22nd May 2024
Share

TUMAKURU:SHAKTHIPEETA FOUNDATION

 ಯಾವುದೇ ಇಲಾಖೆಗಳಿಗೂ ಹೋದರೂ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಬಿಲ್ ಸೃಷ್ಠಿಯಲ್ಲಿ ಬ್ಯುಸಿ ಯಾಗಿರುವುದು ಸರ್ವೇ ಸಾಮಾನ್ಯ. ಅದೇ ರೀತಿ ಏಫ್ರಿಲ್ – ಮೇ ತಿಂಗಳಲ್ಲಿ ಬಡ್ಜೆಟ್ ಇನ್ನೂ ಮಂಜೂರಾಗಿಲ್ಲ ಎಂಬ ನೆಪವೊಡ್ಡಿ ಯಾವುದೇ ತಲೆನೋವಿನ ಕೆಲಸ ಇಲ್ಲದೆ ಆರಾಮವಾಗಿರುವುದು ಇದೂವರೆಗೂ ಬಂದಿರುವ  ವಾಡಿಕೆ.

 ಇದನ್ನು ಗಮನಿಸಿದ ನಮ್ಮ ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಫೆಬ್ರವರಿಯಲ್ಲಿಯೇ ಆಯವ್ಯಯ ಮಂಡಿಸಿ, ಏಫ್ರಿಲ್ ಮೊದಲ ವಾರದೊಳಗೆ ಎಲ್ಲಾ ಇಲಾಖೆಗಳಿಗೂ ಹಣ ಹಂಚಿಕೆ ಮಾಡಿ ಕೆಲಸಗಳು ಆರಂಭಿಸಬೇಕು ಎಂಬ ಹೊಸ ಇತಿಹಾಸ ಸೃಷ್ಠಿಸಲು ಪ್ರಯತ್ನ ಮಾಡಿದರೂ ಯಾವುದೇ ಬದಲಾವಣೆ ಕಂಡು ಬಂದಿಲ್ಲ.

 ಅದೇನೆ ಇರಲಿ ಸಂಸದ ಶ್ರೀ ಜಿ.ಎಸ್.ಬಸವರಾಜ್ ಅಧ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ, ಪ್ರಧಾನಿಯವರ ಪರಿಕಲ್ಪನೆಯಂತೆ ಅವರು ಹೇಳುವ, ನಿಯಮ ರೂಪಿಸಿರುವ ಎಲ್ಲಾ ಯೋಜನೆಗಳ ಡಾಟಾ ಸಂಗ್ರಹಕ್ಕಾಗಿ 2022 ಅಂದರೆ 75 ನೇ ಸ್ವತಂತ್ರ್ಯ ದಿವಸದ ವೇಳೆಗೆ ಪೂರ್ಣಗೊಳಿಸಲು ಕರಾರುವಕ್ಕಾದ, ನಿರ್ಧಿಷ್ಠ ಗುರಿಹಾಕಿಕೊಂಡಿದ್ದಾರೆ.

‘ಇದು ಉಢಾಫೆಯಲ್ಲ, ಸಭೆ ನಡವಳಿಕೆಗೆ ಸೀಮಿತವಲ್ಲ, ಮೀಟಿಂಗ್ ಮುಗಿದರೇ ಸಾಕು ತಲೆ ತಪ್ಪಿಸಿಕೊಂಡೆವು ಎನ್ನುವ ಹಾಗಿಲ್ಲ. ಸಂಸದರ ಅವಧಿಯ ದಿಶಾ ಮೊದಲ ಸಭೆ ನಡೆದಿದ್ದು ದಿನಾಂಕ:21.09.2019 ರಂದು. ಇಲ್ಲಿಯವರೆಗೂ ಸುಮಾರು 7 ಸಭೆಗಳು ಹಾಗೂ ಎರಡು ವಿಷಯವಾರು ಸಭೆಗಳ ನಡವಳಿಕೆ ಆಗಿವೆ. ಮೊದಲು ನಡೆದ ಹಲವಾರು ಸಭೆಗಳ ನಡವಳಿಕೆ ದಾಖಾಲಾಗಿಲ್ಲ.’

 ದಿನಾಂಕ:21.09.2021 ಎರಡು ವರ್ಷ ಪೂರೈಸುವ ವೇಳೆಗೆ ತುಮಕೂರು ಜಿಲ್ಲೆಯನ್ನು ಜಿಐಎಸ್ ಲೇಯರ್ ಸಹಿತ, ಡಾಟಾ ಜಿಲ್ಲೆಯಾಗಿ ಸಜ್ಜುಗೊಳಿಸುವುದು  ಸಂಸದರ ಮತ್ತು ದಿಶಾ ತಂಡದ ಗುರಿ. ಇಲ್ಲಿಯವರೆಗೂ ಜಿಐಎಸ್ ಲೇಯರ್ ಪಾಠ ಮಾಡಲಾಗಿದೆ. ಅಧಿಕಾರಿಗಳು ಹೇಳಿರುವಂತೆಯೇ ಕಾಲಮಿತಿ ನಿಗದಿಗೊಳಿಸಲಾಗಿದೆ.

