21st November 2024
Share

TUMAKURU:SHAKTHI PEETA FOUNDATION

2015 ರಿಂದ 2021 ರವೆಗೂ ಸುಮಾರು ಆರು ವರ್ಷಗಳ ಕಾಲ ನಿರಂತರವಾಗಿ ಶಕ್ತಿಪೀಠ ಕ್ಯಾಂಪಸ್ ಲೇಔಟ್ ಮಾಡುತ್ತಿರುವ ನನಗೆ ಒಂದು ಹೊಸ ಅನುಭವ ಆಗಿದೆ, ಭೂ ಬಳಕೆಯ ವಿಂಗಡಣೆ ತೃಪ್ತಿ ತಂದಿದೆ ಎಂದು ತುಮಕೂರಿನ ಸ್ಪೆಕ್ಟ್ರಾ ಅಸೋಯೇಟ್ಸ್ ನ ಶ್ರೀ ಸತ್ಯಾನಂದ್ ಹರ್ಷ ವ್ಯಕ್ತ ಪಡಿಸಿದರು.

ಇಲ್ಲಿ ಧಾರ್ಮಿಕತೆ, ಹಿಂದೂ ಸಂಪ್ರದಾಯ, ದೇಶದ ನದಿ ಜೋಡಣೆ ಪ್ರಾತ್ಯಾಕ್ಷಿಕೆ, 108 ಶಕ್ತಿಪೀಠಗಳ ಪ್ರಾತ್ಯಾಕ್ಷಿಕೆ, 12 ಜ್ಯೋತಿರ್ಲಿಂಗಗಳ ಪ್ರಾತ್ಯಾಕ್ಷಿಕೆ, 3 ಸಾಯಿಬಾಬಾ ರವರ ಪ್ರಾತ್ಯಾಕ್ಷಿಕೆ ಸೇರಿದಂತೆ ಸುಮಾರು 150 ಕ್ಕೂ ಹೆಚ್ಚು ಪ್ರಾತ್ಯಾಕ್ಷಿಕೆಗಳನ್ನು ಭಾರತ ನಕ್ಷೆಯನ್ನು ಭೂಮಿಯ ಮೇಲೆ ನಿರ್ಮಾಣ ಮಾಡಿ ಇಳಿಸುವುದು ಒಂದೇ ಪವಾಡದಂತಿದೆ.

ಶ್ರೀ ಬಸವರಾಜ್ ಸುರಣಗಿ ರವರು, ಶ್ರೀ ಚಿದಾನಂದ್ ರವರು, ನನ್ನ ಸಹಪಾಠಿ ಶ್ರೀ ಗಂಗಣ್ಣ, ಮಲ್ಲಸಂದ್ರದ ಶ್ರೀ ರಾಜಶೇಖರ್, ಶ್ರಿಮತಿ ಶ್ರುತಿ. ಇನ್ನೂ ಮುಂತಾದ ಹತ್ತಾರು ಜನರು ನನ್ನೊಂದಿಗೆ ಸಹಕಾರ ನೀಡಿದ್ದಾರೆ. ಭೂಮಿಗೆ ಯಥಾವತ್ತಾಗಿ ಇಳಿಸಲು ಹಲವಾರು ಜನರನ್ನು ಬಳಸಿಕೊಂಡರು ಕೊನೆಯವರೆಗೂ ಶ್ರೀ ಗುರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ನೀರು ಗಂಗಾಮತೆ’ ಎಂದು ಎಂಬ ಭಾವನೆಯಿಂದ ಕೃತಕ ಅರಭ್ಭಿ ಸಮುದ್ರ, ಬಂಗಾಳಕೊಲ್ಲಿ ಮತ್ತು ಹಿಂದೂ ಮಹಾಸಾಗರ ನಿರ್ಮಾಣ ಮಾಡಿ ಸುಮಾರು ಒಂದು ಕೋಟಿ ಅರವತ್ತೆಂಟು ಲಕ್ಷ ಲೀಟರ್ ನೀರು ಸಂಗ್ರಹಣೆ ಮಾಡಿ ಪೂಜಿಸಿ, ನಂತರ ಉಳಿದ ಕಾಮಗಾರಿ ಆರಂಭಿಸಿದ ಕುಂದರನಹಳ್ಳಿ ರಮೇಶ್ ರವರ ನಿಲುವು  ನಿಜಕ್ಕೂ ವಿಶಿಷ್ಠವಾಗಿದೆ.

