11th December 2024
Share

 ಜಿ.ಎಸ್.ಬಸವರಾಜ್ ಹೊಸ ವರಸೆ

TUMAKURU:SHAKTHIPEETA FOUNDATION

ತುರ್ತು ದಿಶಾ ಸಮಿತಿ ತಪಾಸಣಾ ಸಭೆ’

ಗೆ.

ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ.

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ.

ಹಾಗೂ

ಸಿಇಓ ಜಿಲ್ಲಾ ಪಂಚಾಯತ್ ತುಮಕೂರು.

ಮಾನ್ಯರೇ.

 ವಿಷಯ: ವಿವಿಧ ಯೋಜನೆಗಳ ತಪಾಸಣೆ ಮಾಡುವ ಬಗ್ಗೆ.

  ನಾನು ಮತ್ತು ತಮ್ಮ ದಿಶಾ ಸಮಿತಿಯ ನಾಮನಿರ್ದೇಶನ ತಂಡ ವಿವಿಧ ಇಲಾಖೆಗಳಿಗೆ ಮೋದಲೇ ಸೂಚಿಸಿ ಅಥವಾ ಯಾವುದೇ ಸೂಚನೆ ನೀಡದೆ ಧಿಡೀರ್ ಆಗಿ ವಿವಿಧ ಇಲಾಖೆಗಳ ಕಾರ್ಯ ವೈಖರಿ ಬಗ್ಗೆ 2022 ರೊಳಗೆ 75 ತಪಾಸಣೆ’ ಸಭೆ ನಡೆಸಲು ಇಚ್ಚಿಸಿದ್ದೇವೆ ಎಂದು ತಿಳಸಿಸಲು ಹರ್ಷಿಸುತ್ತೇನೆ. ಇದು ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಅಭಿಲಾಷೆಯೂ ಆಗಿದೆ. ಅವರ 75 ನೇ ಸ್ವಾತಂತ್ರ್ಯ ದಿವಸ ಆಚರಣೆಯ ವೇಳೆಗೆ ತುಮಕೂರು ಜಿಲ್ಲಾ ದಿಶಾ ಸಮಿತಿ ನಂಬರ್ –1’ ಆಗಲೇ ಬೇಕಿದೆ.

 ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿದ ಕಾಲಮಿತಿ ಅವಧಿಯಲ್ಲಿ ಅಥವಾ 30  ದಿವಸದೊಳಗೆ ಕ್ರಮಕೈಗೊಳ್ಳುವುದು ನಿಯಮ, ಇದರ ಬಗ್ಗೆ ತಪಾಸಣೆಯನ್ನು ಯಾವಾಗ ಬೇಕಾದರೂ ಮಾಡಬಹುದಾಗಿದೆ. ಇಲಾಖೆಗಳು ದಿಶಾ ಸಮಿತಿಯ ಸಭೆವಾರು ಅನುಪಾಲನಾ ವರದಿಗಳ ಕಡತ ಸಿದ್ಧಪಡಿಸಿ, ತುಮಕೂರು ಎನ್.ಐ.ಸಿರವರ ಸಹಕಾರದೊಂದಿಗೆ, ತುಮಕೂರು ಸ್ಮಾಟ್ ಸಿಟಿಯ ಅಭಿವೃದ್ಧಿ ಇ-ಲೈಬ್ರರಿಯಲ್ಲಿ ಅಫ್ ಲೋಡ್ ಮಾಡಲು ಈಗಾಗಲೇ ಸೂಚಿಸಿದೆ ಹಾಗೂ ತುಮಕೂರು ಜಿಐಎಸ್ ಪೋರ್ಟಲ್‌ನಲ್ಲಿ ಜಿಐಎಸ್ ಲೇಯರ್ ಅಫ್ ಲೋಡ್ ಮಾಡಲು ಸೂಚಿಸಿದೆ.

