12th October 2024
Share
ಬಹಳ ದಿವಸಗಳ ಹಿಂದೆ ಗರುಡ ನಮ್ಮ ಕ್ಯಾಂಪಸ್ ನಲ್ಲಿರುವ ತೆಂಗಿನ ಮರದ ಮೇಲೆ ಕುಳಿತ ಚಿತ್ರ.

TUMAKURU:SHAKTHIPEETA FOUNDATION

ದೇಶದ ಯಾವುದೇ ಭಾಗದಲ್ಲಿ ಯಾವುದೇ ಒಬ್ಬ ನಿರುದ್ಯೋಗಿ. ರೈತ ಲಂಚ ಮತ್ತು ಶಿಫಾರಸ್ಸು ಇಲ್ಲದೆ  ಸ್ವಯಂ ಉದ್ಯೋಗ ಕೈಗೊಳ್ಳಲು ಸಾದ್ಯವೇ? ಎಂಬ ಪ್ರಶ್ನೆ ನನಗೆ ಈಗ ಮೂಡಿದೆ.

ಬಹುಷಃ ಕಳೆದ 33 ವರ್ಷಗಳಿಂದಲೂ ತುಮಕೂರು ಜಿಲ್ಲೆಯಲ್ಲಿ ಯಾವುದೇ ಕಚೇರಿಗೆ ಹೋದರೂ ಕುಂದರನಹಳ್ಳಿ ರಮೇಶ್ ಎಂದರೆ ಬಹಳ ಸುಲಭವಾಗಿ ಕೆಲಸಗಳು ನಡೆಯುತ್ತಿವೆ. ಆರಂಭದಲ್ಲಿ ಒಂದೆರಡು ಉದಾಹರಣೆಗಳು ಬಿಟ್ಟರೆ ಯಾವುದೇ ಅಧಿಕಾರಿಗಳು ಅನಗತ್ಯ ವಿಳಂಭ ಮಾಡುವುದಾಗಲಿ, ಲಂಚ ಕೇಳುವುದಾಗಲಿ ಮಾಡಿಲ್ಲ, ಅಂತಹ ಕಹಿ ಅನುಭವ ನನಗೆ ಆಗಿಲ್ಲ.

 ಈಗ ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೂಕಿನಲ್ಲಿ ಶಕ್ತಿಪೀಠ ಕ್ಯಾಂಪಸ್ ಎಂಬ ಅಗ್ರಿ ಟೂರಿಸಂ ಮಾಡಲು ಆರಂಭಿಸಿದ್ದೇನೆ. ಕಳೆದ 5 ವರ್ಷಗಳಿಂದಲೂ ಭೂಮಿಯ ಮೇಲೆ ಸಂಶೋಧನಾ ಮತ್ತು ಅಭಿವೃದ್ಧಿ ಮಾಡುತ್ತಲೇ ಬಂದಿದ್ದೇನೆ. ಇಲ್ಲಿಯವರೆಗೂ ಯಾವುದೇ ಸರ್ಕಾರದ ಅನುಮತಿ ಅಗತ್ಯವಿರಲಿಲ್ಲ. ಈಗ ವಿವಿಧ ಇಲಾಖೆಯ ಅನುಮತಿ ಅಗತ್ಯವಿದೆ.

 ನಾನು ಯೋಜನೆ ಆರಂಭಿಸುತ್ತಿರುವ ವ್ಯಾಪ್ತಿ, ಯಾವ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ ಎಂಬ ಪ್ರಶ್ನೆ ಉದ್ಭವಿಸಿದೆ. ಇದೂವರೆಗೂ ಕೆ.ಆರ್.ಹಳ್ಳಿ ಗ್ರಾಮ ಪಂಚಾಯಿತಿ ಎಂಬ ಮಾಹಿತಿ ಇತ್ತು. ನಾನು ಸಹ ಅದೇ ಬರೆಯುತ್ತಾ ಬಂದಿದ್ದೇನೆ.ಈಗ ವಡ್ಡನಹಳ್ಳಿ ಕೆ.ಆರ್.ಹಳ್ಳಿ ಗ್ರಾಮ ಪಂಚಾಯಿತಿಗೆ ಬರುತ್ತದೆ. ನಮ್ಮ ಜಮೀನು ಇರುವ ಬಗ್ಗನಡು ಕಾವಲ್ ಗೌಡನಹಳ್ಳಿ ಗ್ರಾಮಪಂಚಾಯಿತಿಗೆ ಬರುತ್ತದೆ ಎಂಬ ಮಾಹಿತಿ ತಿಳಿಯಿತು. 