 ಇಲ್ಲಿ ಭೇಟಿ ನೀಡಿದ ಬಹುತೇಕ ಎಲ್ಲರೂ ಮೊದಲು ಒಂದು ದೇವಾಲಯ ನಿರ್ಮಾಣ ಮಾಡಿ ನಂತರ ಕಾಮಗಾರಿ ಆರಂಭಿಸಿ ಎಂದು ಸಲಹೆ ನೀಡಿದರೂ, ಗಂಗಾ ಮಾತೆಯ ಜಲಸಂಗ್ರಹಗಾರ ದೇವರಲ್ಲವೇ, ಪರಿಸರ ದೇವರವಲ್ಲವೇ ಎಂಬ ಅಚಲ ನಿಲುವು ನಮಗೂ ಪ್ರೇರಣೆಯಾಗಿದೆ.

 ಇಲ್ಲಿ ವಿಜ್ಞಾನ, ಅಭಿವೃದ್ಧಿ, ಜ್ಞಾನಾರ್ಜನೆಗೆ ಒತ್ತುಕೊಡಲಾಗಿದೆ. ವಿಗ್ರಹ ಆರಾಧನೆ, ಆಡಂಬರ ಅಬ್ಬರದ ಪೂಜೆ ಗಿಂತ ಭಕ್ತಿ ಮತ್ತು ಕಾಯಕಕ್ಕೆ ಮಹತ್ವ ನೀಡಲಾಗಿದೆ. ಆರು ವರ್ಷಗಳ ನಂತರ ಇಂದು ಒಂದು ಕಟ್ಟಡ ನಿರ್ಮಾಣ ಮಾಡುವ ಸಮಯ ಒದಗಿ ಬಂದಿರುವುದು ಮತ್ತು  ನನಗೂ ಸಹ ಭಾಗವಹಿಸಲು ಅವಕಾಶ ದೊರೆತಿರುವುದು ಖುಷಿ ತಂದಿದೆ.

‘ದೇಶದ ಅಭಿವೃದ್ಧಿ ಚಿಂತನೆಗೆ ಒಂದು ಕ್ಯಾಂಪಸ್ ನಿರ್ಮಾಣ ಮಾಡಿರುವುದು ಇತಿಹಾಸದಲ್ಲಿ ಇದೇ ಮೊದಲು ಇರಬೇಕು’. ವಿಶ್ವದ 108 ಶಕ್ತಿಪೀಠಗಳನ್ನು ಪೂಜಿಸಿ ಕೆಲವು ಮಹತ್ತರವಾದ ಯೋಜನೆಗಳ ಅನುಷ್ಠಾನಕ್ಕೆ ಜಾಗೃತಿ ಮೂಡಿಸುವ ಕೆಲಸ ಈಗಾಗಲೇ ಆರಂಭವಾಗಿದೆ. ಇಡೀ ನಮ್ಮ ಕುಟುಂಬ ಈ ಕ್ಯಾಂಪಸ್ ಗೆ ಅರ್ಪಣೆ ಮಾಡಿಕೊಂಡು ಅಳಿಲು ಸೇವೆ ಸಲ್ಲಿಸುತ್ತಿರವುದಾಗಿ ತಿಳಿಸಿದರು.

