9th October 2024
Share

TUMKURU:SHAKTHIPEETA FOUNDATION

ಸುಮಾರು 3 ವರ್ಷಗಳಿಂದ ಸತತವಾಗಿ ಅಧ್ಯಯನ ಮಾಡಿ ಶಕ್ತಿಪೀಠ ಕ್ಯಾಂಪಸ್‌ನಲ್ಲಿ ಎಲ್ಲೇಲ್ಲಿ ಏನೇನು ಇರಬೇಕು ಎಂಬ ಪರಿಕಲ್ಪನೆಯ ಅಂಶಗಳನ್ನು ಭೂಮಿಯ ಮೇಲೆ ಪ್ರಾಯೋಗಿಕವಾಗಿ ನಿಗದಿ ಮಾಡುವ ಕೆಲಸ ಅಂತಿಮ ಹಂತದಲ್ಲಿದೆ. ವಿವಿಧ ವಿಷುಯಗಳ ಪರಿಣಿತರು ಭೇಟಿ ನೀಡಿ ಯಾವುದು ಸರಿ, ಯಾವುದು ಬೇಕು, ಯಾವುದು ಏಕೆ ಬೇಡ ಎಂಬ ಬಗ್ಗೆ ಲಿಖಿತವಾಗಿ ವರದಿ ನೀಡುತ್ತಿದ್ದಾರೆ.

ಕಳೆದ 8 ದಿವಸಗಳಿಂದ ಕ್ಯಾಂಪಸ್‌ನ ಅಂದು ಕೊಂಡಿದ್ದ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ತವಕದಲ್ಲಿ ಇ- ಪೇಪರ್ ಸಹ ಬರೆಯಲು ಸಾಧ್ಯಾವಾಗಲಿಲ್ಲ ಕ್ಷಮೆಯಿರಲಿ. ಹಸಿರು ಕ್ಯಾಂಪಸ್ ಮತ್ತು ನದಿ ಜೋಡಣೆ ಪ್ರಾತ್ಯಕ್ಷಿಕೆ ಕಾಮಗಾರಿಯನ್ನು ಜೂನ್ ೫ ರೊಳಗೆ ಪೂರ್ಣಗೊಳಿಸುವುದು ನನ್ನ ಮುಂದಿನ ಗುರಿ.

ಕೊರೊನಾ ಮಹಾಮಾರಿಯ ಹಿನ್ನಲೆಯಲ್ಲಿ ಮನೆಗಳ ಮದ್ದು ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಆದರೇ ಸರ್ಕಾರಗಳು ಆಯುಷ್ ಬಗ್ಗೆ ನಿರ್ಲಕ್ಷ ಧೋರಣೆ ತಳೆದಿವೆಯಾ ಅಥವಾ ಸಕಾರಾತ್ಮಕವಾಗಿ ಇವೆಯ ಎಂಬ ಅಧ್ಯಯನ ವರದಿ ಸಂಗ್ರಹಣೆ ಮಾಡ ಬೇಕಿದೆ. ಈ ಹಿನ್ನಲೆಯಲ್ಲಿ ಪ್ರಪಂಚದಲ್ಲಿರುವ ಎಲ್ಲಾ ಜಾತಿಯ ಆಯುಷ್ ಗಿಡಗಳನ್ನು ಶಕ್ತಿಪೀಠ ಕ್ಯಾಂಪಸ್‌ನಲ್ಲಿ ಬೆಳೆಸಲು ಚಿಂತನೆಯಿದೆ. 

 ಸಾಧ್ಯವಾದಲ್ಲಿ ಒಂದು ಸರ್ಕಾರಿ ಆಯುಷ್ ಆಸ್ಪತ್ರೆ ದತ್ತು ಪಡೆಯುವುದು ಅಥವಾ ಕ್ಯಾಂಪಸ್‌ನಲ್ಲಿ ಖಾಸಗಿ ಆಯುಷ್ ಸ್ಥಾಪನೆ ಮಾಡಲು ಆಸಕ್ತರಿಗೆ ಅವಕಾಶ ಕಲ್ಪಿಸಲು ಚಿಂತನೆಯಿದೆ.

