22nd December 2024
Share

TUMAKURU:SHAKTHI PEETA FOUNDATION

ನಮ್ಮ ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆ, ಮೊಟ್ಟ ಮೊದಲ ನದಿ ಜೋಡಣೆಯಾಗಿ ಭಧ್ರಾಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುವ ತುದಿಗಾಲಲ್ಲಿ ನಿಂತಿದೆ. ಯಾವಾಗ ಬೇಕಾದರೂ ಘೋಷಣೆಯಾಗಲಿದೆ. ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಮತ್ತು ಶ್ರೀ ರಮೇಶ್ ಜಾರಕಿ ಹೊಳೆರವರ ಅವಧಿಯಲ್ಲಿ ಕಡತಕ್ಕೆ ವೇಗದ ಚಾಲನೆ ನೀಡಿದ್ದರೂ  ಈಗಿನ ಮುಖ್ಯ ಮಂತ್ರಿಯವರ ಪಾತ್ರವೂ ಇತ್ತು.

 ಜೊತೆಗೆ ಎತ್ತಿನಹೊಳೆ ಯೋಜನೆಯನ್ನು ನದಿ ಜೋಡಣೆಯಾಗಿ ಮಾರ್ಪಾಡು ಮಾಡಲು ಕೇಂದ್ರ ಸರ್ಕಾgದ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರಿಗೆ  ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಪತ್ರಬರೆದಿದ್ದಾರೆ.

ತುಮಕೂರು ಲೋಕಸಭಾ ಕೇತ್ರದ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಈಗಾಗಲೇ ಕೇಂದ್ರ ಸರ್ಕಾರದಲ್ಲಿ ಈ ಯೋಜನೆ ಜಾರಿಗೆ ಬೆನ್ನು ಹತ್ತಿದ್ದಾರೆ. ಮುಖ್ಯ ಮಂತ್ರಿಯವರು ಪತ್ರ ಬರೆದಿದ್ದೂ ಆನೇ ಬಲ ಬಂದಿದೆ.

ಈ ಬಗ್ಗೆ ರಾಜ್ಯದ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಮತ್ತು ವಿಜೆಎನ್‍ಎಲ್ ವ್ಯಸ್ಥಾಪಕ ನಿರ್ದೇಶಕರಾದ ಶ್ರೀ ಎನ್.ಲಕ್ಷಣರಾವ್‍ಪೇಶ್ವೆರವರೊಂದಿಗೆ ಎತ್ತಿನಹೊಳೆ ಎನ್.ಪಿ.ಪಿ ಯೋಜನೆಯಾಗಿ ಘೋಶಿಸಲು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಕಡತದ ಅನುಸರಣೆ ಮಾಡಲು ಸಮಾಲೋಚನೆ ನಡೆಸಿದರು.

ಬೇಡ್ತಿ ಮತ್ತು ವರದಾ ನದಿ ಜೋಡಣೆಗೂ ಚಾಲನೆ ದೊರೆಕಿದೆ, ಜೊತೆಗೆ ರಾಜ್ಯದ ನದಿ ಜೋಡಣೆ ಪ್ರಸ್ತಾವನೆ ಸಲ್ಲಿಸಲು ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅವಧಿಯಲ್ಲಿ ಆದೇಶ ಮಾಡಿದ್ದಾರೆ. ನೋಡೆಲ್ ಆಫೀಸರ್ ಆಗಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ರವರನ್ನು  ನೇಮಿಸಿದ್ದಾರೆ.

ರಾಜ್ಯದ ಚುಕ್ಕಾಣಿ ಹಿಡಿದಿರುವ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಸ್ವತಃ ನೀರಾವರಿ ತಜ್ಞರಾಗಿದ್ದಾರೆ. ಕಾಕತಾಳೀಯವಾಗಿ ನೀರಾವರಿ ತಜ್ಞರಾದ ಶ್ರೀ ಅನಿಲ್ ಕುಮಾರ್ ರವರನ್ನು ತಮ್ಮ ಆಪ್ತಕಾರ್ಯದರ್ಶಿಯಾಗಿ ನೇಮಕ ಮಾಡಿಕೊಳ್ಳುವ ಮೂಲಕ ಸರ್ಕಾರದ ದಿಕ್ಕು ಯಾವ ಕಡೆ ಇರಲಿದೆ ಎಂಬ ಮುನ್ಸೂಚನೆ ನೀಡಿದ್ದಾರೆ.

ಇದೇ ರೀತಿ ಮುಂದುವರೆದರೆ ಮತ್ತು ಕೇಂದ್ರ ಪ್ರತಿನಿಧಿಸುವ ರಾಜ್ಯದ ಸಚಿವರುಗಳು ತಮ್ಮ ತಾಕತ್ತು ಪ್ರದರ್ಶನ ಮಾಡಿದರೆ, ರಾಜ್ಯದ ಜಲಸಂಪನ್ಮೂಲ ಇಲಾಖೆ ಇತಿಹಾಸ ಸೃಷ್ಠಿಯಾಗಲಿದೆ. ಸಚಿವರಾದ ಶ್ರೀ ಗೋವಿಂದ ಕಾರಜೋಳರವರು ಮತ್ತು ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್ ರವರ ಪಾತ್ರ ಬಹಳ ಮುಖ್ಯವಾಗಿದೆ.