 ’ತುಮಕೂರು ಡಾಟಾ ಡಿಸ್ಟ್ರಿಕ್-2022’ ಗೆ ಸಂಬಂಧ  ದಿನಾಂಕ : 15.02.2021  ರಂದು ಸಂಜೆ 4.00 ಗಂಟೆಗೆ ಸಂಸದರ ಗೃಹ ಕಚೇರಿಯಲ್ಲಿ ನಡೆದ ತುರ್ತು ದಿಶಾ ಸಮಿತಿ ಸಭೆಯ ಮತ್ತು  ದಿನಾಂಕ:10.03.2021 ರಂದು ತುಮಕೂರು ಐಸಿಸಿಯಲ್ಲಿ ನಡೆದ ನಗರ ಜಲಶಕ್ತಿ ಸಭೆಯ ಅನುಪಾಲನಾವರದಿಗಳೊಂದಿಗೆ ಹಾಜರಾಗಲು ವಿವಿಧ ಇಲಾಖೆಗಳಿಗೆ ಸೂಚಿಸುವುದು.

ಹಾಗೂ ಈ ಕೆಳಕಂಡ ಇಲಾಖೆಗಳ ಅಧಿಕಾರಿಗಳು ಮತ್ತು ನಾನು ಈಗ ಸೂಚಿಸಿರುವ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿರುವ ಮಾಹಿತಿಗಳೊಂದಿಗೆ ದಿನಾಂಕ:03.04.2021  ರಂದು ಬೆಳಿಗ್ಗೆ 10 ಗಂಟೆಗೆ’ ನಾನು ಮತ್ತು ನಾಮನಿರ್ದೇಶಿತ ದಿಶಾ ಸಮಿತಿಯ ಸದಸ್ಯರು ತಪಾಸಣೆ ಮಾಡಲಿದ್ದೇವೆ. ಆದ್ದರಿಂದ ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣ ಅಥವಾ ಖಾಲಿ ಇರುವ ಇತರೆ ಸ್ಥಳದಲ್ಲಿ ಕೆಳಕಂಡ ಇಲಾಖಾ ಅಧಿಕಾರಿಗಳು ಭಾಗವಹಿಸಲು ಸೂಚಿಸುವುದು.

 ’ಕೇಂದ್ರ ಸರ್ಕಾರದ ನೀತಿ ಆಯೋಗದ ಅಟಲ್ ಇನ್ನೋವೇಷನ್ ಮಿಷನ್ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ಡಾಟಾ ಸೈನ್ಸ್ ಪರಿಣಿತರಾದ ಶ್ರೀ ಡಾ.ಉದಯಶಂಕರ್ ಪುರಾಣಿಕ್‌ರವರ  ಸಲಹಾ ವರದಿಯೊಂದಿಗೆ ಸಭೆಗೆ ಆಹ್ವಾನಿಸುವುದು’