 ಈ ಬಗ್ಗೆ ಚಿತ್ರದುರ್ಗ  ಜಿಲ್ಲೆಯ ಆಯುಷ್ ಆಧಿಕಾರಿಯವರಾದ ಡಾ.ವಿಶ್ವನಾಥ್‌ರವರ ಬಳಿ ಚರ್ಚಿಸಿದಾಗ ಔಷಧಿ ಗಿಡಗಳಲ್ಲಿ ಅನುಭವವಿರುವ ಹಿರಿಯೂರು ವೈಧ್ಯರಾದ ಡಾ.ಶಿವಕುಮಾರ್‌ರವರಿಗೆ ಸಲಹೆ ನೀಡಲು ತಿಳಿಸಿದ್ದ ಹಿನ್ನಲೆಯಲ್ಲಿ ಅವರೊಂದಿಗೆ ಕ್ಯಾಂಪಸ್‌ನಲ್ಲಿ ಯಾವ ಯಾವ ಗಿಡ, ಸೊಸಿ, ಬಳ್ಳಿ ಮತ್ತು ಬೀಜಗಳನ್ನು ಹಾಕಬಹುದು. ಈ ವಾತವಾರಣದಲ್ಲಿ ಎಷ್ಟು ಔಷದಿ ಗಿಡಗಳು ಬೆಳೆಯುತ್ತವೆ, ಗ್ರೀನ್ ಹೌಸ್‌ನಲ್ಲಿ ಯಾವ ಜಾತಿಯ ಗಿಡಗಳನ್ನು ಬೆಳೆಸಬಹುದು ಎಂಬ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ವಿಶ್ವದಲ್ಲಿ ಅಥವಾ ದೇಶದಲ್ಲಿರುವ ಎಲ್ಲಾ ಜಾತಿಯ ಔಷಧಿ ಗಿಡಗಳನ್ನು ಕರ್ನಾಟಕದಲ್ಲಿ ಯಾರಾದರೂ ಬೆಳೆಸಿದ್ದಾರೇಯೇ? ಅಥವಾ ಬೆಳೆಸಲು ಪ್ರಯತ್ನ ಮಾಡಿ ಸಫಲ ಅಥವಾ ವಿಫಲವಾಗಿರುವರು ಯಾರು ಎಂಬ ಮಾಹಿತಿ ಕಲೆ ಹಾಕುವ ಬಗ್ಗೆಯೂ ಚರ್ಚಿಸಲಾಯಿತು.

 ವಿಶ್ವದಲ್ಲಿ ಅಥವಾ ದೇಶದಲ್ಲಿರುವ ಎಲ್ಲಾ ಜಾತಿಯ ಔಷಧಿ ಗಿಡ ಬೆಳೆಸಲು ಕಲೆಕ್ಷನ್ ಮಾಡುವುದು ಹೇಗೆ ಎಂಬ ಬಗ್ಗೆಯೂ ಚರ್ಚೆ ನಡೆಯಿತು. ಬೆಸ್ಟ್ ಪಾಕ್ಟೀಸಸ್ ಬಗ್ಗೆಯೂ ಸಮಾಲೋಚನೆ ನಡೆಯಿತು. ಚಿತ್ರದುರ್ಗ ಜಿಲ್ಲೆಯ ಮತ್ತು ರಾಜ್ಯ ಮಟ್ಟದ ಔಷಧಿ ಗಿಡಗಳ ಬೆಳೆಗಾರರ ಸಂಘಟನೆ, ನಾಟಿ ವೈಧ್ಯರ ಸಂಘಗಳು, ಅವುಗಳ ಗುಂಪುಗಾರಿಕೆ, ಬಗ್ಗೆಯೂ ವಿಷಯ ಹಂಚಿಕೊಳ್ಳಲಾಯಿತು.

ಆಸಕ್ತರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮನವಿ ಮಾಡಲಾಗಿದೆ. ಇಲ್ಲಿ ಮಾತು ಮತ್ತು ಬಾಷಣಕ್ಕಿಂತ ಕೃತಿಗೆ ಪ್ರಾಮುಖ್ಯವಿದೆ. ಪ್ರತಿಯೊಂದು ಜಾತಿಯ ಔಷಧಿ ಗಿಡಗಳ ಸಂಗ್ರಹಣೆಯಲ್ಲಿ ನೀವೂ ಸಹ ನಿಮಗೆ ಗೊತ್ತಿರುವ ಜಾತಿಯ ಗಿಡಗಳು, ಬಳ್ಳಿ, ಬೀಜ ಇತ್ಯಾದಿ ಅಥವಾ ಮಾಹಿತಿ ನೀಡುವ ಮೂಲಕ ಸಹಕರಿಸಿ.

ದೇವರು ಎಲ್ಲರಲ್ಲೂ ವಿಭಿನ್ನ ಜ್ಞಾನ ನೀಡಿದ್ದಾನೆ. ಅಂಜಿಕೆಯಿಲ್ಲದೆ ಪ್ರದರ್ಶನ ಮಾಡಲು ಸೂಕ್ತ ಪ್ಲಾಟ್ ಫಾರಂ ಬೇಕು ಅಷ್ಟೆ. ಶಕ್ತಿಪೀಠ ಫೌಂಡೇಷನ್ ಸದಾ ನಿಮ್ಮ ಚಿಂತನೆಗೆ ಅವಕಾಶ ಕಲ್ಪಿಸಲಿದೆ.