ಈಗ 2021 ಏಫ್ರಿಲ್ – ಮೇ ತಿಂಗಳು ತುಮಕೂರು ಜಿಲ್ಲೆಯ ಎಲ್ಲಾ ಇಲಾಖೆಗಳ ಪಾಲಿಗೆ ಜಿಐಎಸ್ ಲೇಯರ್ ಬ್ಯುಸಿ ತಿಂಗಳುಗಳಾಗಿವೆ, ಎಲ್ಲರೂ ವಿವಿಧ ಕಾರಣಗಳನ್ನು ನೀಡಿ ಮುಂದಕ್ಕೆ ಹಾಕಿದ್ದಾರೆ. ಸಂಸದರು ಸಾಕಷ್ಟು ಸಮಯಾವಕಾಶ ನೀಡಿದ್ದಾರೆ’

 ಜಿಲ್ಲಾಧಿಕಾರಿಗಳು ಮತ್ತು ಸಿಇಓ ಹಾಗೂ ಜಿಲ್ಲಾ ಪಂಚಾಯತ್ ಪಿಡಿಯವರು ಬದಲಾವಣೆ ಆಗಿರುವುದು ಸ್ವಲ್ಪ ಹಿನ್ನಡೆಯಾಗಬಹುದು ಎಂಬ ಭಾವನೆ ಇದ್ದರೂ, ಅಧಿಕಾರಿಗಳು ಮಾತಿಗೆ ತಪ್ಪುವ ಹಾಗಿಲ್ಲ. ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್, ತುಮಕೂರು ಜಿಐಎಸ್ ಲೇಯರ್ ಮಾಡಲು ಪ್ರತ್ಯೇಕ ಪೋರ್ಟಲ್ ಮಾಡಿದೆ. ಎನ್.ಐ. ಸಿ. ತುಮಕೂರು ದಿಶಾ ಡ್ಯಾಷ್ ಬೋರ್ಡ್ ಮತ್ತು ದಿಶಾ ಸಾಪ್ಟ್‌ವೇರ್ ಮಾಡುವ ಕೆಲಸವನ್ನು ಅಂತಿಮಗೊಳಿಸುವತ್ತಾ ಸಾಗಿದೆ.

 ’ವರ್ಗಾವಣೆಯಾದ ಜಿಲ್ಲಾಧಿಕಾರಿ ಶ್ರೀ ರಾಕೇಶ್ ಕುಮಾರ್ ರವರು ಮತ್ತು ಸಿಇಓ ಶ್ರೀ ಮತಿ ಶುಭ ಕಲ್ಯಾಣ್ ರವರು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದರು. ನಂತರ ಬಂದ ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್‌ರವರು ಮತ್ತು ಸಿಓ ಆಗಿದ್ದ ಶ್ರೀ ಗಂಗಾಧರ್ ಸ್ವಾಮಿಯವರು ಕಳೆದ ದಿಶಾ ಸಭೆಯಲ್ಲಿ ಕೆಲಸವನ್ನು ಕಾಲ ಮಿತಿಯಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಈಗ ಸಿಇಓ ಬದಲಾವಣೆಯಾಗಿದ್ದಾರೆ. ಹೊಸಬರು ಮತ್ತೆ ಎರಡು ವರ್ಷದ ದಿಶಾ ಸಭೆ ನಡವಳಿಕೆ ಓದಿ ಅರ್ಥ ಮಾಡಿಕೊಳ್ಳಬೇಕಿದೆ. ಯಾರೇ ಬಂದರೂ ಅರ್ಥ ಮಾಡಿಕೊಳ್ಳುವ ಭರವಸೆಯಿದೆ.’ ಈ ವರ್ಗಾವಣೆ ಸ್ವಲ್ಪ ಅಡ್ಡಬರಲಿದೆ.

