22nd December 2024
Share

TUMAKURU:SHAKTHIPEETA FOUNDATION

ಪ್ರಧಾನ ಮಂತ್ರಿಯವರು ದೇಶದ ಎಲ್ಲಾ ಜಿಲ್ಲೆಗಳಲ್ಲೂ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ DISTRICT  DEVELOPMENT COORDINATION AND MONITORING COMMITTEE (DISHA) ಸಮಿತಿಯನ್ನು ರಚಿಸಿದ್ದಾರೆ. ವಾರ್ಷಿಕವಾಗಿ ಕನಿಷ್ಟ ಪಕ್ಷ ನಾಲ್ಕು ಸಭೆಗಳನ್ನು ನಡೆಸಲು ಮಾರ್ಗದರ್ಶಿ ಸೂತ್ರದಲ್ಲಿದೆ. ಆದರೇ ನಮ್ಮ ರಾಜ್ಯದ ಸಂಸದರಿಗೆ ಏನಾಗಿದೆ ಎಂಬುದೇ ತಿಳಿಯುತ್ತಿಲ್ಲ.

ಆಯಾ ಜಿಲ್ಲೆಗೆ ಬರುವ ಕೇಂದ್ರ ಸರ್ಕಾರದ ಅನುದಾನಗಳ ಬಗ್ಗೆ ಪ್ರಗತಿ ಪರಿಶೀಲನೆ ಸಭೆ ನಡೆಸಲು ಇವರಿಗೆ ಸಮಯ ಇಲ್ಲವೇ? ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಮಾಸ್ಟರ್ ಮೈಂಡ್ ಠುಸ್ ಪಟಾಕಿ ಮಾಡಿರುವುದು ಸರೀಯೇ? ನಿಮಗೆ ಪ್ರಶ್ನೆ ಮಾಡುವುವರು ಯಾರು?

2019-2020

ನಮ್ಮ ರಾಜ್ಯದ 30 ಜಿಲ್ಲೆಗಳ ಪೈಕಿ 2019-2020 ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಒಂದು ಸಭೆಯನ್ನು ಮಾಡಿಲ್ಲ.

ತುಮಕೂರು(ಶ್ರೀ ಜಿ.ಎಸ್.ಬಸವರಾಜ್) ಮತ್ತು ಕೋಲಾರ(ಶ್ರೀ.ನಾರಾಯಣ ಸ್ವಾಮಿ) ಜಿಲ್ಲೆಗಳಲ್ಲಿನ ಸಂಸದರು ತಲಾ 3 ಸಭೆಗಳನ್ನು ಮಾಡುವ ಮೂಲಕ ಪ್ರಥಮ ಸ್ಥಾನದಲ್ಲಿದ್ದಾರೆ.

2020-2021

ನಮ್ಮ ರಾಜ್ಯದ 30 ಜಿಲ್ಲೆಗಳ ಪೈಕಿ 2020-2021 ರಲ್ಲಿ ಬೆಳಗಾವಿ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ  ಜಿಲ್ಲೆ ಸೇರಿದಂತೆ 4 ಜಿಲ್ಲೆಗಳಲ್ಲಿ ಒಂದು ಸಭೆಯನ್ನು ಮಾಡಿಲ್ಲ.

ತುಮಕೂರು (ಶ್ರೀ ಜಿ.ಎಸ್.ಬಸವರಾಜ್) ಮತ್ತು ಮಂಡ್ಯ(ಶ್ರೀಮತಿ ಸುಮಲತಾ) ಜಿಲ್ಲೆಗಳಲ್ಲಿನ ಸಂಸದರು ತಲಾ 4 ಸಭೆಗಳನ್ನು ಮಾಡುವ ಮೂಲಕ ಪ್ರಥಮ ಸ್ಥಾನದಲ್ಲಿದ್ದಾರೆ. ಮೈಸೂರು(ಶ್ರೀ ಪ್ರತಾಪಸಿಂಹ)  ಮತ್ತು ಕೊಡಗು (ಶ್ರೀ ಪ್ರತಾಪಸಿಂಹ)   ಜಿಲ್ಲೆಗಳಲ್ಲಿ ತಲಾ 3 ಸಭೆಗಳನ್ನು ಮಾಡುವ ಮೂಲಕ ದ್ವೀತಿಯ ಸ್ಥಾನದಲ್ಲಿದ್ದಾರೆ.

 ಈ ಬಗ್ಗೆ ನನಗೆ ಅನುಮಾನವಿದೆ. ಕೇಂದ್ರ ಸರ್ಕಾರದ ಪೋರ್ಟಲ್ ಡೇಟಾ ಇದಾಗಿದೆ.