಗ್ರಾವನ್ನು ಯಾವ ರೀತಿ ಮಾಡ ಬೇಕೋ ಅದಕ್ಕೆ ನಾವೆಲ್ಲಾ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಘೋಶಿಸಿದರು.

ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು 2022 ರೊಳಗೆ ಯಾವ ಯೋಜನೆಗಳನ್ನು ದೇಶಾಧ್ಯಾಂತ ಪೂರ್ಣಗೊಳಿಸಲು ಘೋಷಣೆ ಮಾಡಿದ್ದಾರೋ ಹಾಗೂ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು 2022 ರೊಳಗೆ ತುಮಕೂರು ಜಿಲ್ಲೆಯನ್ನು ಡಾಟಾ ಜಿಲ್ಲೆಯಾಗಿ ಘೋಷಣೆ ಮಾಡಲು ಶ್ರಮಿಸುತ್ತಿದ್ದಾರೋ ಹಾಗೂ ಸಂಸದರ ಆದರ್ಶ ಗ್ರಾಮದ ಮಾರ್ಗಸೂಚಿಯನ್ವಯ ಏನೇಲ್ಲಾ ಮಾಡ ಬೇಕು. ಇವೆಲ್ಲಾ ಯೋಜನೆಗಳ ಪಾರದರ್ಶಕ ಅನುಷಾನಕ್ಕಾಗಿ ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯನಾಗಿ ನಾನು ಶೇ 100 ರಷ್ಟು ಪ್ರಗತಿ ಮಾಡಲು ಶ್ರಮಿಸಲು ನಿರ್ಣಯ ಮಾಡಿದ್ದೇನೆ.

ಈ ಹಿನ್ನಲೆಯಲ್ಲಿ 75 ನೇ ಸ್ವಾಂತಂತ್ರ್ಯ ದಿವಸದ ವೇಳೆಗೆ ಸುಮಾರು 75 ವಿವಿಧ ರೀತಿಯ ಅಂದರೇ ತಪಾಸಣಾ ಸಭೆಗಳು, ಅಧಿಕಾರಿಗಳ ಮತ್ತು ಸಂಸದರ ನೇತೃತ್ವದಲ್ಲಿನ ಸಭೆಗಳನ್ನು ನಡೆಸಲು ಗುರಿಹೊಂದಾಲಾಗಿದೆ. ಆರಂಭದಿಂದ ನಡೆದಿರುವ ಸಭೆಗಳ ಪಟ್ಟಿ ಮಾಡಲು ಸೂಚಿಸಲಾಯಿತು.

ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಶಕ್ತಿಪೀಠ ಫೌಂಡೇಷನ್ ಮೂಲಕ ಗುಬ್ಬಿ ತಾಲ್ಲೂಕಿನಿಂದ ಆರಂಭಿಸಿ ದೆಹಲಿಯವರೆಗೂ ಯಾವ ಇಲಾಖೆಯಲ್ಲಿ ಏನೇನು ಮಂಜೂರು ಮಾಡಿಸಬೇಕೋ ಅದಕ್ಕೆ ಉಚಿತವಾಗಿ ಶ್ರಮಿಸಲಾಗುವುದು.

 ಸಂಸದರ ನೇತೃತ್ವದಲ್ಲಿ ದೇಶದಲ್ಲಿಯೇ ಮಾದರಿ ಸಂಸದರ ಆದರ್ಶ ಗ್ರಾಮ ಯೋಜನೆಯಾಗಿ ಮಾಡಲೇ ಬೇಕಿದೆ. ಇಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲಾ ಇದು ಕಟು ಸತ್ಯ. ಈ ಪ್ರಯೋಜನ ಪಡೆಯಲು ಅಧ್ಯಕ್ಷರು, ಉಪಾದ್ಯಾಕ್ಷರು, ಸದಸ್ಯರು, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಕೈ ಜೋಡಿಸಿರುವುದರ ಜೊತೆಗೆ ಅಧಿಕಾರಿಗಳು ಚುರುಕಾಗ ಬೇಕು ಎಂಬ ಸಲಹೆ ನೀಡಲಾಯಿತು.

ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು, ಸಂಸದರ ಆದರ್ಶ ಗ್ರಾಮ ಯೋಜನೆ ನೋಡೆಲ್ ಆಫೀಸರ್ ಹಾಗೂ ಸಿಇಓ ಶ್ರೀ ಗಂಗಾಧರ್ ಸ್ವಾಮಿಯವರು ಮತ್ತು ಡಿಎಸ್-2 ಶ್ರೀ ರಮೇಶ್ ರವರು ಸಹ ಸಂಪೂರ್ಣವಾಗಿ ಸಹಕಾರ ನೀಡಲಿದ್ದಾರೆ. ಎಲ್ಲರ ಒಗ್ಗಟ್ಟಿನ ಶ್ರಮದ ಅವಶ್ಯಕತೆಯ ಬಗ್ಗೆ ಅಭಿವೃದ್ಧಿ ಅನುಭವದ ವಿಷಯಗಳನ್ನು ಹಂಚಿಕೆ ಮಾಡಿಕೊಳ್ಳಲಾಯಿತು.