 ಆರಂಭದಲ್ಲಿ ನಾನೇ ನಿನ್ನೆ ದಿನಾಂಕ:03.09.2021 ರಂದು ಗೌಡನಹಳ್ಳಿ ಗ್ರಾಮಪಂಚಾಯಿತಿ ಕಾರ್ಯಾಲಯಕ್ಕೆ ಹೋಗಿದ್ದೆ.ಅಲ್ಲಿನ ಪಿಡಿಓ ರವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದೆ. ನನ್ನ ಜೊತೆಯಲ್ಲಿ ನನಗೂ ನಿನ್ನೆ ಪರಿಚಯವಾದ ಹಿರಿಯೂರಿನ ಶ್ರೀ ರಂಗಸ್ವಾಮಿರವರು ಬಂದಿದ್ದರು. ಅಲ್ಲಿಂದ ದಾರಿಯಲ್ಲಿ ಬರುವಾಗ ರಂಗಸ್ವಾಮಿಯವರು ಸಾರ್ ‘ಪಿಡಿಓ ಗತ್ತು’ ಗಮನಿಸಿದರಾ  ಎಂದರು.

ನಾನು ಅವರಿಗೆ ಹೇಳಿದೆ ಇದು ಈ ದೇಶದ ದುರಂತ, ಸಾಮಾನ್ಯ ಒಬ್ಬ ಪ್ರಜೆ ತನ್ನ ಸಂತ ಸ್ವತ್ತಿನದಾಖಲೆ ಮಾಡಿಕೊಳ್ಳಲು ಒಡವೆ ಅಡಹಿಟ್ಟು ಲಂಚಕೊಟ್ಟಿರುವ ಉದಾಹರಣೆಗಳು ನನ್ನ ಕಣ್ಣ ಮುಂದೆ ಇವೆ.ನಾನು ತುಮಕೂರು ಜಿಲ್ಲೆಯಲ್ಲಿ ಕಚೇರಿಗೆ ಹೋದಾಗ ಆಗಿರುವ ಅನುಭವ ಮತ್ತು ಇಲ್ಲಿ ಭೇಟಿ ಆದ ಅನುಭವ ನಿಜಕ್ಕೂ ನನಗೆ ಸಾಮಾನ್ಯ ಜನ ನಮ್ಮ ಬಳಿ ಬಂದು ಏಕೆ ಅಹವಾಲು ಹೇಳುತ್ತಾರೆ ಎಂಬುದು ಅಕ್ಷರಷಃ ನೆನಪಿಗೆ ಬಂತು.

ನೋಡಿ ರಂಗಸ್ವಾಮಿಯವರೇ ನೀವೂ ಗಮನಿಸಿದ್ದೀರಿ, ನಾನು ಹಣೆ ಮೇಲೆ ಬೋರ್ಡ್ ಹಾಕಿಕೊಂಡು ಬರಲು ಸಾಧ್ಯಾವಿಲ್ಲ. ನಮ್ಮ ಬಗ್ಗೆ ನಾವೇ ಅವರ ಬಳಿ ಹೇಳಿಕೊಳ್ಳುವುದು ಒಳ್ಳೆಯದಲ್ಲ. ನೋಡೋಣ ಸಾಮಾನ್ಯ ನಾಗರಿಕರ ಹಾಗೆ ಕೆಲಸ ಮಾಡಿಸಿಕೊಳ್ಳೋಣ. ಅದು ಸಾದ್ಯಾವಗದೇ ಇದ್ದಲ್ಲಿ ಮಾತ್ರ ಮುಂದಿನ ದಾರಿ ನೋಡಿಕೊಳ್ಳೋಣ ಸಾರ್ ಎಂದೆ.

ರಂಗಸ್ವಾಮಿಯರು  ನಿಮ್ಮ ಅನುಭವ ನಮಗೂ ಪಾಠವಾಗಲಿದೆ ಎಂದು ನಕ್ಕರು.

ಒಂದು ಘಟನೆ ಹೇಳುತ್ತೇನೆ ಕೇಳಿ, ನಾನು ಈ ಜಮೀನು ಕೊಂಡುಕೊಂಡಾಗ ಚಿತ್ರದುರ್ಗದ ಪ್ರವಾಸೋಧ್ಯಮ ಕಚೇರಿಗೆ ಹೋಗಿ ಅಲ್ಲಿನ ಅಧಿಕಾರಿ ಬಳಿ ಹೇಳಿದೆ. ನಾನು ಮತ್ತು ನನ್ನ ಸಹೋದರರು 3 ಜನ ಜಮೀನು ಕೊಂಡಿದ್ದೇವೆ. ಇಲ್ಲಿ ಅಗ್ರಿ ಟೂರಿಸಂ ಕ್ಲಸ್ಟರ್ ಮಾಡಲು ಉದ್ದೇಶಿಸಿದ್ದೇವೆ ಎಂದಾಗ ಆತ ನಮ್ಮನ್ನು ನೋಡಿದ ರೀತಿ ನಿಜಕ್ಕೂ ಒಬ್ಬ ಕಳ್ಳನನ್ನು ನೋಡುವ ಹಾಗಿತ್ತು.

