22nd December 2024
Share

TUMAKURU:SHAKTHI PEETA FOUNDATIN

ದೇಶದ ಯಾವೊಬ್ಬ ಸಂಸದರು ಸಹ ಜೀವ ವೈವಿಧ್ಯ ದಾಖಲಾತಿ ಸಭೆ ನಡೆಸಿದ ಉದಾಹರಣೆಗಳು ಇರಲಿಕ್ಕಿಲ್ಲ.ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ಮಹಾನಗರ ಪಾಲಿಕೆಯ ಮಟ್ಟದಲ್ಲಿ ಪ್ರಗತಿ ಪರಿಶೀಲನೆ ನಡೆಸುವ ಮೂಲಕ ಎಲ್ಲಾ ಸಂಸದರ ಕಣ್ಣು ತೆರೆಸಿದ್ದಾರೆ.

ನಮ್ಮೂರ ಪಾರ್ಕ್ ರಕ್ಷಣೆ ನಮ್ಮೆಲ್ಲರ ಹೊಣೆ: ಆಂದೋಲನ ರೂಪಿಸಿದ ದಿನ 360 ಪಾರ್ಕ್‍ಗಳನ್ನು ಜಿಐಎಸ್ ಲೇಯರ್ ಮಾಡಲಾಗಿತ್ತು. ಇಂದು 30 ಪಾರ್ಕ್‍ಗಳನ್ನು ಹೆಚ್ಚುವರಿಯಾಗಿ ಗುರುತಿಸಲಾಗಿದೆ. ತಿಂಗಳಿಗೆ ಕಡ್ಡಾಯವಾಗಿ 30 ಪಾರ್ಕ್ ಗಳನ್ನು ಗುರುತಿಸುವ ಭರವಸೆ ನೀಡಿದ್ದಾರೆ.

ನಾಟಿ ವೈಧ್ಯರು, ಪಾರಂಪರಿಕ ವೈಧ್ಯರು ಮತ್ತು ಹಕೀಮರಿಗೆ ಗುರುತಿನ ಪತ್ರ: ಮುಂದಿನ ಸಭೆ ವೇಳೆಗೆ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ನಾಟಿ ವೈಧ್ಯರು, ಪಾರಂಪರಿಕ ವೈಧ್ಯರು ಮತ್ತು ಹಕೀಮರನ್ನು ಗುರುತಿಸಿ ಗುರುತಿನ ಪತ್ರ ನೀಡಲು ಮಹತ್ತರವಾದ ನಿರ್ಣಯ ಕೈಗೊಳ್ಳಲಾಯಿತು.

ಕರಾಬುಹಳ್ಳಗಳ ಖಚಿತ ಮಾಹಿತಿ: ಮುಂದಿನ ಸಭೆ ವೇಳೆಗೆ ತುಮಕೂರು ನಗರದ ಎಲ್ಲಾ ಕರಾಬುಹಳ್ಳಗಳ ಹೆಸರು ಸಹಿತ ಜಿಐಎಸ್ ಲೇಯರ್ ಪೂರ್ಣಗೊಳಿಸಲು ಸೂಚನೆ.

ನೀರಿನ ಗುಣ ಮಟ್ಟ: ತುಮಕೂರು ನಗರದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಬೋರ್ ವೆಲ್ ನೀರಿನ ಗುಣಮಟ್ಟದ ಜಿಐಎಸ್ ಲೇಯರ್ ಮಾಡಲು ಸೂಚಿಸಲಾಯಿತು.

ಕೆರೆಗಳ ಜಿಐಎಸ್ ಲೇಯರ್: ಕೆರೆಗಳ ಜಿಐಎಸ್ ಲೇಯರ್ ಪರಿಶೀಲಿಸಿ ಹೇಮಾವತಿ ನದಿ ನೀರಿನ ಮಾಹಿತಿ ಅಪ್ ಲೋಡ್ ಮಾಡಲು ಸೂಚಿಸಲಾಯಿತು. ಕೊಳಚೆ ನೀರು ಬರುತ್ತದೆ ಎಂಬ ಬಗ್ಗೆ ಮಾಹಿತಿ ಅಫ್ ಲೋಡ್ ಮಾಡಲು ಸೂಚಿಸಲಾಯಿತು.

ಮ್ಯಾನ್ ಹೋಲ್ : ಮ್ಯಾನ್ ಹೋಲ್ ಜಿಐಎಸ್ ಲೇಯರ್ ಪರಿಶೀಲಿಸಿ, ಹುಕ್ಕಿ ಹರಿಯವ ಕೊಳಚೆ ನೀರಿನ ಮ್ಯಾನ್ ಹೋಲ್ ಗುರುತಿಸಲು ಮತ್ತು ರಸ್ತೆಗಿಂತ ಎತ್ತರ ಇರುವ ಮ್ಯಾನ್ ಹೋಲ್ ಜಿಐಎಸ್ ಲೇಯರ್ ಮಾಡಲು ಸೂಚಿಸಲಾಯಿತು.

ಸ್ಮಶಾನ: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸ್ಮಶಾನಗಳ ಜಿಐಎಸ್ ಲೇಯರ್ ಪೂರ್ಣಗೊಳಿಸಲು ಸೂಚಿಸಲಾಯಿತು.

ಓಪನ್ ಸ್ಪೇಸ್: ಬಯಲು ಪ್ರದೇಶಗಳ ಮತ್ತು ಆಟದ ಮೈದಾನಗಳ ಜಿಐಎಸ್ ಲೇಯರ್ ಮಾಡಲು ಸೂಚಿಸಲಾಯಿತು.

ಜೀವ ವೈವಿಧ್ಯ ಪಾರ್ಕ್ : ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಜೀವ ವೈವಿಧ್ಯ ಪಾರ್ಕ್ ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಲಾಯಿತು.

ಜೀವ ವೈವಿಧ್ಯ ದಾಖಲಾತಿಯಲ್ಲಿ ಇರುವ ಎಲ್ಲಾ 25 ಅಂಶಗಳ ಬಗ್ಗೆ ನಿರ್ಧಿಷ್ಠ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸಂಸದರು ಖಡಕ್ ಸೂಚಿಸಿದರು.