ಈಗಾಗಲೇ ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಒಂದು ಗೊಲೆಯಲ್ಲಿ ಸಿಲುಕಿಸಿದೆ. ರಾಜ್ಯದ ಸುಮಾರು ರೂ 2.31 ಲಕ್ಷ ಕೋಟಿ ವೆಚ್ಚದ ನೀರಾವರಿ ಯೋಜನೆಗಳನ್ನು ಕೇಂದ್ರ ಸರ್ಕಾರ ಹೊಸದಾಗಿ ಘೋಷಣೆ ಮಾಡಿರುವ 2025 ರೊಳಗೆ ಕಾಲಮಿತಿ ಯೋಜನೆಯಾದ ರೂ 111 ಲಕ್ಷ ಕೋಟಿ ವೆಚ್ಚದ ಎನ್.ಐ.ಪಿ ಯೋಜನೆಯಡಿ ಸೇರ್ಪಡೆ ಮಾಡಿ ದಾಖಲೆ ನಿರ್ಮಿಸಿದೆ. ರಾಜ್ಯ ಸರ್ಕಾರಕ್ಕೆ ಇದು ಒಂದು ವರದಾನವಾಗಲಿದೆ.

ಇದಕ್ಕೆಅಡಿಗಲ್ಲು ಹಾಕಿದ್ದು ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ, ರಾಜ್ಯದ ಸುಮಾರು 600 ಟಿ.ಎಮ್.ಸಿ.ಅಡಿ ನೀರು ಬಳಸುವ ಯೋಜನೆಯ ಬಗ್ಗೆ ಚರ್ಚೆ ಮಾಡಿ, ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿರವರಾದ ಶ್ರೀ ರಾಕೇಶ್ ಸಿಂಗ್ ರವರ ಅಧ್ಯಕ್ಷತೆಯಲ್ಲಿ ಸಭೆ ಮಾಡಿ, ಆ ಸಭೆಗೆ ರಾಜ್ಯ ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿರವರಾದ ಶ್ರೀ ಮತಿ ಶಾಲಿನಿ ರಜನೀಶ್ ರವರನ್ನು ಆಹ್ವಾನಿಸಿ, ನಂತರ ಜಲಸಂಪನ್ಮೂಲ ಸಚಿವರಾಗಿದ್ದ ಶ್ರೀ ರಮೇಶ್ ಜಾರಕಿಹೊಳೆರವರ ಅಧ್ಯಕ್ಷತೆಯಲ್ಲೂ ಸಭೆ ಮಾಡಿ,ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರಿಂದ ಪತ್ರ ಬರೆಸಿ, ಕೇಂದ್ರ ಸರ್ಕಾರದ ಎನ್.ಐ.ಪಿ ಪೋರ್ಟಲ್ ನಲ್ಲಿ ಸದ್ದು ಗದ್ದಲವಿಲ್ಲದೇ ಅಫ್ ಲೋಡ್ ಮಾಡಲಾಗಿದೆ.’

ಶ್ರೀ ಬಸವರಾಜ್ ಬೊಮ್ಮಾಯಿಯವರಿಗೆ ಇದೊಂದು ಪ್ರಭಲ ಅಸ್ತ್ರವಾಗಲಿದೆ. ನೋಡಿ ಇದೇ ಅದೃಷ್ಠ ಎನ್ನುವುದು, ಅವರು ಮುಖ್ಯ ಮಂತ್ರಿಯಾಗಿರುವ ವೇಳೆಯಲ್ಲಿ ಅವರ ಇಷ್ಠದ ನೀರಾವರಿ ಯೋಜನೆಯ ಯೋಜನೆಗಳು ಎನ್.ಐ.ಪಿ ಯೋಜನೆಯಲ್ಲಿ ಸೇರ್ಪಡೆ ಆಗಿರುವುದು ಒಂದು ಮ್ಯಾಜಿಕ್ ಅಲ್ಲವೇ?

ಜೊತೆಗೆ 2025 ರ ಕಾಲಮಿತಿ ಯೋಜನೆ ಎಂದರೆ ಒಂದು ಪವಾಡ, ಇಲ್ಲಿ ರಾಜ್ಯ ಸರ್ಕಾರದ ಪಾಲಿನ ಹಣ ಭರಿಸಲು ಏನಾದರೂ ಮ್ಯಾಜಿಕ್ ಮಾಡಲೇ ಬೇಕಿದೆ. ಎಲ್ಲಾ ಯೋಜನೆಗಳಿಗೂ ಚಾಲನೆ ನೀಡಿದರೆ ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ ಎಂದು ಬೀಗುತ್ತಿರುವವರಿಗೆ ಮತ್ತೊಂದು ಕೀರಿಟ ದೊರೆಯಲಿದೆ.

‘ಇದಕ್ಕೆ ಗಡುವು 2023 ? ನೆನಪಿರಲಿ ಬೂತ್ ಗಳು ಸಿದ್ಧವಾಗುತ್ತಿವೆ’.