22nd November 2024
Share

TUMAKURU:SHAKTHIPEETA FOUNDATION

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಾದ  ಶ್ರೀ ರವಿಕುಮಾರ್ ಅಧ್ಯಕ್ಷತೆಯಲ್ಲಿ ತುಮಕೂರು ಜಿಲ್ಲೆಗೆ ಸಂಬಂದಿಸಿದ ಈ ಕೆಳಕಂಡ ಯೋಜನೆಗಳ ಪ್ರಗತಿ ಪರಿಶೀಲನೆ  ಬಗ್ಗೆ ಶೀಘ್ರವಾಗಿ ಅಧಿಕಾರಿಗಳ ಮತ್ತು ಚುನಾಯಿತ ಜನಪ್ರತಿನಿಧಿಗಳ ಸಭೆ ನಡೆಸಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪತ್ರ ಬರೆದಿದ್ದಾರೆ. 

  1. ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್ ಹೆಚ್.ಎ.ಎಲ್ ಘಟಕದ ಬಗ್ಗೆ.
  2. ತುಮಕೂರಿನ ಇಸ್ರೋ ಘಟಕದ ಬಗ್ಗೆ.
  3. ತುಮಕೂರು ಇಂಡಸ್ಟ್ರಿಯಲ್ ನೋಡ್‍ನ ವಿವಿಧ ಯೋಜನೆಗಳ ಬಗ್ಗೆ.
  4. ತುಮಕೂರು ಇಂಡಸ್ಟ್ರಿಯಲ್ ನೋಡ್‍ಗೆ ಎತ್ತಿನಹೊಳೆ ನೀರು ಅಲೋಕೇಷನ್ ಮಾಡುವ ಬಗ್ಗೆ.
  5. ರಾ.ಹೆದ್ಧಾರಿ 48 ರ ಚಿಕ್ಕೊನಹಳ್ಳಿಯಿಂದ ತುಮಕೂರು ನಗರದ ಹೊರವಲಯದ  ಮೂಲಕ ರಾ.ಹೆದ್ಧಾರಿ 206 ರ ಮೂಲಕ ಹಾದು ಹೋಗಿ  ಪುನಃ ವಸಂತನರಸಾಪುರದ ಬಳಿ 48 ಕ್ಕೆ ಸಂಪರ್ಕಿಸುವ ರಿಂಗ್ ರಸ್ತೆ ಬಗ್ಗೆ.
  6. ತುಮಕೂರು ಜಿಲ್ಲೆಯ ಮಧುಗಿರಿ ಏಕಶಿಲಾ ಬೆಟ್ಟದ ಸಮಗ್ರ ಯೋಜನೆ ಬಗ್ಗೆ.
  7. ಬೆಂಗಳೂರಿನಿಂದ ತುಮಕೂರು ವಸಂತನರಸಾಪುರದವರೆಗೆ ಮೆಟ್ರೋ ಸಮೀಕ್ಷಾ ಬಗ್ಗೆ.
  8. ಬೆಂಗಳೂರಿನಿಂದ ತುಮಕೂರು ವಸಂತನರಸಾಪುರದವರೆಗೆ ಸಬ್ ಅರ್ಬನ್ ರೈಲ್ವೇ ಯೋಜನೆ ಬಗ್ಗೆ.
  9. ತುಮಕೂರಿನಲ್ಲಿ ಏರ್ ಪೋರ್ಟ್ ಸ್ಥಾಪನೆ ಬಗ್ಗೆ.
  10. ತುಮಕೂರಿನಲ್ಲಿ ಎಂ.ಎಸ್.ಎಂ.ಇ ಟೆಕ್ನಾಲಜಿ ಸೆಂಟರ್ ಸ್ಥಾಪನೆ ಬಗ್ಗೆ.
  11. ರಾಜ್ಯದ ನದಿ ಜೋಡಣೆ ಯೋಜನೆಯಡಿ ತುಮಕೂರು ಜಿಲ್ಲೆಯ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಿಸುವ ಬಗ್ಗೆ.
  12. ತುಮಕೂರು ಜಿಲ್ಲೆಯ ಜಲಜೀವನ್ ಮಿಷನ್ ಯೋಜನೆ ಬಗ್ಗೆ.
  13. ತುಮಕೂರು ಜಿಲ್ಲೆಯ ಎಲ್ಲಾ ರೈಲ್ವೇ ಯೋಜನೆಗಳ ಬಗ್ಗೆ.
  14. ತುಮಕೂರು ಜಿಲ್ಲೆಯ ರಾಷ್ಟ್ರೀಯ ಹೆದ್ಧಾರಿ ಯೋಜನೆಗಳ ಬಗ್ಗೆ.
  15. ಬೆಂಗಳೂರು ನಗರದ ಹೊರವಲಯದ ರೈಲ್ವೇ ಇಂಡಸ್ಟ್ರಿಯಲ್ ಕಾರಿಡಾರ್ ಬಗ್ಗೆ.(ರೈಟ್ಸ್ ಸಂಸ್ಥೆ)
  16. ತುಮಕೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಬಗ್ಗೆ.
  17. ತುಮಕೂರು ಜಿಲ್ಲೆಯಲ್ಲಿ ಖೇಲೋ ಇಂಡಿಯಾ ಯೋಜನೆಯಡಿ ಕ್ರೀಡಾ ಗ್ರಾಮ ಸ್ಥಾಪಿಸುವ ಬಗ್ಗೆ.
  18. ಕೇಂದ್ರ ಸರ್ಕಾರದ ಇತರೆ ಯೋಜನೆಗಳ ಬಗ್ಗೆ.