22nd December 2024
Share

TUMAKURU:SHAKTHIPEETA CAMPUS

ಕರ್ನಾಟಕ ರಾಜ್ಯದಲ್ಲಿ 31 ಜಿಲ್ಲೆಗಳಾಗಿವೆ. ಭಾರತ ದೇಶದಲ್ಲಿ 28 ರಾಜ್ಯಗಳು ಮತ್ತು 9ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 37 ರಾಜ್ಯಗಳಿವೆ ಎಂಬ ಭಾವನೆಯಿಂದ 37 ಕಟ್ಟಡಗಳನ್ನು ನಿರ್ಮಾಣ ಮಾಡಿ, ಒಂದು ರಾಜ್ಯ ಮತ್ತು ಒಂದು ಜಿಲ್ಲೆಗೆ ಒಂದು ಕಟ್ಟಡವನ್ನು ನಿಗದಿಗೊಳಿಸಲಾಗಿದೆ.

ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ದೇಶದ ಜಲಶಕ್ತಿ ಯೋಜನೆಗಳು ಮತ್ತು ಕೇಂದ್ರ ಸರ್ಕಾರದಿಂದ ನೀಡುವ ಅನುದಾನದ ಯೋಜನೆಗಳ ಬಗ್ಗೆ ಅಧ್ಯಯನ ಮಾಡಲು ಚಿಂತನೆ ನಡೆಸಿದೆ. ಇದೇ ರೀತಿ ಕರ್ನಾಟಕ ರಾಜ್ಯದಲ್ಲಿರುವ 28 ಜನ ಲೋಕಸಭಾ ಸದಸ್ಯರು, 12 ಜನ ರಾಜ್ಯ ಸಭಾ ಸದಸ್ಯರು, 225 ಜನ ವಿಧಾನಸಭಾ ಸದಸ್ಯರು, 75 ಜನ ಪರಿಷತ್ ಸದಸ್ಯರು ಮತ್ತು ಇಬ್ಬರು ದೆಹಲಿ ಪ್ರತಿನಿಧಿಗಳು ಸೇರಿದಂತೆ 342 ಜನರು ಅವರವರ ಕ್ಷೇತ್ರದಲ್ಲಿ ಏನು ಮಾಡಬೇಕು? ಏನು ಮಾಡುತ್ತಿದ್ದಾರೆ ಎಂಬ ಅವಲೋಕನ ಮಾಡಲು ಗುರಿಹೊಂದಲಾಗಿದೆ.

ಈ ಹಿನ್ನಲೆಯಲ್ಲಿ ಕ್ಯಾಂಪಸ್‌ನಲ್ಲಿ ನಿರ್ಮಾಣ ಮಾಡಲು ಉದ್ದೇಶಿರುವ 37 ಕಟ್ಟಡದಲ್ಲಿ ಕನಿಷ್ಟ 342 ಸುಸಜ್ಜಿತವಾದ ಕೊಠಡಿಗಳನ್ನು ನಿರ್ಮಾಣ ಮಾಡಿ, ಒಂದೊಂದು ಕ್ಷೇತ್ರಕ್ಕೂ ಒಂದೊಂದು ಕೊಠಡಿಗಳನ್ನು ನಿಗದಿಗೊಳಿಸಲು ಉದ್ದೇಶಿಸಿದೆ. ಈ ಕೊಠಡಿಗಳಲ್ಲಿ ರಾಜ್ಯದ ಸುಮಾರು 342 ಜಾತಿಗಳಲ್ಲಿ ಕನಿಷ್ಠ ಒಬ್ಬೊಬ್ಬರನ್ನು ಆಯ್ಕೆ ಮಾಡಿ ಅವರಿಗೆ ದೇಶದ ಎಲ್ಲಾ ಭಾಷೆಗಳ, ಸೋಶಿಯಲ್ ಮೀಡಿಯ ಮತ್ತು ಅಧ್ಯಯನದ ರೀತಿ ಬಗ್ಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ.

 ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ ಒಬ್ಬರಾದರೂ ಅಭ್ಯರ್ಥಿಗಳು ಇರಬೇಕು ಎಂಬುದು ನಮ್ಮ ಸಂಸ್ಥೆಯ ಕನಸು. ರಾಜ್ಯ ಸರ್ಕಾರಕ್ಕೆ ನಮ್ಮ ಸಂಸ್ಥೆಯ ಸಲಹೆ ಒಬ್ಬೊಬ್ಬ ಜನಪ್ರತಿನಿಧಿಗಳಿಗೂ ಒಬ್ಬೊಬ್ಬ ಅಭಿವೃದ್ಧಿ ಸಲಹಾಗರರನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಿ, ಅವರು ಈ ಕ್ಯಾಂಪಸ್‌ನಲ್ಲಿ ಉಳಿದುಕೊಂಡು ರಾಜ್ಯದ ಅಭಿವೃದ್ಧಿ ಚಿಂತನೆಗಳ ಬಗ್ಗೆ ಅಧ್ಯಯನ ನಡೆಸಲಿ ಎಂಬುದಾಗಿದೆ.

