12th September 2024
Share

TUMAKURU:SHAKTHIPEETA FOUNDATION

ಸೋಪನಹಳ್ಳಿ ಕೆರೆ ಕೋಡಿಹಳ್ಳವನ್ನು ಯಾರು ಮುಚ್ಚಿದ್ದರು, ಏಕೆ ಮುಚ್ಚಿದ್ದರೂ ಎಂಬುದು ಒಂದು ಯಕ್ಷ ಪ್ರಶ್ನೆ. ಅದು ಏನೆ ಇರಲಿ ಇಂದು ತುಮಕೂರು ಉಪವಿಭಾಗಾಧಿಕಾರಿ ಶ್ರೀ ಅಜಯ್ ನೇತೃತ್ವದ ತಂಡ ಹಳ್ಳದ ಒತ್ತುವರಿ ತೆರವು ಆರಂಭಿಸುವ ಮೂಲಕ ಕೋಡಿ ಹಳ್ಳ ಮುಚ್ಚುವವರಿಗೆ ಪಾಠ ಕಲಿಸಿದ್ದಾರೆ.

ಸೋಪನಹಳ್ಳಿ  ಕೆರೆ ಕೋಡಿಯಿಂದ ಅದಲಗೆರೆ ರಸ್ತೆಯ ವರೆಗೆ ಸೋಪನಹಳ್ಳಿ ಮತ್ತು ಕುಂದರನಹಳ್ಳಿ ಗ್ರಾಮಗಳಲ್ಲಿರುವ ಹಳ್ಳದ ಒತ್ತುವರಿ ಗುರುತಿಸಿ ಸಂಪೂರ್ಣವಾಗಿ ಒತ್ತುವರಿ ತೆರವು ಗೊಳಿಸಲು ಗುಬ್ಬಿ ತಹಶೀಲ್ಧಾರ್ ಶ್ರೀ ಮತಿ ಆರತಿ, ಆರ್.ಐ.ಶ್ರೀ ನಾರಾಯಣ್ ಮತ್ತು ತಾಲ್ಲೂಕ ಸರ್ವೇಯರ್ ರವರೆಗೆ ಉಪವಿಭಾಗಾಧಿಕಾರಿಯವರು ಕಾಲಮಿತಿ ಗಡುವು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸ್ಪಂಧಿಸಿದ ಅಧಿಕಾರಿ ವರ್ಗಕ್ಕೆ ಸೋಪನಹಳ್ಳಿ ಮತ್ತು ಕುಂದರನಹಳ್ಳಿ ರೈತರು ಕೃತಜ್ಞತೆ ಸಲ್ಲಿಸಿದ್ದಾರೆ.