TUMAKURU:SHAKTHIPEETA FOUNDATION
2022 ರೊಳಗೆ ದೇಶದ ನಾಟಿ ವೈಧ್ಯರ ಮೂಲಕ ರ್ಥರ ಆದಾಯ ದುಪ್ಪಟ್ಟು ಮಾಡುವುದು ಹೇಗೆ? ಎಂಬ ಬಗ್ಗೆ ಬಿಸಿ,ಬಿಸಿ ಚರ್ಚೆ ನಡೆಯಿತು.
- ಇದು ರಾಜ್ಯ ಮಟ್ಟದ ಸಮಾವೇಶವಾಗಿತ್ತು.
- ರಾಜ್ಯದ 100 ಕ್ಕೂ ಹೆಚ್ಚು ರಾಜ್ಯದ ನಾಟಿ ವೈಧ್ಯರು, ಪಾರಂಪರಿಕ ವೈಧ್ಯರು ಮತ್ತು ಹಕೀಮರು ಭಾಗವಹಿಸಿದ್ದರು.
- ಹಬ್ಬೆಟ್ಟು ವೈಧ್ಯರಿಂದ ಹಿಡಿದು ಹೈಟೆಕ್ ನಾಟಿವೈಧ್ಯರು ಆಗಮಿಸಿ ತಮ್ಮ ಅನುಭವ ಹಂಚಿಕೊಂಡರು.
- ನಾಟಿ ವೈಧ್ಯರ ಸೇವೆಯನ್ನು ಹೇಗೆ ರಫ್ತು ಮಾಡ ಬಹುದು ಎಂಬ ಬಗ್ಗೆಯೂ ಚರ್ಚೆ ನಡೆಯಿತು.
- ಜನತಾ ಜೀವ ವೈವಿಧ್ಯ ದಾಖಲಾತಿಯಲ್ಲಿ ರಾಜ್ಯದ ನಾಟಿ ವೈಧ್ಯರು, ಪಾರಂಪರಿಕ ವೈಧ್ಯರು ಮತ್ತು ಹಕೀಮರು ದಾಖಲಾತಿ ಬಗ್ಗೆ ಚರ್ಚೆ ನಡೆಯಿತು.
- ಇವರಿಗೆ ಗುರುತಿನ ಪತ್ರವನ್ನು ಯಾರು ನೀಡುತ್ತಿದ್ದಾರೆ? ಯಾವ ಮಾನದಂಡದ ಆಧಾರಗಳ ಮೇಲೆ ನೀಡುತ್ತಿದ್ದಾರೆ. ಪ್ರಸ್ತುತ ಏಕೆ ನಿಲ್ಲಿಸಿದ್ದಾರೆ ಎಂಬ ಬಗ್ಗೆಯೂ ಸಮಾಲೋಚನೆ ನಡೆಯಿತು.
- ಔಷಧಿ ಗಿಡಗಳ ಡೆಮೋ ಪ್ಲಾಟ್ ಬಗ್ಗೆಯೂ ವಿಚಾರ ವಿನಿಮಯ ಮಾಡಲಾಯಿತು.
- ಆಯುಷ್ ಇಲಾಖೆಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮೌಲ್ಯಮಾಪನ ಮತ್ತು ಡೇಟಾ ಬೇಸ್ ಮಾಡುವ ಬಗ್ಗೆಯೂ ಗಂಭೀರವಾಗಿ ಚರ್ಚೆ ನಡೆಯಿತು.
- ಅಧಿಕಾರಿಗಳು ಮತ್ತು ರೈತ ಸಂಘಟನೆಗಳ ಹಾಗೂ ನಾಟಿ ವೈಧ್ಯರ ಮಧ್ಯೆ ಇರುವ ಕಂದಕಗಳ ಬಗ್ಗೆಯೂ ಪ್ರತ್ಯಕ್ಷ ಅನುಭವ ಆಯಿತು.