25th April 2024
Share

TUMAKURU:SHAKTHI PEETA FOUNDATION

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಇಂದು ಶಕ್ತಿಪೀಠ ಕ್ಯಾಂಪಸ್ ನಲ್ಲಿ ಸುತ್ತಾಡಿದರು.

ಎಲ್ಲಾ ಸುತ್ತುಹಾಕಿದ ನಂತರ ಇದು ಮುಗಿಯುವುದು ಯಾವಾಗ? ಎಷ್ಟು ಮೊತ್ತದ ಯೋಜನೆ ಎಂದು ಕೇಳಿದಾಗ ಅದು ಕೇಳ ಬೇಡಿ ಆರಂಭ ಆಗಿದೆ ಅಷ್ಟೆ, ಉಳಿದಿದ್ದು ತಾಯಿ ಶಕ್ತಿದೇವತೆ ಪವಾಡ ಎಂಬ ಉತ್ತರ ನನ್ನದಾಗಿತ್ತು.

ಆಫ್ಘಾನಿಸ್ಥಾನದಲ್ಲಿ ಒಂದು ಶಕ್ತಿಪೀಠ ಇದೆ, ನನಗೆ ಯಾರೋ ಒಂದು ಪುಸ್ತಕ ಕೊಟ್ಟಿದ್ದರೂ ನಾನು ಓದಿದ್ದೇನೆ ಎಂದಾಗ ನನಗೂ ಆಶ್ಚರ್ಯವಾಗಿತ್ತು, ಇದೂವರೆಗೂ ನನಗೆ ಈ ಮಾಹಿತಿ ಲಭ್ಯವಿರಲಿಲ್ಲ, ಸಾರ್ ಇನ್ನೂ ಹಲವಾರು ಗೊಂದಲಗಳಿವೆ ನಮ್ಮ ಅಧ್ಯಯನ ಇನ್ನೂ ಪರಿಪೂರ್ಣವಾಗಿಲ್ಲ.

ಗೊಂದಲ ಇರುವ ಶಕ್ತಿಪೀಠಗಳು ಸೇರಿದಂತೆ ಸುಮಾರು 117 ಶಕ್ತಿಪೀಠಗಳು, ಉಪಶಕ್ತಿಪೀಠಗಳು, ಸಿದ್ಧಿಪೀಠಗಳು ಹೀಗೆ ಗುರುತು ಮಾಡಿದ್ದೇವೆ ಸಾರ್ ನೋಡಿ ಹೇಳುತ್ತೇನೆ ಎಂದೆ.

ನದಿ ಜೋಡಣೆಯ ಪ್ರಾತ್ಯಾಕ್ಷಿಕೆ, ಸಾಯಿಬಾಬಾ ಪ್ರಾತ್ಯಾಕ್ಷಿಕೆ, ಜ್ಯೋತಿರ್ಲಿಂಗ ಪ್ರಾತ್ಯಾಕ್ಷಿಕೆ ವೀಕ್ಷಣೆ ಮಾಡಿದರು, ಔಷಧಿ ಗಿಡಗಳನ್ನು ವೀಕ್ಷಣೆ ಮಾಡಿದರು. ಒಣಗಿದ ಗಿಡ ನೋಡಿ, ಇದನ್ನು ಶೀಘ್ರವಾಗಿ ಬದಲಾಯಿಸಿ ಬೇರೆ ಗಿಡ ಹಾಕಲು ಸೂಚಿಸಿದರು. ಶೀಘ್ರವಾಗಿ ನಾಮಫಲಕ ಹಾಕಿ ಎಲ್ಲರಿಗೂ ಎಲ್ಲವನ್ನು ಹೇಳಲು ಸಾಧ್ಯವಿಲ್ಲ ಎಂಬ ಸಲಹೆ ನೀಡಿದರು.

ಇದೂವರೆಗೂ ಕುಂದರನಹಳ್ಳಿ ರಮೇಶ್ ಎನ್ನುತ್ತಿದ್ದೇವು ಇನ್ನೂ ಮುಂದೆ ಈ ಊರಿನ ಹೆಸರೋ ಅಥವೋ ಶಕ್ತಿಪೀಠದ ಹೆಸರು ಪ್ರಚಲಿತವೋ ಎಂದು ಹಾಸ್ಯ ಮಾಡಿದರು. ಮುಂದೊಂದು ದಿನ ಇದು ಒಂದು ಐತಿಹಾಸಿಕ ಕ್ಷೇತ್ರವಾಗಲಿದೆ ಎಂದು ಶುಭ ಹಾರೈಸಿದರು.

ಕುಂದರನಹಳ್ಳಿ ಗಂಗಮಲ್ಲಮ್ಮ ದೇವಾಲಯ ಪೂರ್ಣಗೊಳಿಸಿದರಾ? ಎಂಬ ಪ್ರಶ್ನೆ ಮಾಡಿದರು, ಇಲ್ಲ ಸಾರ್   ನಿವೃತ್ತ ಎಸ್.ಪಿ. ಶ್ರೀ ರೇವಣ್ಣನವರ ಜವಾಬ್ಧಾರಿ, ನಿಮ್ಮ ಅನುದಾನವನ್ನು ನೀಡುವ ಮೂಲಕ ನಮ್ಮ ಕರ್ತವ್ಯ ಮಾಡಿದ್ದೇವೆ ಉಳಿದಿದ್ದು ಅವರದ್ದು ಎಂದಾಗ, ನೋಡು ಈ ರೀತಿ ಹೇಳಬಾರದು ಮೊದಲು ಪೂರ್ಣಗೊಳಿಸಲು ಒಟ್ಟಾಗಿ ಪ್ರಯತ್ನ ಮಾಡಿ ಎಂಬ ಸಲಹೆ ನೀಡಿದರು.

ಸಾವಿರ ಜನ ಸಾವಿರ ಮಾತನಾಡುತ್ತಾರೆ, ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ, ರೇವಣ್ಣನವರಿಗೆ ಪೋನ್ ತೆಗೆದುಕೋ ಎಂದರು. ಪೋನ್ ಸಂಪರ್ಕ ಆಗಲಿಲ್ಲ, ಶೀಘ್ರವಾಗಿ ಕರೆಯುತ್ತೇನೆ ಸಾರ್ ಮಾತನಾಡೋಣ ಎಂದೆ.

ಕಟ್ಟಡದ ಕಾಮಗಾರಿ ವೀಕ್ಷಣೆ ಮಾಡಿ, ಈ ಕಟ್ಟಡ ಯಾವುದು ಎಂದರು, ಮುಂದಿನ ಮೇ ತಿಂಗಳಲ್ಲಿ  ಓಪನ್ ವೇಳೆಗೆ ಹೇಳುತ್ತೇನೆ ಸಾರ್ ಎನ್ನ ಬೇಕಾಯಿತು.