27th July 2024
Share

TUMAKURU:SHAKTHIPEETA FOUNDATION

ಅಪೂರ್ಣವಾದ ಮಾಹಿತಿ ಪರಿಶೀಲಿಸಿ ನಂತರ ತುಮಕೂರು ಜಿಲ್ಲೆ ಒಂದು ಯುನಿಟ್ ಎಂದು ಭಾವಿಸಿ, ಜಿಲ್ಲೆಯ 10 ತಾಲ್ಲೂಕುವಾರು ಕೆಳಕಂಡ ವಿವರವುಳ್ಳ ನಕ್ಷೆ ಮತ್ತು ಕೆರೆಗಳ ಪಟ್ಟಿಯನ್ನು, ನದಿ ಪಾತ್ರಗಳವಾರು ಮತ್ತು ಕೆರೆಗಳ ಮಾಲೀಕತ್ವದ ವಿವರಗಳೊಂದಿಗೆ 5 ದಿವಸದೊಳಗೆ ನೀಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಗಳ ಸಭೆಯಲ್ಲಿ ಸೂಚಿಸಿದ್ದರು.

ದಿನಾಂಕ:08.09.2021 ರಂದು ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಗಳೊಂದಿಗೆ ಸಮಾಲೋಚನೆ ನಡೆಸಲಾಯಿತು. ದಿನಾಂಕ:13.09.2021 ರಂದು ಸಂಸದರು ಕೇಳಿರುವ ಪಕ್ಕಾ ಮಾಹಿತಿ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪಾವಗಡದ ಶ್ರೀ ಶಿವಪ್ರಸಾದ್ ಇದ್ದರು.

ಸಂಸದರು ಸೂಚಿಸಿದ್ದ ಮಾಹಿತಿಗಳ ಪಟ್ಟಿ ಕೆಳಕಂಡತಿದೆ.

1.ಹೇಮಾವತಿ ಯೋಜನೆ

  1. ಹೇಮಾವತಿ ಯೋಜನೆಯಿಂದ ಕುಡಿಯುವ ನೀರಿನ ಯೋಜನೆಗೆ ಅಲೋಕೇಷನ್ ಆಗಿರುವ ಕೆರೆಗಳು.
  2. ಹೇಮಾವತಿ ಯೋಜನೆಯಿಂದ ತುಂಬಿಸ ಬಹುದಾದ ಅಚ್ಚುಕಟ್ಟು ಪ್ರದೇಶದ ಕೆರೆಗಳ ಅಲೋಕೇಷನ್.
  3. ಹೇಮಾವತಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಮೈಕ್ರೋ ಇರ್ರಿಗೇಷನ್ ಗೆ ಅಗತ್ಯವಿರುವ ನೀರು.
  4. ಹೇಮಾವತಿ ಯೋಜನೆಯಿಂದ ಅಂತರ್ಜಲ ಅಭಿವೃದ್ಧಿಗೆ ಅಲೋಕೇಷನ್ ಆಗಿರುವ ಕೆರೆಗಳು.
  5. ಹೇಮಾವತಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರುವ ಕೆರೆಗಳ ನೀರನ್ನು ಜಲಜೀವನ್ ಮಿಷನ್ ಯೋಜನೆಗೆ ಬಳಸಬಹುದಾದ ಕೆರೆಗಳು.
  6. ಹೇಮಾವತಿ ಯೋಜನೆಯಿಂದ ನಗರ ಪ್ರದೇಶಗಳ ವ್ಯಾಪ್ತಿಗೆ ಅಲೋಕೇಷನ್ ಆಗಿರುವ ಕೆರೆಗಳು.
  7. ಹೇಮಾವತಿ ಯೋಜನೆಯಿಂದ ಕೈಗಾರಿಕೆಗೆ ಅಲೋಕೇಷನ್ ಆಗಿರುವ ಕೆರೆಗಳು.
  8. ಹೇಮಾವತಿ ವ್ಯಾಪ್ತಿಯಲ್ಲಿ ಇದೂವರೆಗೂ ಯಾವುದೇ ನದಿ ನೀರು ಅಲೋಕೇಷನ್ ಆಗದೆ ಇರುವ ಕೆರೆಗಳು.
  9. ಹೇಮಾವತಿ ಅಚ್ಚುಕಟ್ಟು ಪ್ರದೇಶದಲ್ಲಿ ಕೆರೆ-ಕಟ್ಟೆಗಳಲ್ಲಿದ ಗ್ರಾಮಗಳು.

2.ಭಧ್ರಾ ಮೇಲ್ದಂಡೆ ಯೋಜನೆ.