 ತುಮಕೂರು ಸಂಸದರ ವೆಬ್‌ಸೈಟ್ ಆರಂಭಿಸಿ ಪ್ರತಿಯೊಂದು ವಿಷಯವನ್ನು ಡಿಜಿಟಲ್ ದಾಖಲು ಮಾಡುವ ಕೆಲಸಕ್ಕೆ ಚಾಲನೇ ನೀಡಲಾಗಿದೆ. ಎರಡು ಇಲಾಖೆಗಳು ತುಮಕೂರು ಜಿಲ್ಲೆಯಲ್ಲಿರುವ ಪ್ರತಿಯೊಂದು ಇಲಾಖೆಗೂ ಒಂದೊಂದು ಪಾಸ್‌ವರ್ಡ್’ ನೀಡಲಿವೆ, ಪಾಸ್‌ವರ್ಡ್ ನೀಡಿದ ನಂತರ ತಮ್ಮ ಇಲಾಖೆಯ ಅಡಿಯಲ್ಲಿ ಪ್ರತಿಯೊಂದು ಜಿಐಎಸ್ ಲೇಯರ್ ಮಾಹಿತಿ ಹಾಗೂ ಪ್ರತಿಯೊಂದು ಯೋಜನೆಗಳ ಮಾಹಿತಿಯನ್ನು ಅಫ್‌ಲೋಡ್ ಮಾಡಲೇ ಬೇಕು ಎಂಬ ವಾತವಾರಣ ತಂತಾನೆ’ ಸೃಷ್ಠಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

 ದಿಶಾ ತಂಡದ ಸದಸ್ಯರು ಮನೆಯಲ್ಲಿಯೇ ಕುಳಿತು ಯಾರು ಏನು ಮಾಡಬೇಕಾಗಿತ್ತು, ಏನು ಮಾಡಿಲ್ಲ ಎಂಬ ಕಾಮೆಂಟ್ ಮಾಡಲು ಆರಂಭಿಸಲು ತುದಿಗಾಲಲ್ಲಿ’ ನಿಂತಿದ್ದಾರೆ. ಎಲ್ಲದಕ್ಕೂ ಮಾರ್ಚ್ ತಿಂಗಳು ಕಾಲಮಿತಿಯಾಗಿತ್ತು. ಈಗ ಹೇಳಲು ಯಾವುದೂ ಸಮಯ ಉಳಿದಿಲ್ಲ. ಏಕೆಂದರೆ ಒಂದೂವರೆ ವರ್ಷದಿಂದಲೂ ಜಿಐಎಸ್ ಲೇಯರ್/ಡಾಟಾ ಹರಿಕಥೆ ನಡೆಯುತ್ತಲೇ ಬಂದಿದೆ. 9 ಸಭೆಗಳಲ್ಲಿಯೂ ಸಭೆ ನಡವಳಿಕೆಯಾಗಿದೆ.

 ಉತ್ತಮ ಕೆಲಸ ಮಾಡಿದವರಿಗೆ ದಿಶಾ ಅವಾರ್ಡ್’ ಕೊಡಲು ಭರದ ಸಿದ್ಧತೆ ನಡೆದಿದೆ. ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿ ನಿಯಮ ಪ್ರಕಾರ 30 ದಿವಸದೊಳಗಾಗಿ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆಯೂ ದೆಹಲಿಗೆ ಹೋಗಿ  ದಿಶಾ ಮಾರ್ಗದರ್ಶಿ ಸೂತ್ರ ರಚನೆ ಮಾಡಿದವರೊಂದಿಗೆ ಸಮಾಲೋಚನೆಯನ್ನು ಮಾಡಿಕೊಂಡು ಬರಲಾಗಿದೆ.

ದಿಶಾ ಸಭೆಗಳ ಜೊತೆಗೆ ಸಂಸದರು ತಪಾಸಣೆ ಸಭೆ ಮಾಡುವ ಕೆಲಸಕ್ಕೂ ಹಾಕಿದ್ದಾರೆ, ಈ ಸಭೆಯಲ್ಲಿ ದಿಶಾ ಸಭೆಗಳ ನಿರ್ಣಯ, ನಿರ್ಣಯದ ಮೇರೆಗೆ ಸೃಷ್ಠಿಸಿರುವ ಕಡತಗಳ ಪ್ರಗತಿಪರಿಶೀಲನೆ ನಡೆಯಲಿದೆ. ಎಷ್ಟು ದಿವಸ ಯಾವ ಅಧಿಕಾರಿ ಬಳಿ ಕಡತ ಬಾಕಿ ಇದೆ, ಏಕೆ ಬಾಕಿ ಇದೆ, ಎಂಬ ವಿಚಾರಗಳು ವಿಷಯವಾರು ಡಿಜಿಟಲ್ ದಾಖಲೆ ಆಗಲಿವೆ. ಇದು ದಿಶಾ ಸಮಿತಿಯ ಕೆಲಸವೂ ಆಗಿದೆ.

