TUMKURU:SHAKTHIPEETA FOUNDATION
ಅಧಿಕಾರಿಗಳ ಪಾತ್ರ
ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಘೋಷಣೆ ಮಾಡಿರುವ ಹೌಸಿಂಗ್ ಫಾರ್ ಆಲ್-2022 ಯೋಜನೆಗಳ ಬಗ್ಗೆ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಂದಿನ 30 ದಿವಸದೊಳಗೆ ತುಮಕೂರು ಜಿಲ್ಲೆಯ 330 ಗ್ರಾಮಪಂಚಾಯಿತಿಗಳ ಪ್ರತಿಯೊಂದು ಗ್ರಾಮದಲ್ಲಿ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿವೇಶನ ರಹಿತರಿಗೆ ಅನುಗುಣವಾಗಿ ಅಗತ್ಯವಿರುವ ನಿವೇಶನಕ್ಕೆ ಸರ್ಕಾರಿ ಜಮೀನು ಅಥವಾ ಖಾಸಗಿ ಜಮೀನು ಕ್ರಯ ಮಾಡಿಕೊಳ್ಳಲು ಪ್ರಸ್ತಾವನೆ ಸಲ್ಲಿಸುವ ಮುಖಾಂತರ ಜಿಲ್ಲಾಡಳಿತ ತನ್ನ ಜವಾಬ್ಧಾರಿ ಪೂರ್ಣ ಗೊಳಿಸಲು ಜಿಲ್ಲಾಧಿಕಾರಿಯವರಾದ ಶ್ರೀ ವೈ.ಎಸ್.ಪಾಟೀಲ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಅದೇ ರೀತಿ 2014 ರಿಂದ ಮಂಜೂರಾದ ವಿವಿಧ ಯೋಜನೆಗಳ ಮನೆಗಳನ್ನು ಇನ್ನೂ ಪೂರ್ಣಗೊಳಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು, ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು ಮತ್ತು ಮತ್ತು ದಿಶಾ ಸದಸ್ಯ ಕಾರ್ಯದರ್ಶಿಯವರಾದ ಶ್ರೀ ಮತಿ ಕೆ.ವಿದ್ಯಾಕುಮಾರಿಯವರು ತೀವೃ ತರಾಟೆಗೆ ತೆಗೆದುಕೊಂಡರು.
ವಿವಿಧ ಇಲಾಖೆಯ ಅಧಿಕಾರಿಗಳು 30 ದಿವಸದೊಳಗಾಗಿ ಸ್ಪಷ್ಟ ಚಿತ್ರ ನೀಡುವ ಖಚಿತ ಭರವಸೆ ನೀಡಿದರು. ಒಂದು ರೀತಿ ಅಧಿಕಾರಿಗಳು ‘ಛಾಲೇಂಜ್’ ಆಗಿ ತೆಗೆದುಕೊಂಡಂತೆ ಕಾಣಿಸಿತು. ಇದೂವರೆಗೂ ಈ ರೀತಿ ಇಲಾಖಾವಾರು ಚರ್ಚೆ ನಡೆದ ಹಾಗೆ ಕಾಣಿಸಲಿಲ್ಲ. ‘ಗುಂಪಿನಲ್ಲಿ ಗೋವಿಂದ’ ಎಂಬಂತೆ ಆಗಿರ ಬಹುದು ಎನಿಸಿತು.
ಚುನಾಯಿತ ಜನಪ್ರತಿನಿಧಿಗಳ ಪಾತ್ರ.
1997 ರಿಂದ ನೋಟಿಫಿಕೇಷನ್ ಆದ ಭೂಮಿಯನ್ನು ಬಳಸಿಕೊಳ್ಳುವಲ್ಲಿ ವಿಫಲ, ಆಶ್ರಯ ಸಮಿತಿಗಳ ಸಭೆ ನಡೆಸದೆ, ಪಲಾನುಭವಿಗಳನ್ನು ಆಯ್ಕೆ ಮಾಡದೇ ‘ಮತದಾರ ಪ್ರಭುಗಳಿಗೆ ಮೋಸ ಮಾಡಿರುವ ಸ್ಪಷ್ಟ ಚಿತ್ರಣ’ ಇಂದಿನ ಸಭೆಯಲ್ಲಿ ಬಹಿರಂಗ ಗೊಂಡಿದೆ.
ಜಿಲ್ಲಾಡಳಿತ ಜಮೀನು ಮಂಜೂರು ಮಾಡಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ವಸತಿಗಾಗಿ ಕಾಲಮಿತಿ ಗಡುವು ನೀಡಿದ್ದರೂ ಡಿಪಿಆರ್ ಮಾಡಿ ಪ್ರಸ್ತಾವನೆ ಕಳುಹಿಸದೇ ಇರುವಲ್ಲಿ 11 ಜನ ಶಾಸಕರುಗಳ ಪಾತ್ರದ ಬಗ್ಗೆ ಅನುಮಾನ ಮೂಡಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪಾತ್ರ.
ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದ ನಂತರ ಮನೆಗಳಿಗೆ ಹಣ ಬಿಡುಗಡೆ ಮತ್ತು ಜಮೀನು ಕೊಳ್ಳಲು ಹಣ ಬಿಡುಗಡೆ ಮಾಡದೆ ಇರುವ ಪ್ರಕರಣ ಅತ್ಯಂತ ಕಡಿಮೆ. ಈ ರೀತಿ ಇರುವ ಎಲ್ಲಾ ಇಲಾಖೆಗಳ ಪಟ್ಟಿ ಸಿದ್ಧಪಡಿಸಲು ಸೂಚಿಸಿದ್ದಾರೆ.
ನಾಮನಿರ್ದೇಶಿತ ಸದಸ್ಯರ ಪಾತ್ರ
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣೆ ನಡೆಸುವುದಾಗಿ ಘೋಶಿಸಿದ ನಾಮನಿರ್ದೇಶಿತಸದಸ್ಯರು.
ತಕ್ಷಣ ಜಿಲ್ಲಾಧಿಕಾರಿವರು ಹೇಳಿದ ಮಾತು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೆಂಡಿಂಗ್ ಇದ್ದಲ್ಲಿ ನಮ್ಮ ಕಚೇರಿ ಮುಂದೆ ಕುಳಿತುಕೊಳ್ಳಿ.
ಯಾವ ಕಚೇರಿಯಲ್ಲಿ ವಿಳಂಭ ಆಗಿದೆ ಅಲ್ಲಿ ಕುಳಿತು ಕೊಳ್ಳಿ ಎನ್ನುವ ಮೂಲಕ ಅವರುಗಳ ಜವಾಬ್ಧಾರಿ ಏನು ಎಂಬ ಬಗ್ಗೆ ಮಾರ್ಮಿಕವಾಗಿ ತಿಳಿಸಿದರು.
ನಿವೇಶನ ರಹಿತರಿಗೆ ಜಮೀನು ಹುಡುಕದೇ ಇರುವ ಗ್ರಾಮಪಂಚಾಯಿತಿಗ¼, ತಹಶೀಲ್ಧಾರ್ ಕಚೇರಿಗಳ, ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಧರಣೆ ನಡೆಸುವ ಮೂಲಕ ಅಧಿಕಾರಿಗಳನ್ನು ಎಚ್ಚರಿಸುವುದು ಅಗತ್ಯ ಎಂಬ ಪ್ರತಿಪಾದನೆ.
‘ನಿವೇಶನಗಳಿಗಾಗಿಜಮೀನು ಇದ್ದರೂ ಆಶ್ರಯ ಸಮಿತಿ ಸಭೆ ನಡೆಸಿ ಪಲಾನುಭವಿಗಳ ಆಯ್ಕೆ ಮಾಡದೇ ಇರುವ ಶಾಸಕರ ಕಚೇರಿ ಮುಂದೆ ಧರಣೆ ನಡೆಸುವುದಾಗಿ ನಾಮನಿದೇಶಿತ ಸದಸ್ಯರು ಸಭೆಯಲ್ಲಿ ಘೋಷಣೆ ಮಾಡಿದ್ದು ಹೊಸ ಇತಿಹಾಸ ಸೃಷ್ಠಿಸಿದೆ.’
ಈಗಾಗಲೇ ನೀಡಿರುವ ಜಮೀನಿನನಲ್ಲಿ ವಸತಿ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳ ಬೇಕಾಗಿರುವುದು ಜಿಲ್ಲೆಯ 11 ವಿಧಾನ ಸಭಾ ಸದಸ್ಯರುಗಳ ಹೊಣೆಗಾರಿಕೆ. ನಮ್ಮದಲ್ಲ ಎನ್ನುವ ಮೂಲಕ ‘ಅಧಿಕಾರಿಗಳು ನಾಮ ನಿರ್ದೇಶಿತ ಸದಸ್ಯರಿಗೆ ಟಾಂಗ್’ ನೀಡಿದರು.
‘ಇನ್ನೂಕೆಲವು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಶಾಸಕರ ಕಚೇರಿಗೆ ಆಶ್ರಯ ಸಮಿತಿ ಸಭೆಗೆ ದಿನಾಂಕ ಸೂಚಿಸಿ ಎಂದು ಕಾದು ಕಾದು ಬಂದಿರುವ ಮಾಹಿತಿಯೂ ತಿಳಿಯಿತು’
ಶಾಸಕರುಗಳಿಗೆ ಬಡವರಿಗೆ ಮನೆ ನೀಡುವ ಮನಸ್ಸು ಇಲ್ಲವೇ?