  1. ತುಮಕೂರು ಜಿಲ್ಲಾಧಿಕಾರಿಯವರನ್ನು ತಪಾಸಣಾ ಸಭೆಗೆ  ’ತುಮಕೂರು ಡಾಟಾ ಡಿಸ್ಟ್ರಿಕ್-2022’ ಅವರ ಪರಿಕಲ್ಪನೆ ವರದಿಯೊಂದಿಗೆ ಆಹ್ವಾನಿಸುವುದು.
  2. ತುಮಕೂರು ಎಸ್‌ಪಿಯವರನ್ನು ತಪಾಸಣಾ ಸಭೆಗೆ ತುಮಕೂರು ನಗರ ಮತ್ತು ತುಮಕೂರು ಜಿಲ್ಲೆಯ ಪೋಲೀಸ್ ಬೀಟ್‌ಗಳ ಜಿಐಎಸ್ ಆಧಾರಿತ ಸಾಪ್ಟ್ ಕಾಫಿಯೊಂದಿಗೆ ಆಹ್ವಾನಿಸುವುದು.
  3. ತುಮಕೂರು ಜಿಲ್ಲಾ ಪಂಚಾಯತ್ ದಿಶಾ ವಿಂಗ್- ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಈಗಾಗಲೇ ಘೋಷಣೆ ಮಾಡಿರುವ ‘2022ರ ಸ್ಟ್ರಾಟಜಿ @ 75 ಇಯರಸ್ಸ್ ‘ ಅಂಗವಾಗಿ 2014  ರಿಂದು 2024  ರವರೆಗೆ ಘೋಷಣೆ ಮಾಡಿರುವ ವಿವಿಧ ಇಲಾಖೆಗಳ ಕಾಲ ಮಿತಿ ಯೋಜನೆಗಳ ಪಟ್ಟಿ ಸಿದ್ಧಪಡಿಸಿಕೊಂಡು ಸಭೆಗೆ ಹಾಜರಾಗುವುದು.
  4. ತುಮಕೂರು ನಗರಾಭಿವೃದ್ಧಿಕಾರ ಪ್ರಾಧಿಕಾರ- ಜಿಐಎಸ್ ಮಾಸ್ಟರ್ ಪ್ಲಾನ್‌ಗೆ ಈಗಾಗಲೇ ಸಿದ್ಧಪಡಿಸಿರುವ ಮಾಹಿತಿಯೊಂದಿಗೆ ಹಾಜರಾಗುವುದು.
  5. ಎನ್.ಐ.ಸಿ ತುಮಕೂರು- ಪಾಲನಾವರದಿ ಜೊತೆಗೆ ತುಮಕೂರು ಜಿಲ್ಲೆಯಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಡೇಟಾ ಬೇಸ್ ಸಲಹಾಗಾರರನ್ನು ಸಭೆಗೆ ಆಹ್ವಾನಿಸಲು ಕ್ರಮಕೈಗೊಳ್ಳುವುದು.
  6. ಜಿಲ್ಲಾ ನಗರಾಭಿವೃದ್ಧಿ ಕೋಶ-ಅನುಪಾಲನಾ ವರದಿ.
  7. ತುಮಕೂರು ಮಹಾನಗಪಾಲಿಕೆ- ಅನುಪಾಲನಾ ವರದಿ. 2 ಕೋಟಿ ವೆಚ್ಚದಲ್ಲಿ ಮಾಡಿರುವ ಜಿಐಎಸ್ ಆಧಾರಿತ ಸಮೀಕ್ಷೆ ಮಾಹಿತಿ, ಇದೂವರೆಗೂ ಇರುವ ಡಿಜಿಟಲ್ ಸಿಸ್ಟಂ ಮಾಹಿತಿಗಳೊಂದಿಗೆ ಹಾಜರಾಗುವುದು.
  8. ತುಮಕೂರು ಸ್ಮಾರ್ಟ್ ಸಿಟಿ- ಅನುಪಾಲನಾ ವರದಿ, ಜಿಐಎಸ್ ಆಧಾರಿತ ನಡೆದ ಪ್ರತಿ ಶುಕ್ರವಾರಗಳಂದು ನಡೆದ ಸರಣೆ ಸಭೆಗಳ ಮಾಹಿತಿ. ಇ-ಲೈಬ್ರರಿ, ಐಸಿಸಿಸಿಗೆ ಸಂಭಂಧಿಸಿದ ಎಲ್ಲಾ ಮಾಹಿತಿಗಳ ಕಡತದೊಂದಿಗೆ ಹಾಜರಾಗುವುದು. 