  1. ಭಧ್ರಾ ಮೇಲ್ದಂಡೆ ಯೋಜನೆಯಿಂದ  ಕುಡಿಯುವ ನೀರಿನ ಯೋಜನೆಗೆ ಅಲೋಕೇಷನ್ ಆಗಿರುವ ಕೆರೆಗಳು.
  2. ಭಧ್ರಾ ಮೇಲ್ದಂಡೆ ಯೋಜನೆಯಿಂದ ಅಂತರ್ಜಲ ಅಭಿವೃದ್ಧಿಗೆ ಅಲೋಕೇಷನ್ ಆಗಿರುವ ಕೆರೆಗಳು.
  3. ಭಧ್ರಾ ಮೇಲ್ದಂಡೆ  ಯೋಜನೆಯಿಂದ ಜಲಜೀವನ್ ಮಿಷನ್ ಯೋಜನೆಗೆ ಬಳಸಬಹುದಾದ ಕೆರೆಗಳು.
  4. ಭಧ್ರಾ ಮೇಲ್ದಂಡೆ  ಯೋಜನೆಯಿಂದ ಕೈಗಾರಿಕೆಗೆ ಅಲೋಕೇಷನ್ ಆಗಿರುವ ಕೆರೆಗಳು.
  5. ಭಧ್ರಾ ಮೇಲ್ದಂಡೆ  ಯೋಜನೆಯಿಂದ ನಗರಗಳ ಕುಡಿಯುವ ನೀರಿಗೆ ಅಲೋಕೇಷನ್ ಆಗಿರುವ ಕೆರೆಗಳು.

3.ಎತ್ತಿನ ಹೊಳೆ ಯೋಜನೆ.

  1. ಎತ್ತಿನ ಹೊಳೆ ಯೋಜನೆಯಿಂದ  ಕುಡಿಯುವ ನೀರಿನ ಯೋಜನೆಗೆ ಅಲೋಕೇಷನ್ ಆಗಿರುವ ಕೆರೆಗಳು.
  2. ಎತ್ತಿನ ಹೊಳೆ ಯೋಜನೆಯಿಂದ ಅಂತರ್ಜಲ ಅಭಿವೃದ್ಧಿಗೆ ಅಲೋಕೇಷನ್ ಆಗಿರುವ ಕೆರೆಗಳು.
  3. ಎತ್ತಿನ ಹೊಳೆ ಯೋಜನೆಯಿಂದ ಜಲಜೀವನ್ ಮಿಷನ್ ಯೋಜನೆಗೆ ಬಳಸಬಹುದಾದ ಕೆರೆಗಳು.
  4. ಎತ್ತಿನ ಹೊಳೆ ಯೋಜನೆಯಿಂದ ಕೈಗಾರಿಕೆಗೆ ಅಲೋಕೇಷನ್ ಆಗಿರುವ ಕೆರೆಗಳು.
  5. ಎತ್ತಿನ ಹೊಳೆ ಯೋಜನೆಯಿಂದ ನಗರಗಳ ಕುಡಿಯುವ ನೀರಿಗೆ ಅಲೋಕೇಷನ್ ಆಗಿರುವ ಕೆರೆಗಳು.

4.ತುಂಗಾ ಭಧ್ರಾ ಯೋಜನೆ

  1. ತುಂಗಾ ಭಧ್ರಾ  ಯೋಜನೆಯಿಂದ  ಕುಡಿಯುವ ನೀರಿನ ಯೋಜನೆಗೆ ಅಲೋಕೇಷನ್ ಆಗಿರುವ ಕೆರೆಗಳು.
  2. ತುಂಗಾ ಭಧ್ರಾ  ಯೋಜನೆಯಿಂದ ಅಂತರ್ಜಲ ಅಭಿವೃದ್ಧಿಗೆ ಅಲೋಕೇಷನ್ ಆಗಿರುವ ಕೆರೆಗಳು.
  3. ತುಂಗಾ ಭಧ್ರಾ  ಯೋಜನೆಯಿಂದ ಜಲಜೀವನ್ ಮಿಷನ್ ಯೋಜನೆಗೆ ಬಳಸಬಹುದಾದ ಕೆರೆಗಳು.
  4. ತುಂಗಾ ಭಧ್ರಾ  ಯೋಜನೆಯಿಂದ ಕೈಗಾರಿಕೆಗೆ ಅಲೋಕೇಷನ್ ಆಗಿರುವ ಕೆರೆಗಳು.
  5. ತುಂಗಾ ಭಧ್ರಾ  ಯೋಜನೆಯಿಂದ ನಗರಗಳ ಕುಡಿಯುವ ನೀರಿಗೆ ಅಲೋಕೇಷನ್ ಆಗಿರುವ ಕೆರೆಗಳು.

5.ಕುಮಾರ ಧಾರ ಯೋಜನೆ ಅಥವಾ ಇತರೆ ನದಿ ಯೋಜನೆ

  1. ತುಮಕೂರು ಜಿಲ್ಲೆಯ ಕೆರೆಗಳಿಗೆ ಯಾವುದೇ ನದಿ ನೀರಿನಿಂದ ಅಲೋಕೇಷನ್ ಆಗದೇ ಇರುವ ಕೆರೆಗಳು
  2. ತುಮಕೂರು ಜಿಲ್ಲೆಯ ಕೆರೆ-ಕಟ್ಟೆಗಳಿಲ್ಲದ ಗ್ರಾಮಗಳಲ್ಲಿ  ಯಾವುದೇ ವಿಧವಾದ ಜಲ ಸಂಗ್ರಹಾಗಾರ ನಿರ್ಮಾಣ ಮಾಡಿ ಅಗತ್ಯವಿರುವ ನದಿ ನೀರು.
  3. ತುಮಕೂರು ಜಿಲ್ಲೆಯ ಎಲ್ಲಾ ಕೆರೆಗಳನ್ನು ಶೇ 100 ರಷ್ಟು ತುಂಬಿಸಲು ಅಗತ್ಯವಿರುವ ನೀರು