ಕರ್ನಾಟಕ ರಾಜ್ಯ ದೇಶದಲ್ಲಿಯೇ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಬೇಕಾದರೇ, ಕೇಂದ್ರ ಸರ್ಕಾರದ ಯಾವ ಇಲಾಖೆ ಅಡಿಯಲ್ಲಿ, ಯಾವ ಯೋಜನೆಯಡಿಯಲ್ಲಿ, ಎಷ್ಟು ಅನುದಾನವನ್ನು ಯಾವ ವಿಧಾನಸಭಾ ಕ್ಷೇತ್ರಕ್ಕೆ ಪಡೆಯ ಬಹುದು ಎಂಬ ಅದ್ಯಯನ ಅಗತ್ಯ ಎಂಬುದು ನಮ್ಮ ಸಂಸ್ಥೆಯ ಚಿಂತನೆ.

ರಾಜ್ಯದಲ್ಲಿರುವ ಮತ್ತು ಕೇಂದ್ರ ಸರ್ಕಾರದ ನದಿ ಜೋಡಣೆಯಲ್ಲಿ ದೊರಕುವ ಒಂದು ಹನಿ ನದಿ ನೀರಿನಲ್ಲೂ    ಸಾಮಾಜಿಕ ನ್ಯಾಯದಡಿ ರಾಜ್ಯದ 29340 ಗ್ರಾಮಗಳಿಗೂ ಹಂಚಿಕೆ ಆಗಬೇಕಾದಲ್ಲಿ  ಗ್ರಾಮ ಮಟ್ಟದ ಅಧ್ಯಯನ ಅಗತ್ಯವಾಗಿದೆ. 

 ಈ ಹಿನ್ನಲೆಯಲ್ಲಿ ‘ದಿಶಾ ಮಾನಿಟರಿಂಗ್ ಸೆಲ್’ ಅನ್ನು ಪಿಪಿಪಿ ಮಾದರಿ’ ಯಲ್ಲಿ ಆರಂಭಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ. ಮೊದಲು ನಮ್ಮ ಶಕ್ತಿಪೀಠ ಫೌಂಡೇಷನ್ ಕನಸನ್ನು ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್‌ರವರಿಗೆ ಸಲ್ಲಿಸಿ ಅವರ ಅಭಿಪ್ರಾಯ ಪಡೆಯಲು ಪತ್ರ ಬರೆಯಲಾಗಿದೆ.

342 ಜನ ಅಭ್ಯರ್ಥಿಗಳ ಆಯ್ಕೆಯನ್ನು ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಆಯ್ಕೆ ವಿಧಾನವನ್ನು ಈ ಕೆಳಕಂಡಂತೆ ಮಾಡಲು ಯೋಚಿಸಲಾಗಿದೆ. ಯಾರೇ ಆಗಲಿ 342 ಜನರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ.

  1. 342 ಜಾತಿಯ ಅಭ್ಯರ್ಥಿಗಳು  – ಮಾನ್ಯ ಮುಖ್ಯ ಮಂತ್ರಿಗಳ ಆದೇಶಕ್ಕಾಗಿ ಪತ್ರ ಬರೆಯಲಾಗುವುದು.
  2. 342 ಜನ ಚುನಾಯಿತ ಜನರ ಅಭಿವೃದ್ಧಿ ಸಲಹಾಗಾರರು – ಮಾನ್ಯ ಮುಖ್ಯ ಮಂತ್ರಿಗಳ ಆದೇಶಕ್ಕಾಗಿ ಪತ್ರ ಬರೆಯಲಾಗುವುದು.
  3. 342 ಜನ ಅನಾಥ ಆಶ್ರಮದಲ್ಲಿರುವವರು – ನಮ್ಮ ಸಂಸ್ಥೆಯೇ ನೇರವಾಗಿ ಆಯ್ಕೆ ಮಾಡಿಕೊಳ್ಳಲು ಉದ್ದೇಶಿಸಿದೆ.
  4. 342 ಜನ ನಿವೃತ್ತ ಅಧಿಕಾರಿಗಳಿಗೆ ವೃದ್ಧಾಶ್ರಮದ ಜೊತೆಗೆ ಅಧ್ಯಯನ – ಮಾನ್ಯ ಮುಖ್ಯ ಮಂತ್ರಿಗಳ ಆದೇಶಕ್ಕಾಗಿ ಪತ್ರ ಬರೆಯಲಾಗುವುದು
  5. 342 ಜನ ನಮ್ಮ ಶಕ್ತಿಪೀಠ ಫೌಂಡೇಷನ್ ನಂಬಿ ಬರುವವರು – ನಮ್ಮ ಸಂಸ್ಥೆಯೇ ನೇರವಾಗಿ ಆಯ್ಕೆ ಮಾಡಿಕೊಳ್ಳಲು ಉದ್ದೇಶಿಸಿದೆ.

ಪತ್ರ ಬರೆಯುವ ಮೊದಲು ತಮ್ಮ ಸಲಹೆಗಳಿಗಾಗಿ ಮನವಿ.