  9. ಎನ್.ಆರ.ಡಿ.ಎಂಎಸ್. ತುಮಕೂರು- ಅನುಪಾಲನಾ ವರದಿ.
  10. ಕೆಂ.ಡಿ.ಎಸ್. ಬೆಂಗಳೂರು ಪ್ರತಿನಿಧಿ. ತುಮಕೂರು ಜಿಲ್ಲೆಯಲ್ಲಿ ಕೈಗೊಳ್ಳಲು ಉದ್ದೇಶಿರುವ ಯೋಜನೆಗಳ ಮಾಹಿತಿ.
  11. ಕರ್ನಾಟಕ ರಿಮೋಟ್ ಸೆನ್ಸಿಂಗ್ ಪ್ರತಿನಿಧಿ. ಬೆಂಗಳೂರು- ತುಮಕೂರು ಜಿಐಎಸ್ ಮಾಹಿತಿ ಮತ್ತು ತಮ್ಮ ಇಲಾಖೆಯ ಪ್ರತಿನಿಧಿಗಳು ಒಂದು ವರ್ಷ ತುಮಕೂರಿನಲ್ಲಿ ಇದ್ದುಕೊಂಡು ಕೆಲಸ ನಿರ್ವಹಿಸಲು ಸಾಧ್ಯವೇ ಎಂಬ ಬಗ್ಗೆ ಲಿಖಿತ ಮಾಹಿತಿಯೊಂದಿಗೆ ಆಗಮಿಸುವುದು.
  12. ಕೆಐಡಿಬಿ ತುಮಕೂರು- ಏರ್ ಪೋರ್ಟ್ ಮತ್ತು ವಸಂತಾನರಸಾಪುರ, ನಿಮ್ಜ್/ಕೈಗಾರಿಕಾ ಕಾರಿಡಾರ್ ಪ್ರದೇಶಗಳ ಸಾಪ್ಟ್ ಕಾಫಿಯೊಂದಿಗೆ, ಸರ್ಕಾರಿ ಜಮಿನುಗಳ ಮಾಹಿತಿಯೊಂದಿಗೆ ಬರುವುದು.
  13. ಕಾವೇರಿ ನೀರಾವರಿ ನಿಗಮ – ಉದ್ದೇಶಿತ ಬಫರ್ ಡ್ಯಾಂ ನಿರ್ಮಾಣ ಪ್ರದೇಶದ ನಕ್ಷೆಯೊಂದಿಗೆ ಸಭೆಗೆ ಹಾಜರಾಗುವುದು.
  14. ನಗರ ನೀರು ಒಳಚರಂಡಿ ಮಂಡಳಿ ಇದೂವರೆಗೂ ತುಮಕೂರು ನಗರದಲ್ಲಿ ಕೈಗೊಂಡಿರುವ ಎಲ್ಲಾ ಸಮೀಕ್ಷೆಗಳ ಸಾಪ್ಟ್ ಕಾಫಿಯೊಂದಿಗೆ ಹಾಜರಾಗುವುದು.
  15. ಜಿಲ್ಲಾ ಪಂಚಾಯತ್ ತುಮಕೂರು- ಈ ವರೆಗೂ ನಡೆದಿರುವ ಎಲ್ಲಾ ದಿಶಾ ಸಭೆಗಳಲ್ಲಿ ಚರ್ಚಿಸಿರುವ ಜಿಐಎಸ್ ಲೇಯರ್‌ಗಳ ಕ್ರೋಡೀಕೃತ ಅನುಪಾಲನಾ ವರದಿ ಮಾಹಿತಿ ಮತ್ತು ವಿವಿಧ ಇಲಾಖೆಗಳೊಂದಿಗೆ ನಡೆಸಿದ್ದ ಸರಣೆ ಸಭೆಗಳ ವರದಿ,  ಅಭಿವೃದ್ಧಿ ವಾರ್ ರೂಂ ಅರಂಭಿಸುವ ಬಗ್ಗೆ ಕೈಗೊಂಡಿರುವ ಮಾಹಿತಿಗಳೊಂದಿಗೆ ಹಾಜರಾಗುವುದು.
  16. ಇಇ ಜಿಲ್ಲಾ ಪಂಚಾಯತ್ ತುಮಕೂರು- ಜಿಲ್ಲಾ ಪಂಚಾಯತ್ ಕಚೇರಿ ನಕ್ಷೆಯೊಂದಿಗೆ ಹಾಜರಾಗುವುದು.
  17. ಇಇ ಪಿಎಂಜಿಎಸ್‌ವೈ – ತುಮಕೂರು ಜಿಲ್ಲಾ ಕೋರ್ ಮ್ಯಾಪ್ ಸಾಪ್ಟ್ ಕಾಫಿಯೊಂದಿಗೆ ಹಾಜರಾಗುವುದು.
