7th December 2023
Share

TUMAKURU:SHAKTHIPEETA FOUNDATION

ಪ್ರಧಾನಿ ಶ್ರೀ ನರೇಂದ್ರಮೋದಿಯವ ಡಿಜಿಟಲ್ ಇಂಡಿಯಾದಲ್ಲಿ ಪ್ರತಿ ದಿವಸ ಸರ್ವರ್ ಪ್ರಾಬ್ಲಮ್ ನಿಂದ  ದಿನಕ್ಕೆ ಕೋಟ್ಯಾಂತರ ಮಾನವ ದಿನ ನಷ್ಟವಾಗಲಿದೆ, ಇದಕ್ಕೆ ಪರಿಹಾರ ದೊರಕಿಸಲೇ ಬೇಕು ಎಂಬ ವ್ಯಾಪಕ ಬೆಂಬಲ ದೊರೆತಿದೆ.ನಿನ್ನೆ ಬರೆದ ಲೇಖನ ನೂರಾರು ಜನರನ್ನು ಜಾಗೃತಿ ಗೊಳಿಸಿದೆ.

ದೇಶದ ಯಾವುದೇ ಕಚೇರಿಗೆ ಸಾರ್ವಜನಿಕರು ಸರ್ಕಾರಿ ಸೇವೆ ಪಡೆಯಲು ಹೋದಾಗ ಸರ್ವರ್ ಪ್ರಾಬ್ಲಮ್ ಇರುವ ಬಗ್ಗೆ ಮೊದಲೇ ಹಿಂದಿನ ದಿನವೇ ಪ್ರಕಟಣೆ ಮಾಡಬೇಕು. ಒಂದು ವೇಳೆ   ಅಚಾನಕ್ ಆಗಿ ದಿನ ಗಟ್ಟಲೇ ಸಾರ್ವಜನಿಕರು ಕಾಯಬೇಕಾದ ಸಂದರ್ಭ ಬಂದಲ್ಲಿ ನಿರ್ವಹಣೆ ಮಾಡುವ ಕಂಪನಿ ಅವರಿಗೆ ದಿನಗೂಲಿ ನೀಡುವ ವ್ಯವಸ್ಥೆ ಜಾರಿಯಾಗಲೇ ಬೇಕು ಎಂಬ ಸಲಹೆಗಳು ಬರುತ್ತಿವೆ.

ಸುಮಾರು ಒಂದು ಗಂಟೆ ಕಾದರೂ ಪರವಾಗಿಲ್ಲ, ವಾರ ಗಟ್ಟಲೇ ಸರ್ವರ್ ಪ್ರಾಬ್ಲಮ್ ಆದರೇ ಏನರ್ಥ? ಎಂದು ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ. ಈ ವ್ಯವಸ್ಥೆಯ ಹೊಣೆಗಾರಿಕೆಯನ್ನು ಪ್ರಧಾನಿ ಕಾರ್ಯಾಯಲವೇ ನೇರವಾಗಿ ನಿರ್ವಹಣೆ ಮಾಡಬೇಕು. ಈ ಅವ್ಯವಸ್ಥೆ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತಲೇ ಬೇಕು ಎಂಬ ಸಲಹೆ ನೀಡಿದ್ದಾರೆ.

ಕೋಟಿಗಟ್ಟಲೇ ಹಣವನ್ನು ನಿರ್ವಹಣೆಗಾಗಿ ಪಡೆಯುವ ಕಂಪನಿಗಳು ಜನರನ್ನು ನಾಯಿಗಿಂತ ಕಡೆಯಾಗಿ ಕಾಣುತ್ತಿವೆ ಎಂಬ ಅಸಹನೆ ಜನರಲ್ಲಿ ಮೂಡಿದೆ. ಇದು ಜನರ ಧ್ವನಿಯಾಗಲು ಒಂದು ವೇದಿಕೆ ಬೇಕೆಂದು ಸಾವಿರಾರು ಜನ ನೊಂದವರು ಕಾಯುತ್ತಿದ್ದಾರೆ ಎಂಬ ಸಲಹೆಗಳು ಮೂಡಿವೆ.

ನೀವೇನಂತಿರಾ? CM -PM SIR

About The Author