TUMAKURU:SHAKTHIPEETA FOUNDATION
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರವಿಕುಮಾರ್ ಅಧ್ಯಕ್ಷತೆಯಲ್ಲಿ ತುಮಕೂರು ಜಿಲ್ಲೆಗೆ ಸಂಬಂದಿಸಿದ ಈ ಕೆಳಕಂಡ ಯೋಜನೆಗಳ ಪ್ರಗತಿ ಪರಿಶೀಲನೆ ಬಗ್ಗೆ ಶೀಘ್ರವಾಗಿ ಅಧಿಕಾರಿಗಳ ಮತ್ತು ಚುನಾಯಿತ ಜನಪ್ರತಿನಿಧಿಗಳ ಸಭೆ ನಡೆಸಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪತ್ರ ಬರೆದಿದ್ದಾರೆ.
- ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್ ಹೆಚ್.ಎ.ಎಲ್ ಘಟಕದ ಬಗ್ಗೆ.
- ತುಮಕೂರಿನ ಇಸ್ರೋ ಘಟಕದ ಬಗ್ಗೆ.
- ತುಮಕೂರು ಇಂಡಸ್ಟ್ರಿಯಲ್ ನೋಡ್‍ನ ವಿವಿಧ ಯೋಜನೆಗಳ ಬಗ್ಗೆ.
- ತುಮಕೂರು ಇಂಡಸ್ಟ್ರಿಯಲ್ ನೋಡ್‍ಗೆ ಎತ್ತಿನಹೊಳೆ ನೀರು ಅಲೋಕೇಷನ್ ಮಾಡುವ ಬಗ್ಗೆ.
- ರಾ.ಹೆದ್ಧಾರಿ 48 ರ ಚಿಕ್ಕೊನಹಳ್ಳಿಯಿಂದ ತುಮಕೂರು ನಗರದ ಹೊರವಲಯದ ಮೂಲಕ ರಾ.ಹೆದ್ಧಾರಿ 206 ರ ಮೂಲಕ ಹಾದು ಹೋಗಿ ಪುನಃ ವಸಂತನರಸಾಪುರದ ಬಳಿ 48 ಕ್ಕೆ ಸಂಪರ್ಕಿಸುವ ರಿಂಗ್ ರಸ್ತೆ ಬಗ್ಗೆ.
- ತುಮಕೂರು ಜಿಲ್ಲೆಯ ಮಧುಗಿರಿ ಏಕಶಿಲಾ ಬೆಟ್ಟದ ಸಮಗ್ರ ಯೋಜನೆ ಬಗ್ಗೆ.
- ಬೆಂಗಳೂರಿನಿಂದ ತುಮಕೂರು ವಸಂತನರಸಾಪುರದವರೆಗೆ ಮೆಟ್ರೋ ಸಮೀಕ್ಷಾ ಬಗ್ಗೆ.
- ಬೆಂಗಳೂರಿನಿಂದ ತುಮಕೂರು ವಸಂತನರಸಾಪುರದವರೆಗೆ ಸಬ್ ಅರ್ಬನ್ ರೈಲ್ವೇ ಯೋಜನೆ ಬಗ್ಗೆ.
- ತುಮಕೂರಿನಲ್ಲಿ ಏರ್ ಪೋರ್ಟ್ ಸ್ಥಾಪನೆ ಬಗ್ಗೆ.
- ತುಮಕೂರಿನಲ್ಲಿ ಎಂ.ಎಸ್.ಎಂ.ಇ ಟೆಕ್ನಾಲಜಿ ಸೆಂಟರ್ ಸ್ಥಾಪನೆ ಬಗ್ಗೆ.
- ರಾಜ್ಯದ ನದಿ ಜೋಡಣೆ ಯೋಜನೆಯಡಿ ತುಮಕೂರು ಜಿಲ್ಲೆಯ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಿಸುವ ಬಗ್ಗೆ.
- ತುಮಕೂರು ಜಿಲ್ಲೆಯ ಜಲಜೀವನ್ ಮಿಷನ್ ಯೋಜನೆ ಬಗ್ಗೆ.
- ತುಮಕೂರು ಜಿಲ್ಲೆಯ ಎಲ್ಲಾ ರೈಲ್ವೇ ಯೋಜನೆಗಳ ಬಗ್ಗೆ.
- ತುಮಕೂರು ಜಿಲ್ಲೆಯ ರಾಷ್ಟ್ರೀಯ ಹೆದ್ಧಾರಿ ಯೋಜನೆಗಳ ಬಗ್ಗೆ.
- ಬೆಂಗಳೂರು ನಗರದ ಹೊರವಲಯದ ರೈಲ್ವೇ ಇಂಡಸ್ಟ್ರಿಯಲ್ ಕಾರಿಡಾರ್ ಬಗ್ಗೆ.(ರೈಟ್ಸ್ ಸಂಸ್ಥೆ)
- ತುಮಕೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಬಗ್ಗೆ.
- ತುಮಕೂರು ಜಿಲ್ಲೆಯಲ್ಲಿ ಖೇಲೋ ಇಂಡಿಯಾ ಯೋಜನೆಯಡಿ ಕ್ರೀಡಾ ಗ್ರಾಮ ಸ್ಥಾಪಿಸುವ ಬಗ್ಗೆ.
- ಕೇಂದ್ರ ಸರ್ಕಾರದ ಇತರೆ ಯೋಜನೆಗಳ ಬಗ್ಗೆ.