TUMAKURU:SHAKTHIPEETA FOUNDATION
ಲೋಕಸಭಾ ಸದಸ್ಯರು ಮತ್ತು ತುಮಕೂರು ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕಾವೇರಿ ನೀರಾವರಿ ನಿಗಮದ ತುಮಕೂರು ನಾಲಾವಲಯದ ಮುಖ್ಯ ಇಂಜಿನಿಯರ್ ರವರಿಗೆ ಶೀಘ್ರವಾಗಿ ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿಯ ಕೆರೆ ಕಟ್ಟೆಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ನೀರು ನೀಡಲು ಕೆರೆಗೆ ನದಿ ನೀರು ತುಂಬಿಸಲು ಮತ್ತು ಮೈಕ್ರೋ ಇರ್ರಿಗೇಷನ್ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ವಿಷಯದಲ್ಲಿ ಚರ್ಚಿಸಲು ಸಭೆ ಕರೆಯಲು ಸೂಚಿಸಿದ್ದಾರೆ.
ಈಗಾಗಲೇ ಈ ಬಗ್ಗೆ ದಿಶಾ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಜೊತೆಗೆ ಎಲ್ಲಾ ಇಲಾಖೆಗಳಿಗೂ ಸಂಸದರು ಪತ್ರ ಬರೆದು ದೆಹಲಿಯಲ್ಲಿ ನೆನೆ ಗುದಿಗೆ ಬಿದ್ದಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಸೂಚಿಸಿದ್ದಾರೆ.
ಈ ಹಿನ್ನಲೆಯಲ್ಲಿ ಇಂದೇ (ದಿನಾಂಕ:14.09.2021 ರಂದು) ಸಂಜೆ ನಾಲ್ಕು ಗಂಟೆಗೆ ಸಭೆ ದಿಶಾ ತಪಾಸಣೆ ಸಭೆ ನಡೆಸುವುದಾಗಿ ಮುಖ್ಯ ಇಂಜಿನಿಯರ್ ರವರು ತಿಳಿಸಿದ್ದಾರೆ.
ದಿಶಾ ಸಭೆಯ ನಿರ್ಣಯದ ಅನುಪಾಲನಾ ವರದಿಗಳ ಬಗ್ಗೆ ಬಿಸಿ, ಬಿಸಿ ಚರ್ಚೆ ನಡೆಯ ಬಹುದು?