2022 ರ ಗಡುವು ನೀಡಿರುವ ಪ್ರಧಾನಿ ಮೋದಿಯವರ ಘೋಷಣೆ ನನಸು ಮಾಡುವ ಮನಸ್ಸು ಇಲ್ಲವೇ?
ಕಡೇ ಪಕ್ಷ ರಾಜ್ಯ ಮತ್ತು ದೇಶ ಆಳುವ ಬಿಜೆಪಿ ಶಾಸಕರು ಹಿಂದೆ ಬಿದ್ದಿರುವ ಅರ್ಥವಾದರೂ ಏನು?
ಮುಂದಿನ ಸಭೆಯ ವಿಷಯಗಳು.
- ತುಮಕೂರು ಜಿಲ್ಲೆಯಲ್ಲಿನ 330 ಗ್ರಾಮಪಂಚಾಯಿತಿಗಳಲ್ಲಿನ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಯಾವ ಗ್ರಾಮಗಳಲ್ಲಿ, ಬಡಾವಣೆ ಅಥವಾ ವಾರ್ಡ್‍ಗಳಲ್ಲಿ ಶೇ 100 ರಷ್ಟು ನಿವೇಶನ ನೀಡಲಾಗಿದೆ. ಶೇ 100 ರಷ್ಟು ವಸತಿ ನೀಡಲಾಗಿದೆ ಎಂದು ಘೋಷಣೆ ಮಾಡುವುದು.
- ನಿವೇಶನ ರಹಿತರ ಗ್ರಾಮಗಳು, ಬಡಾವಣೆ ಅಥವಾ ವಾರ್ಡ್ ಎಷ್ಟು ಎಂದು ಘೋಷಣೆ ಮಾಡುವುದು.
- ಕಂದಾಯ ಇಲಾಖೆಯಿಂದ ಮಂಜೂರಾದ ಎಲ್ಲಾ ಜಮೀನುಗಳನ್ನು ಹಸ್ತಾಂತರ ಮಾಡುವುದು.
- ಯಾರು ವಿಳಂಭ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಕಾರಾರುವಕ್ಕಾಗಿ ಪಟ್ಟಿ ಮಾಡುವುದು.
- ಕೊಳಚೆ ಪ್ರದೇಶಗಳಲ್ಲಿ ಹಕ್ಕು ಪತ್ರಗಳನ್ನು ವಿತರಿಸಿರುವ ಮಾಹಿತಿ ಘೋಷಣೆ ಮಾಡುವುದು.
- ಯಾವ ಕೊಳಚೆ ಪ್ರದೇಶಗಳಲ್ಲಿ ಹಕ್ಕು ಪತ್ರ ನೀಡಲು ಸಾಧ್ಯವಿಲ್ಲವೋ ಅಂಥಹ ಪ್ರದೇಶಗಳಲ್ಲಿ ಪರ್ಯಾಯವಾಗಿ ಏನು ಮಾಡುವುದು ಎಂಬ ಬಗ್ಗೆ ಕ್ರಮಕೈಗೊಳ್ಳುವುದು.
- ಮುಸ್ಸಂದ್ರ ಟೂಡಾ ಲೇಔಟ್ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದು.
- ಹೌಸಿಂಗ್ ಬೋರ್ಡ್ ಬಾಕಿ ಇರುವ ಎಲ್ಲಾ ಯೋಜನೆಗಳ ಮಾಹಿತಿ ನೀಡುವುದು.
- ವಿಳಂಭವಾಗಿರುವ ವಿವಿಧ ಇಲಾಖೆಗಳ ಪ್ರತಿಯೊಂದು ವಸತಿ ಬಗ್ಗೆ ಸ್ಪಷ್ಠ ಮಾಹಿತಿ ನೀಡುವುದು.
ಪಾಯಿಂಟ್ ಟು ಪಾಯಿಂಟ್ ಚರ್ಚೆ, ಅನಗತ್ಯ ಮಾತುಗಳಿಗೆ ಅವಕಾಶವೇ ಇರಲಿಲ್ಲ.ಅಧ್ಯಕ್ಷರು ಮತ್ತು ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಮಾತ್ರ ಅಧಿಕಾರಿಗಳು ಉತ್ತರ ನೀಡಿದ್ದು ವಿಶಿಷ್ಠವಾಗಿತ್ತು.
ಇದು ಹೌಸಿಂಗ್ ಫಾರ್ ಆಲ್ – 2022 ಸಂಭಂಧಿಸಿದ ದಿಶಾ ಸಭೆಯ ವಿವರಗಳು
ನೀವೂ ಏನಂತಿರಾ?