22nd December 2024
Share

TUMAKURU:SHAKTHIPEETA FOUNDATION

ತುಮಕೂರು ಹೇಮಾವತಿ ನಾಲಾವಲಯದ ಮುಖ್ಯ ಇಂಜಿನಿಯರ್ ಜೊತೆ ತುಮಕೂರು ಜಿಲ್ಲಾ ದಿಶಾ ನಿರ್ಣಯಗಳ ಜಾರಿ ಬಗ್ಗೆ ಸಮಾಲೋಚನೆ ನಡೆಸಲು ಕಚೇರಿಗೆ ಹೋದಾಗ ಮುಖ್ಯ ಇಂಜಿನಿಯರ್ ಲಭ್ಯವಿಲ್ಲದ ಕಾರಣ ಇಇ  ಶ್ರೀ ಮೋಹನ್ ಕುಮಾರ್ ರವರೊಂದಿಗೆ ಸಮಾಲೋಚನೆ ನಡೆಸಲಾಯಿತು.

ಕಾವೇರಿ ನೀರಾವರಿ ನಿಗಮದ ಹೇಮಾವತಿ ಅಚ್ಚು ಕಟ್ಟು ವ್ಯಾಪ್ತಿಯ ಕೆರೆಗಳಿಗೆ ನೀರು ಅಲೋಕೇಷನ್ ಆಗಿರುವ ಬಗ್ಗೆ, ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿಗಾಗಿ ಗುರುತಿಸಿರುವ ಕೆರೆಗಳ ಬಗ್ಗೆ, ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಮೈಕ್ರೋ ಇರ್ರಿಗೇಷನ್ ಯೋಜನೆ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು.

ಸಣ್ಣ ನೀರಾವರಿ ಇಲಾಖೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಹಿನ್ನಲೆಯಲ್ಲಿ ತಾವೂ ಸಹ ಮೈಕ್ರೋ ಇರ್ರಿಗೇಷನ್ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ವಿಳಂಭ ಏಕೆ ಮಾಡಲಾಗಿದೆ ಎಂಬ ಪ್ರಶ್ನೆಗೆ ನಿಗಮದ ವ್ಯವಸ್ಥಾಪಕರೊಂದಿಗೆ ಸಮಾಲೋಚನೆ ನಡೆಸಿ ನಂತರ ನಿಖರವಾದ ಮಾಹಿತಿ ನೀಡುವುದಾಗಿ ತಿಳಿಸಿದರು.