TUMAKURU:SHAKTHIPEETA FOUNDATION
ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು ಸೇರಿದಂತೆ, ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಒಂದು ಅವಧಿಯಲ್ಲಿ 5 ಗ್ರಾಮಪಂಚಾಯತಿ ಆಯ್ಕೆ ಮಾಡಿರುವವರು ದೇಶದಲ್ಲಿ ಎಷ್ಟು ಜನ ಸಂಸದರಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆಹಾಕಲು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಕಾರ್ಯದರ್ಶಿ ಶ್ರೀ ರಮೆಶ್ ರವರೊಂದಿಗೆ ಸಮಾಲೋಚನೆ ನಡೆಸಲಾಯಿತು.
ಮಾರ್ಗದರ್ಶಿಯಲ್ಲಿ ಒಬ್ಬ ಸಂಸದರು ವರ್ಷಕ್ಕೊಂದು ಗ್ರಾಮ ಪಂಚಾಯಿತಿ ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಇದು ಸರಿಯಾದ ಕ್ರಮವಲ್ಲ ಒಂದೇ ಭಾರಿ 5 ಗ್ರಾಮಪಂಚಾಯಿತಿಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸುವ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಮಾಲೋಚನೆ ನಡೆಸಿದ್ದರು.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನಿಯಮದಂತೆ ಒಟ್ಟು 5 ಗ್ರಾಮಪಂಚಾಯಿತಿಗಳನ್ನು ಆಯ್ಕೆ ಮಾಡುವ ಸಂಬಂಧ ಅಭಿವೃದ್ಧಿ ಕಾರ್ಯದರ್ಶಿರವರ ಜೊತೆ ಸಮಾಲೋಚನೆ ನಡೆಸುತ್ತಿದ್ದೆವು. ಕೊರೊನಾ ಮಹಾಮಾರಿಯಿಂದ ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯನ್ನು ಮೊದಲೇ ಆಯ್ಕೆ ಮಾಡಿಕೊಂಡಿದ್ದರೂ ನಿಗದಿತ ಸಾಧನೆಯಾಗಿಲ್ಲ.
ಪ್ರಸ್ತುತ 5 ಗ್ರಾಮಪಂಚಾಯಿತಿಗಳನ್ನು ಒಂದೇ ಭಾರಿಗೆ ಆಯ್ಕೆ ಮಾಡಿದಂತಿದೆ. ಕೋರೋನಾ ಮತ್ತೆ ಮುಂದುವರೆಯುತ್ತಿದೆ, ಈ ಹಿನ್ನಲೆಯಲ್ಲಿ ಆತ್ಮನಿರ್ಭರ ಯೋಜನೆಯಡಿ ಕೈಗೊಳ್ಳ ಬಹುದಾದ ಎಲ್ಲಾ ಯೋಜನೆಗಳ ಮತ್ತು ಕೊರೊನಾ ಯೋಜನೆಗಳ ಬಗ್ಗೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲು 5 ಜನ ನೋಡೆಲ್ ಆಫೀಸರ್‌ರವರು ಸೇರಿ ರೂಪುರೇಷೆ ಸಿದ್ಧಪಡಿಸುವುದು ಸೂಕ್ತವಾಗಿದೆ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.
ಈ ಅವಧಿಯ ಸಂಸದರ ಆದರ್ಶ ಗ್ರಾಮಗಳು ’ಆತ್ಮನಿರ್ಭರ ಸಂಸದರ ಆದರ್ಶ ಗ್ರಾಮ’ ವಾಗುವ ಲಕ್ಷಣಗಳು ಗೋಚರಿಸುತ್ತವೆ?