ರಮೇಶ್ ರವರಿಗೆ ಯಾವಾಗ ಏನು ಹೊಳೆಯುತ್ತದೋ ಅದನ್ನು ಭೂಮಿಯ ಮೇಲೆ ಇಳಿಸುವ ಕೆಲಸ ನನ್ನದಾಗಿದೆ, ಸುಮಾರು ನೂರಾರು ಭಾರಿ ಬದಲಾವಣೆಯಾಗಿದೆ. ಒಂದೊಂದು ಬದಲಾವಣೆಯೂ ಒಂದೊಂದು ಅನುಭವ ನೀಡಿದೆ. ನನಗೆ ಬೇಸರವೇ ಆಗಿಲ್ಲ. ಎಲ್ಲರೂ ಪೇಪರ್ ಮೇಲೆ ಲೇ ಔಟ್ ಅಂತಿಮಗೊಳಿಸಿದರೇ ನಾವು ಇಲ್ಲಿ ಲೈವ್ ಆಗಿ ಭೂಮಿಯ ಮೇಲೆ ಇಳಿಸಿ ನಂತರ ಹಲವಾರು ಜನರನ್ನು ಕರೆತಂದು ಅವರ ಸಲಹೆಗಳ ನಂತರ ಸೂಕ್ತ ಬದಾಲಾವಣೆ  ಮಾಡುವ ಮೂಲಕ ಒಂದು ಅಂತಿಮ ರೂಪು ಕೊಡಲಾಗಿದೆ.

ಇನ್ನೆನೀದ್ದರೂ ಕಟ್ಟಡಗಳ ನಿರ್ಮಾಣದಲ್ಲಿ ಮಾತ್ರ ಬದಲಾಗಬಹುದು. ಲೇ ಔಟ್ ಬದಲಾವಣೆ ಮಾಡದ ರೀತಿ ಭೂಮಿಯ ಮೇಲೆ ಇಳಿಸಲಾಗಿದೆ. ಮೊದಲ ಕಟ್ಟಡ ಅನ್ನದೇವತೆ’ ಯದ್ದಾಗಿದೆ. ಆಗ್ನೇಯದಲ್ಲಿ ಇಂದು ಕಟ್ಟಡ ನಿರ್ಮಾಣಕ್ಕೆ ಪೂಜೆ ಮಾಡಲಾಗಿದೆ.ಇದೇ ಕಟ್ಟಡ ಅನ್ನದ ಜೊತೆಗೆ ‘ಮೆದುಳಿಗೂ’ ಸ್ಥಾನ ನೀಡಲು, ದೇಶದ 37 ರಾಜ್ಯಗಳ ಒಬ್ಬೊಬ್ಬ ಪ್ರತಿನಿಧಿ ಇದೇ ಕಟ್ಟಡದಲ್ಲಿ ತಂಗಲು ವ್ಯವಸ್ಥೆ ಮಾಡಲು ಚಿಂತಿಸಲಾಗಿದೆ.

2022 ರ ಮೇ ತಿಂಗಳಿನಲ್ಲಿ ಇದೇ ಕಟ್ಟಡದಲ್ಲಿ ಮೊದಲ ವಿಷನ್ ಗ್ರೂಪ್’ ಸಭೆ ಆರಂಭಿಸುವ ನಿರ್ದಿಷ್ಠ ಗುರಿ ಹಾಕಿಕೊಳ್ಳಲಾಗಿದೆ. ಅಷ್ಟರೊಳಗೆ ಈ ಕ್ಯಾಂಪಸ್ ನನ್ನಂತಹ ನೂರಾರು ಕುಟುಂಬಗಳ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲಾಗಿದೆ.ನಮ್ಮ ಇಡೀ ಕುಟುಂಬ ಇಂದು ಭಾಗವಹಿಸುವ ಮೂಲಕ ತಾಯಿ ದೇವತೆಯ ಸೇವೆ ಮಾಡಲು ಆರಂಭಿಸಿದ್ದೇವೆ ಎಂದು ಹರ್ಷ ವ್ಯಕ್ತ ಪಡಿಸಿದರು.

ಅವರು ಶಕ್ತಿಪೀಠ ಫೌಂಡೇಷನ್ ನ ಎರಡನೇ ವಾರ್ಷಿಕೋತ್ಸವ ಮತ್ತು ಕಟ್ಟಡದ ಶಂಕುಸ್ಥಾಪನೆ ಸಮಾರಂಭದಲ್ಲಿ ಬಾಗವಹಿಸಿ ಮಾತನಾಡಿದರು.