TUMAKURU:SHAKTHIPEETA FOUNDATION
ದಿನಾಂಕ:16.09.2021 ನೇ ಗುರುವಾರ ಶಕ್ತಿಪೀಠ ಕ್ಯಾಂಪಸ್ ಗೆ ಬರಲು ಮತ್ತೊಮ್ಮೆ ಮನವಿ ಮಾಡಲಾಗಿದೆ.
- ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 2022 ರ ವೇಳೆಗೆ ರೈತರ ಆದಾಯ ದ್ವಿಗುಣ ಯೋಜನೆಯ ಮೌಲ್ಯಮಾಪನಕ್ಕೆ ವಿಷನ್ ಗ್ರೂಪ್ ರಚನೆ ಬಗ್ಗೆ ಚರ್ಚೆ ನಡೆಯಲಿದೆ.
- ಜೀವ ವೈವಿಧ್ಯ ದಾಖಲಾತಿ ಪ್ರಕಾರ ರಾಜ್ಯಾಧ್ಯಾಂತ ನಾಟಿ ವೈಧ್ಯರು, ಪಾರಂಪರಿಕ ವೈಧ್ಯರು ಮತ್ತು ಹಕೀಮರಿಗೆ ಗುರುತಿನ ಪತ್ರ ನೀಡುವ ಬಗ್ಗೆ ಚರ್ಚೆ ನಡೆಯಲಿದೆ.
- ಶಕ್ತಿಪೀಠ ಕ್ಯಾಂಪಸ್ ನಲ್ಲಿ ಔಷಧಿಗಿಡಗಳ ಡೆಮೋ ಪ್ಲಾಟ್ ಬಗ್ಗೆ ಚರ್ಚೆ ನಡೆಯಲಿದೆ.
- ದೇಶದ ಎಲ್ಲಾ ರೀತಿಯ ಔಷಧಿ ಗಿಡಗಳ ನರ್ಸರಿ ಬಗ್ಗೆ ಚರ್ಚೆ ನಡೆಯಲಿದೆ.
- ಔಷಧಿ ಗಿಡಗಳ ಪತ್ತೆಹಚ್ಚುವ ಬಗ್ಗೆ ಚರ್ಚೆ ನಡೆಯಲಿದೆ.
ಸಭೆ ನಡೆಯುವ ಸ್ಥಳ: ಶಕ್ತಿಪೀಠ ಕ್ಯಾಂಪಸ್, ವಡ್ಡನಹಳ್ಳಿ ಗ್ರಾಮದ ಹತ್ತಿರ. ಬಗ್ಗನಡು ಕಾವಲ್.ಗೌಡನಹಳ್ಳಿ ಗ್ರಾಮಪಂಚಾಯಿತಿ. ಜವಗೊಂಡನಹಳ್ಳಿ ಹೋಬಳಿ. ಹಿರಿಯೂರು ತಾಲ್ಲೂಕು. ಚಿತ್ರದುರ್ಗ ಜಿಲ್ಲೆ.
ಸಮಯ: ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ
ದಿನಾಂಕ:16.09.2021 ನೇ ಗುರುವಾರ.
‘ಸಭೆಗೆಆಗಮಿಸುವವರು ಯಾವುದಾದರೂ ಔಷಧಿ ಗಿಡ, ಬೀಜ, ಗಿಡ, ಬಳ್ಳಿ, ಕಡ್ಡಿ, ಹೊಸ ತಳಿ ಮಾಹಿತಿ, ಸೊಪ್ಪು ಸೆದೆ ಬೇರು ತಂದು ಭೂಮಿಯಲ್ಲಿ ಅಥವಾ ಪ್ಯಾಕೆಟ್ ನಲ್ಲಿ ನಾಟಿ ಮಾಡುವುದು ಕಡ್ಡಾಯ’.
ಉಚಿತ ಡಿಜಿಟಲ್ ನೊಂದಣೆ ಕಡ್ಡಾಯ: ಶ್ರೀ ಗುರುಸಿದ್ಧರಾದ್ಯ ಮೊಬೈಲ್- 9901010013 ಇವರೇ ಲೋಕೇಷನ್ ಕಳುಹಿಸುತ್ತಾರೆ
ಭಾಗವಹಿಸಿದವರಿಗೆ ಸರ್ಟಿಫಿಕೆಟ್ ನೀಡಲಾಗುವುದು.