  18. ಲೋಕೊಪಯೋಗಿ ಇಲಾಖೆ ಇಇ ರವರು ರೇಡಿಯಲ್ ರೋಡ್‌ಗಳ ಮಾಹಿತಿಯೊಂದಿಗೆ ಹಾಜರಾಗುವುದು.
  19. ಅಂಕಿ ಅಂಶಗಳ ಇಲಾಖೆಯ ಅಧಿಕಾರಿಗಳು ಜಿಐಎಸ್ ಆಧಾರಿತ ಡಿಜಿಟಲ್ ಅಂಕಿ ಅಂಶಗಳ ವರದಿ ಬಿಡುಗಡೆ ಮಾಡುವ ಬಗ್ಗೆ ಲಿಖಿತ ವರದಿಗಳೊಂದಿಗೆ ಹಾಜರಾಗುವುದು.
  20. ಅರಣ್ಯ ಇಲಾಖೆಯವರು ವೃಕ್ಷಪ್ರಾಧಿಕಾರದ ಬಗ್ಗೆ ಮತ್ತು ಡಿಜಿಟಲ್ ಮರಗಳ ಗಣತಿ ಮಾಹಿತಿಯೊಂದಿಗೆ ಹಾಜರಾಗುವುದು.
  21. ಸಂಸದರ ಆದರ್ಶ ಯೋಜನೆಯ ಐದು ಗ್ರಾಮಪಂಚಾಯಿತಿಗಳ ಪಿಡಿಓ ಮತ್ತು ನೋಡೆಲ್ ಅಧಿಕಾರಿಗಳು ಕೈಗೊಂಡ ಕ್ರಮಗಳ ವರದಿಯೊಂದಿಗೆ ಹಾಜರಾಗುವುದು.
  22. ರುರ್ಬನ್ ಯೋಜನೆಯ ನೋಡೆಲ್ ಅಧಿಕಾರಿ ಕೈಗೊಳ್ಳುವ ರೋಡ್ ಮ್ಯಾಪ್‌ನೊಂದಿಗೆ ಸಭೆಗೆ ಹಾಜರಾಗಲು ಸೂಚಿಸುವುದು.
  23. ಇಇ ಗ್ರಾಮಾಂತರ ಕುಡಿಯುವ ನೀರು ವಿಭಾಗ ಜಿಲ್ಲಾ ಪಂಚಾಯತ್ ತುಮಕೂರು ಇವರು ಜಲಜೀವನ್ ಮಿಷನ್ ಯೋಜನೆಯಡಿ ಪಾನಿ ಸಮಿತಿಗಳನ್ನು ರಚಿಸುವ ಹಿನ್ನಲೆಯಲ್ಲಿ 330 ಗ್ರಾಮ ಪಂಚಾಯಿತ್ ಪಿಡಿಓ ಗಳು ಕುಡಿಯುವ ನೀರಿನ ಜಿಐಎಸ್ ಆಧಾರಿತ ನಕ್ಷೆ ಮತ್ತು ವಾಟರ್ ಬಾಡಿಗಳು, ಕರಾಬುಹಳ್ಳಗಳ ನಕ್ಷೆಯೊಂದಿಗೆ ಸಭೆ ಕರೆಯುವ ಮಾಹಿತಿ ಗಳೊಂದಿಗೆ ಸಭೆಗೆ ಹಾಜರಾಗುವುದು.
  24. ತುಮಕೂರು ನಗರದಲ್ಲಿ ಗ್ಯಾಸ್ ಪೈಪ್ ನಕ್ಷೆಯೊಂದಿಗೆ ಹಾಜರಾಗಲು ಎಜೆನ್ಸಿಯವರಿಗೆ ಸೂಚಿಸುವುದು.
  25. ಸ್ಪೆಕ್ಟ್ರಾ ಅಸೋಯೇಟ್ಸ್ ತುಮಕೂರು ಮತ್ತು ಅವರ ತಂಡದವರು ಈಗಾಗಲೇ ತುಮಕೂರಿನಲ್ಲಿ ಕೈಗೊಂಡಿರುವ ಜಿಐಎಸ್ ಆಧಾರಿತ ವಿವಿಧ ಯೋಜನೆಗಳ ಮಾಹಿತಿಗಳ ವರದಿಯೊಂದಿಗೆ  ಹಾಜರಾಗಲು ಸೂಚಿಸುವುದು..

ವಂದನೆಗಳೊಂದಿಗೆ                                                   ತಮ್ಮ ವಿಶ್ವಾಸಿ

                                                                                     (ಜಿ.ಎಸ್.ಬಸವರಾಜ್)