TUMAKURU:SHAKTHI PEETA FOUNDATION
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಗದಗ ಜಿಲ್ಲೆಯ ಮುಂಡರಗಿ ತಾಲ್ಲೋಕಿನ ಹಿರೆವಡ್ಡಹಟ್ಟಿ ಡ್ಯಾಂ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರಿಗೆ ಪತ್ರ ಬರೆದಿದ್ದಾರೆ.
‘ಈಬಗ್ಗೆ ಬಸವರಾಜ್ ರವರು ಎಲ್ಲಾದರೂ ಭಾಷಣ ಮಾಡಿದರೆ, ಕೆಲವರು ಬಸವರಾಜ್ ರವರು ಕೊಪ್ಪಳ ಲೋಕಸಭಾ ಕ್ಷೇತ್ರದ ಎಂಪಿನಾ! ಗದಗ ಜಿಲ್ಲೆಯ ಉಸ್ತುವಾರಿ ಸಚಿವರಾ! ಎನ್ನುತ್ತಾರೆ’.
ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು, ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಾನು ಕಳೆದ 3 ದಶಕಗಳಿಂದಲೂ ಕರ್ನಾಟಕ ರಾಜ್ಯದ, ಭಾರತ ದೇಶದ ನೀರಾವರಿ ಬಗ್ಗೆ ಚರ್ಚೆ ಮಾಡಿದ್ದೇವೆ. ಇದೇ ರೀತಿ ಪತ್ರ ಬರೆದಿದ್ದೇವೆ. ಬಹುಷಃ ಬಹುಪಾಲು ನಮ್ಮ ಜೀವನ ಜಲಸಂಪನ್ಮೂಲ ಇಲಾಖೆಯ ಕಚೇರಿಗಳಲ್ಲಿ ಕಳೆದಿದೆ.
‘ನಮ್ಮ ರಾಜ್ಯಕ್ಕೆ ಬೇಡವಾದ ಯೋಜನೆಗೆ ಕೇಂದ್ರ ಸರ್ಕಾರದ ಕೆಲವು ಅಧಿಕಾರಿಗಳಿಗೆ ವಿಶೇಷ ಆಸಕ್ತಿ ಹೇಗಿದೆ ನೋಡಿ.(ಮಾಹಿತಿಗಾಗಿ ಪತ್ರ ಓದಿ)’
ಈ ಡ್ಯಾಂನಿಂದ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರ ಕ್ಷೇತ್ರಕ್ಕೂ ಅನೂಕೂಲ ವಾಗಲಿದೆಯಂತೆ.
ಹಿರೇವಡ್ಡಟ್ಟಿ ಎಂದು ಗದಗ ಜಿಲ್ಲೆಯ ಒಬ್ಬರು ಮಾತನಾಡಿದ್ದಾರೆ ಈ ಗ್ರಾಮದ ಹೆಸರು ಉಚ್ಚಾರಣೆ ?