TUMAKURU:SHAKTHIPEETA FOUNDATION
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ವರು ತುಮಕೂರು ಜಿಲ್ಲೆಗೆ ಸಂಭಂದಿಸಿದ ಪ್ರತಿಯೊಂದು ಇಲಾಖೆಗಳ ಯೋಜನೆಗಳ ಮಾಹಿತಿ ನೀಡಲು ಎಲ್ಲಾ ಇಲಾಖೆಗಳಿಗೆ ಕೆಲಸ ಹಚ್ಚಿದ್ದಾರೆ.
ಉದಾಹರಣೆ ನೀಡುವುದಾದರೆ 2016 ರಿಂದ ಇದೂವರೆಗೂ ಕೇಂದ್ರ ಸರ್ಕಾರದಲ್ಲಿ ನೆನೆಗುದಿಗೆ ಬಿದ್ದಿರುವ ಮಧುಗಿರಿ ಏಕಶಿಲಾ ಬೆಟ್ಟದ ಯೋಜನೆಗೆ ಅನುಮತಿ ನೀಡುವ ಕಡತದ ಬಗ್ಗೆ ಶ್ರಮಿಸದೇ ಇರುವ ಜಡತ್ವ ಹೊಂದಿರುವ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.
ಲೋಕಸಭಾ ಸದಸ್ಯರನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬ ಸಾಮಾನ್ಯ ಜ್ಞಾನ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಬರಬೇಕು. ಇದು ಪ್ರತಿ ಜಿಲ್ಲೆಯಲ್ಲೂ ಜಾರಿಗೆ ಬರಬೇಕು. ಕೇಂದ್ರದಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳ ಬಗ್ಗೆ ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ಪ್ರಗತಿ ಬಗ್ಗೆ ಚರ್ಚೆ ನಡೆಯುಂತಾಗಲು ಒಂದು ಹೊಸ ಆಲೋಚನೆ ಇದಾಗಲಿದೆ.
ತುಮಕೂರು ಜಿಲ್ಲೆಯಲ್ಲಿ ಐದು ಯೋಜನೆಗಳ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮೂಲಕ ಸಲ್ಲಿಸಲು ಸಂಸದರು ಸೂಚಿಸಿದ್ದಾರೆ.
- ಮಧುಗಿರಿಯಲ್ಲಿ ಮೆಗಾ ಟೆಕ್ಸ್ ಟೈಲ್ ಇಂಡಸ್ಟ್ರಿಯಲ್ ಪಾರ್ಕ್.
- ಗುಬ್ಬಿಯಲ್ಲಿ ಖೇಲೋ ಇಂಡಿಯಾ ಕ್ರೀಡಾ ಗ್ರಾಮ.
- ತುಮಕೂರು ಜಿಲ್ಲೆಯಾದ್ಯಾಂತ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಯ ಪರಿಷ್ಟøತ ಪ್ರಸ್ತಾವನೆ.
- ಹೇಮಾವತಿ ಅಚ್ಚುಕಟ್ಟು ಪ್ರದೇಶಲ್ಲಿ ಮೈಕ್ರೋ ಇರ್ರಿಗೇಷನ್ ಯೋಜನೆಯ ಪ್ರಸ್ತಾವನೆ.
- ತುಮಕೂರಿನ ದೇವರಾಯನ ದುರ್ಗದಲ್ಲಿ ಚಿರತೆ ವನ.
ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಗಳು ಸೇರಿಕೊಂಡು ಅಗತ್ಯವಿರುವ ಪ್ರಸ್ತಾವನೆಗಳು ಮತ್ತು ನೆನೆಗುದಿಗೆ ಬಿದ್ದಿರುವ ಎಲ್ಲಾ ಯೋಜನೆಗಳ ಮಾಹಿತಿಯನ್ನು ದಿನಾಂಕ:17.09.2021 ರೊಳಗೆ ಸಲ್ಲಿಸುವ ಆಶಾಭಾವನೆ ಇದೆ.