ಪ್ರಧಾನಿಯವರಿಂದ ಪ್ರೇರಣೆಯಾಗಿ ಸಂಸದರು 75 ನೇ ವರ್ಷದ ಸ್ವತಂತ್ರ್ಯ ದಿನದ ಅಂಗವಾಗಿ ಪ್ರತಿ ಶುಕ್ರವಾರ’ ಒಂದು ವೇಳೆ ಬದಲಾದರೂ ನಂತರದ ದಿನ ಸೇರಿದಂತೆ ವಿವಿಧ ರೀತಿಯ 75 ಸಭೆ’ಗಳನ್ನು ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಮೊದಲ ಸಭೆ ದಿನಾಂಕ:09.04.2021  ರಂದು ಆರಂಭವಾಗಲಿದೆ. ಇವೆಲ್ಲಾ ಡಾಟಾ ಸಭೆಗಳಾಗಲಿವೆ, ಪ್ರಧಾನಿಯವರು 2019 ರಿಂದ 2024 ರೊಳಗೆ ಕಾಲ ಮಿತಿ ಹಾಕಿಕೊಂಡು ಘೋಷಣೆ ಮಾಡಿರುವ ಯೋಜನೆಗಳ ಪೂರ್ಣಗೊಳಿಸುವ ಸಭೆಗಳಾಗಲಿವೆ.

  ವಿವಿಧ ಸಭೆಗಳ ವಿಡಿಯೋ ಸಹ ವೆಬ್ ಪೋರ್ಟಲ್‌ನಲ್ಲಿ ಅಫ್‌ಲೋಡ್’  ಆಗಲಿವೆ, ಅಧಿಕಾರಿಗಳು ಹೇಳುವ ಕಾಲಮಿತಿಯನ್ನು ಸಾರ್ವಜನಿಕರಿಗೂ ವೀಕ್ಷಣೆ ಮಾಡಲು ವಿಡಿಯೋ ಅಫ್‌ಲೋಡ್ ಮಾಡುವ ಗುರಿಹೊಂದಲಾಗಿದೆ. ವಿವಿಧ ಇಲಾಖೆಯ ಅಧಿಕಾರಿಗಳೇ ಇಷ್ಟು ದಿವಸದೊಳಗೆ ಈ ಕೆಲಸ ಮಾಡುತ್ತೇವೆ ಎಂದು ಡಿಜಿಟಲ್ ದಾಖಲೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

 ’ಎಷ್ಟು ದಿವಸ ಸುಳ್ಳು ಹೇಳಲು ಸಾದ್ಯಾ? ಇವರು ಅಭಿವೃದ್ಧಿ ಬೇತಾಳುಗಳು ಎಂಬ ಭಾವನೆ ಈಗಾಗಲೇ ಅಧಿಕಾರಿಗಳಿಗೆ ಬಂದಾಗಿದೆ’ ದಾಖಲೆಯ ಪ್ರಕಾರ 80 ವರ್ಷ ಪೂರೈಸುವ ಸಂಸದರಿಗೆ, ಈ ಇಳಿ ವಯಸ್ಸಿನಲ್ಲಿ ಅವರ ಗುರಿ ಮೋದಿಯವರು ಹೇಳಿದ ಹಾಗೆ ಕೆಲಸ ಮಾಡಲು ಎಷ್ಟು ಕಷ್ಟ’ ಎಂಬ ಒಂದು ಅಭಿವೃದ್ಧಿ ಡೈರಿ ಪ್ರಕಟಿಸ ಬೇಕಂತೆ.

  ಆದ್ದರಿಂದಲೇ ಎಲ್ಲವೂ ಡಿಜಿಟಲ್ ಮಯ, ಡಿಜಿಟಲ್ ಇಂಡಿಯಾ ಅನುಷ್ಠಾನಕ್ಕೆ ಭದ್ರಾ ಬುನಾದಿ, ಇಲ್ಲಿ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ’ ಎದ್ದು ಕಾಣಲಿದೆ. ನನ್ನ ಪ್ರಕಾರ ಎಲ್ಲಾ ಇಲಾಖೆಯ ಅಧಿಕಾರಿಗಳು ಸಹ ಅಭಿವೃದ್ಧಿ ಅವಾರ್ಡ್ ಪಡೆಯಲು ಉತ್ಸುಕರಾಗಿದ್ದಾರೆ.

ತುಮಕೂರು ಜಿಲ್ಲೆಯ ಮಟ್ಟಿಗೆ ಇದೊಂದು ಅಭಿವೃದ್ಧಿ ದಿಶಾ ಅವಾರ್ಡ್ ಪರ್ವ ಆಗುವ ಲಕ್ಷಣಗಳು ಎದ್ದು ಕಾಣಲಿವೆ. ಯಾವೊಬ್ಬ ಅಧಿಕಾರಿಗಳ ಮೇಲೂ ಕಾನೂನು ರೀತಿಯ ಕ್ರಮಕ್ಕೆ ಆಸ್ಪದ ಬರಲಾರದು ಎಂಬ ನಂಬಿಕೆ ನನಗಿದೆ.’