27th December 2024
Share

TUMAKURU:SHAKTHIPEETA FOUNDATION

ತುಮಕೂರು ಲೋಕಸಭಾ ಕ್ಷೇತ್ರದ ಗುಬ್ಬಿ ವಿಧಾನಸಭಾ ಕ್ಷೇತ್ರದ ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ, ಚಿಕ್ಕನಾಯಕನಹಳ್ಳ್ಬಿ ವಿಧಾನಸಭಾ ಕ್ಷೇತ್ರದ ಗೋಡೆಕೆರೆ ಗ್ರಾಮಪಂಚಾಯಿತಿ, ತಿಪಟೂರು ವಿಧಾನಸಭಾ ಕ್ಷೇತ್ರದ ಅರಳಗುಪ್ಪೆ ಗ್ರಾಮಪಂಚಾಯಿತಿ, ಕೊರಟಗೆರೆ  ವಿಧಾನಸಭಾ ಕ್ಷೇತ್ರದ ಕುರುಂಕೋಟೆ ಗ್ರಾಮಪಂಚಾಯಿತಿ ಮತ್ತು ಮಧುಗಿರಿ ವಿಧಾನಸಭಾ ಕ್ಷೇತ್ರದ ಚಿಕ್ಕದಾಳವಟ್ಟ ಗ್ರಾಮಪಂಚಾಯಿತಿ ವ್ಯಾಫ್ತಿಯ ಎಲ್ಲಾ ರಸ್ತೆಗಳ ಮಾಹಿತಿ ಸಂಗ್ರಹಿಸಲು  ಸಲಹೆ ನೀಡಲಾಗಿತ್ತು.

ಸಲಹೆ ನೀಡಿದ ಮರುದಿನವೇ ಗುಬ್ಬಿ ವಿಧಾನಸಭಾ ಕ್ಷೇತ್ರದ ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಯುವನಾಯಕ ಬಂಡಿಹಳ್ಳಿ ಶ್ರೀ ಚಂದ್ರಮೌಳಿಯವರು ಗುಬ್ಬಿ ಜಿಲ್ಲಾ ಪಂಚಾಯತ್ ಇಂಜಿನಿಯರ್ ಶ್ರೀ ವಿನಯ್‌ರವರು

ಮತ್ತು ಲೋಕಪಯೋಗಿ ಇಲಾಖೆ ಇಂಜಿನಿಯರ್ ಶ್ರೀ ಮಾರುತಿರವನ್ನು

ಭೇಟಿಯಾಗಿ ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯ 18 ಗ್ರಾಮಗಳು 5 ಕಾಲೋನಿಗಳು ಮತ್ತು 3 ಗೊಲ್ಲರಹಟ್ಟಿಯೂ ಸೇರಿದಂತೆ ರೈತರ ಜಮೀನಿಗೆ ಹೋಗುವ ಕರಾಬುದಾರಿಯಿಂದ ಆರಂಭಿಸಿ ರಾಷ್ಟ್ರೀಯ  ಹೆದ್ಧಾರಿ 206 ರವರೆಗೆ ವಿವಿಧ ಇಲಾಖೆಯ ರಸ್ತೆಗಳ ಮಾಹಿತಿಯನ್ನು ಜಿಐಎಸ್ ಆಧಾರಿತ ಸಂಗ್ರಹಿಸಲು ಆರಂಭಿಸಿದ್ದಾರೆ. ಇಂಜಿನಿಯರ್‌ಗಳು ಒಂದು ವಾರದಲ್ಲಿ  ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

 ಇಲ್ಲಿ ಚಂದ್ರಮೌಳಿಯವರಿಗೆ ಯಾರು ಈ ಕೆಲಸ ಮಾಡಿ ಎಂದು ಸೂಚಿಸಿರಲಿಲ್ಲ, ಅವರೇ ಸ್ವಯಂ ಆಗಿ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಕನಸಿನ ಸಂಸದರ ಆದರ್ಶ ಗ್ರಾಮ ಯೋಜನೆಗೆ ಪೂರಕವಾಗಿ ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರ  ಆಯ್ಕೆಯ ಈ ಯೋಜನೆಗೆ ಅಳಿಲು ಸೇವೆ ಸಲ್ಲಿಸಲು ರಸ್ತೆಗಳ ಸೈನಿಕರಂತೆ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ.

5 ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲೂ ಈ ರೀತಿ ಸ್ವಯಂ ಆಗಿ ಮುಂದೆ ಬರುವ ವ್ಯಕ್ತಿಗಳಿಗೆ, ಸಂಘಸಂಸ್ಥೆಗಳಿಗೆ ಮುಂದಿನ ದಿಶಾ ಸಮಿತಿ ಸಭೆಯಲ್ಲಿ ಚರ್ಚಿಸಿ ಅಧಿಕೃತವಾಗಿ ಸಾಗಿ ರಸ್ತೆ ಸೈನಿಕ’ ಅಥವಾ ಬೇರೆ ಯಾವುದೇ ಹೆಸರಿನ ಹುದ್ದೆ ನೀಡಿ ಸೇವೆ ಮಾಡಲು ಅವಕಾಶ ಕಲ್ಪಿಸಲು ಯೋಚಿಸಲಾಗಿದೆ. ಒಂದೊಂದು ಯೋಜನೆಗೂ ಒಬ್ಬೊಬ್ಬ ಸ್ವಯಂ ಸೇವಕರು ಮುಂದೆ ಬರಲು ಬಹಿರಂಗ ಆಹ್ವಾನ ನೀಡಲಾಗಿದೆ.

ಮೋದಿಯವರ ಯೋಜನೆಗಳು ಜನತೆಯ ಯೋಜನೆಗಳಾಗಬೇಕು ಎಂಬ ಅವರ ಕೂಗಿಗೆ ಸ್ಪಂಧಿಸಿ, ಬರೀ ಭಾಷಣಮಾಡಿ, ಪೋಟೋ ಹಾಕಿಸಿಕೊಳ್ಳುವ ಜೊತೆಗೆ ನಿಜವಾಗಲೂ ಸೇವೆ ಮಾಡುವವರ ತಂಡದ ಅಗತ್ಯವಿದೆ ಎಂದು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಆಗಾಗ್ಗೆ ಪ್ರತಿಪಾದಿಸುತ್ತಾರೆ. ಕಾದು ನೋಡೋಣ