ಆತನಿಗೆ ಇವರೆಲ್ಲಾ ಬೋಗಸ್ ಮಾಡಲು ಬಂದಿದ್ದಾರೆ. ಹಿರಿಯೂರು ತಾಲ್ಲೂಕಿನಲ್ಲಿ ನೀರೇ ಇಲ್ಲ. ಇಲ್ಲಿ ಭಾರತ ನಕ್ಷೆ ಮತ್ತು ಕೃತಕ ಸಮುದ್ರ ಹೇಗೆ ಮಾಡುತ್ತಾರೆ ಎಂಬ ಪರಿಕಲ್ಪನೆ ಬಂದಿರ ಬಹುದು. ನಾನು ಅಂದು ಸಹ ಮೌನವಾಗಿ ಎದ್ದು ಬಂದೆ. ಕಾರಣ ಅವರ ಜ್ಞಾನದ ಮಟ್ಟ ಇಷ್ಟೆ ಇರಬಹುದು ಎಂದು ಕೊಂಡೆ.

ಈಗ ಇಷ್ಟೆಲ್ಲಾ ಮಾಡಿದ ಮೇಲೆ ಏನು ಹೇಳುತ್ತಾರೆ ನೋಡೋಣ ಎಂದಾಗ ರಂಗಸ್ವಾಮಿಯವರು ಸಾರ್ ನಿಮ್ಮ ಕ್ಯಾಂಪಸ್ ಜಮೀನಿನಲ್ಲಿ ಅರ್ಧಗಂಟೆ ಕುಳಿತು ಕೊಂಡೆ, ನನಗೆ ಆದ ಅನುಭವ ನಿಜಕ್ಕೂ ಅದ್ಭುತ ಎಂದಾಗ ಸರಿ ನಾನು ಬಂದಾಗ ಪ್ರತಿ ದಿವಸ  ಬಂದು ಬಿಡಿ ಎಂದು ಹೇಳಿದ್ದೇನೆ.

ಇಬ್ಬರೂ ಜಮೀನಿನಲ್ಲಿ ನಿಂತು ಕೊಂಡು ಮಾತನಾಡುತ್ತಿದ್ದೆವು. ಎರಡು ಗರುಡಗಳು ಬಂದು ರೌಂಡ್ ಹೊಡೆಯುತ್ತಿದ್ದವು. ‘ಸಾರ್ ಗರುಡ ಇವು ಇಷ್ಟು ಕೆಳಗೆ ಬಂದು ಹಾರಾಡುತ್ತಿವೆ’ ಎಂದು ಆಶ್ಚರ್ಯದಿಂದ ಹೇಳಿದರು. ಹೌದು ಸಾರ್ ಇವು ನಾವು ಕೆಲಸ ಮಾಡುವಾಗ ಪ್ರತಿನಿತ್ಯ ಬಂದು ಪರಿಶೀಲನೆ ಮಾಡುತ್ತವೆ ಎಂದಾಗ ಗರುಡ ನಮ್ಮ ವಿಷ್ಣುವಿನ ವಾಹನ ಸಾರ್. ಅವು ಬರುತ್ತಿವೆ ಎಂದರೆ ಈ ಜಮೀನು ಮಹತ್ವದ್ದಾಗಿದೆ ಎಂದರು.

ಹೌದಪ್ಪ ಇಲ್ಲಿ ‘ಸತಿಯ ದೇಹದ ಮೆದುಳಿನ ಭಾಗ ಬಿದ್ದಿಂತಂತೆ’. ಇದೂವರೆಗೂ ಯಾರಿಗೂ ತಿಳಿದಿಲ್ಲ, ಈಗ ಇಲ್ಲಿ ಪರಿಸರದ ನಡುವೆ ‘ಜ್ಞಾನ ದೇಗುಲ’ ಆರಂಭವಾಗುತ್ತಿದೆ ಎಂದಾಗ ಅವರು ಮೌನವಹಸಿದರು.

ಇನ್ನೂ ಮುಂದೆ ನಾನು ನನಗೆ ವಿವಿಧ ಕಚೇರಿಯಲ್ಲಿ ಆಗುವ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿದ್ದೇನೆ.