22nd December 2024
Share

ಈ ನಕ್ಷೆ ಯಾರೋ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದು, ಅವರೇ ಹೇಳಿದ್ದಾರೆ ಇದು ಸ್ಕೇಲ್ ಪ್ರಕಾರ ಇಲ್ಲ.

ಕೇಂದ್ರ ಸರ್ಕಾರ ಯಾವುದೇ ಪಕ್ಷದ ನೇತೃತ್ವದಲ್ಲಿ ರಚನೆಯಾಗಿದ್ದರೂ, ವಿರೋಧ ಪಕ್ಷಗಳು ಕೇಂದ್ರ ಸರ್ಕಾರ ರಾಜ್ಯಗಳಿಗೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಹಾರಿಕೆ ಹೇಳಿಕೆಗಳನ್ನು ಸ್ವಾತಂತ್ರ್ಯ ಬಂದಾಗಿನಿಂದಲೂ ಟೀಕೆ ಮಾಡುತ್ತಲೇ ಬಂದಿವೆ.

ನಮ್ಮ ರಾಜ್ಯದಲ್ಲಿಯೂ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರು ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆಗಾಗ್ಗೆ ಹೇಳುತ್ತಲೆ ಇದ್ದಾರೆ. ನಮ್ಮ ರಾಜ್ಯದವರೇ ಆದ ಶ್ರೀ ಎಂ.ಮಲ್ಲಿಕಾರ್ಜುನ್‍ಖರ್ಗೆರವರು ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಿದ್ದಾರೆ. ಅವರ ಬಳಿ ಇಂಚಿಂಚು ಮಾಹಿತಿ ಇರಲೇಬೇಕು?

ಆಡಳಿತ ಪಕ್ಷದಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ರಾಜ್ಯಸಭಾ ಸದಸ್ಯರಾದ ಶ್ರೀ ನಿರ್ಮಲಾಸೀತಾರಾಮನ್‍ರವರು ಕೇಂದ್ರ ಸರ್ಕಾರದಲ್ಲಿ ಅರ್ಥ ಸಚಿವರಾಗಿದ್ದಾರೆ. ನಮ್ಮ ರಾಜ್ಯದ ಸಂಸದರಾದ ಶ್ರೀ ಪ್ರಹ್ಲಾದ್ ಜೋಷಿರವರು ಸಂಸದೀಯ ಸಚಿವರಾಗಿದ್ದಾರೆ. ಅವರ ಬಳಿ ಇಂಚಿಂಚು ಮಾಹಿತಿ ಇರಲೇಬೇಕು?

ನಮ್ಮ ಹೆಮ್ಮೆಯ ಕನ್ನಡಿಗ ಮಾಜಿ ಪ್ರಧಾನಿಯಯವರಾದ ಶ್ರೀ ಹೆಚ್.ಡಿ.ದೇವೇಗೌಡರವರು ರಾಜ್ಯ ಸಭೆಯಲ್ಲಿ ಇದ್ದಾರೆ. ಅಂಕಿ ಅಂಶಗಳ ಸಮೇತ ಮಾತನಾಡುವ ಶಕ್ತಿ ಇರುವ  ಸಂಸದರುಗಳು? ಇದ್ದಾರೆ.

ಇದರಲ್ಲಿ ಯಾರೇ ಆಗಲಿ ನಮ್ಮ ದೇಶದಲ್ಲಿನ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು, ಅವುಗಳಲ್ಲಿರುವ ಜಿಲ್ಲೆಗಳು, ಜಿಲ್ಲೆಗಳ ವಿಸ್ಥೀರ್ಣ, ಜಿಲ್ಲೆಗಳ ಜನ ಸಂಖ್ಯೆ, ಪ್ರತಿಯೊಂದು ಜಿಲ್ಲೆಗಳಿಗೆ ಯಪಿಎ ನೇತೃತ್ವದ ಕೇಂದ್ರ ಸರ್ಕಾರದ  10 ವರ್ಷಗಳು ಮತ್ತು ಎನ್‍ಡಿಎ ನೇತೃತ್ವದ ಕೇಂದ್ರ ಸರ್ಕಾರದ 7 ವರ್ಷಗಳು ಪ್ರತಿಯೊಂದು ಇಲಾಖೆಯೂ ಸೇರಿದಂತೆ ಎಷ್ಟೆಷ್ಟು ಅನುದಾನ ನೀಡಿವೆ, ಯಾವ ರೀತಿ ತಾರತಮ್ಯ ಮಾಡಿದೆ, ಎಂದು ಹೇಳುವ ತಾಕತ್ತು ಯಾರಿಗಿದೆ ಅಥವಾ ಯಾವ ಪಕ್ಷಕ್ಕಿದೆ?

ದಿಶಾ ಮಾರ್ಗದರ್ಶಿ ಸೂತ್ರ ಪ್ರಕಾರ ದೇಶದ ಎಲ್ಲಾ ಜಿಲ್ಲಾ ಮಟ್ಟದ ದಿಶಾ ಸಮಿತಿಗಳು ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಗಳು ಈ ಮಾಹಿತಿ ಇಟ್ಟುಕೊಳ್ಳಬೇಕು. ದೇಶದ ಯಾವುದಾದರೂ ಒಂದು ಜಿಲ್ಲೆಯಲ್ಲಿ ಇಟ್ಟುಕೊಂಡಿದ್ದರೂ, ಆ ಸಂಸದರ ಕಾಲಿಗೆ ಬೀಳಬಹುದು.

ನೀತಿ ಆಯೋಗದಲ್ಲಾದರೂ ಈ ಮಾಹಿತಿ ಸಿಗುವುದೇ? ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಅರ್ಜಿ ಸಲ್ಲಿಸಿದಲ್ಲಿ ಮಾತ್ರ ತಿಳಿಯಲಿದೆ. ಯಾರಾದರೂ ಮಾಹಿತಿ ಹಕ್ಕು ಕಾರ್ಯಕರ್ತರು ಆಸಕ್ತಿ ಇದ್ದಲ್ಲಿ ಸಂಪರ್ಕ ಮಾಬಹುದು.

ಯಾರಾದರೂ ಈ ಬಗ್ಗೆ ಪಿಹೆಚ್‍ಡಿ ಮಾಡಿದ್ದರೆ ಅಥವಾ ಮಾಡಲು ಆಸಕ್ತಿ ಇದ್ದರೆ ಸಂಪರ್ಕ ಮಾಡಬಹುದು.

ಈ ಬಗ್ಗೆ ಯಾವುದಾದರೂ ಸಂಘ ಸಂಸ್ಥೆ ಅಧ್ಯಯನ ಮಾಡಿದ್ದರೆ ಅಥವಾ ಮಾಡಲು ಆಸಕ್ತಿ ಇದ್ದಲ್ಲಿ ಸಂಪರ್ಕ ಮಾಡಬಹುದು.

ಸಂಸದರು ಲೋಕಸಭೆ ಅಥವಾ ರಾಜ್ಯ ಸಭೆಯಲ್ಲಿ ಈ ಮಾಹಿತಿ  ಪಡೆಯ ಬಹುದು. ಯಾರಾದರೂ ಸಂಸದರು ಪಡೆದಿದ್ದಲ್ಲಿ ಮಾಹಿತಿ ನೀಡಲು ಮನವಿ.