22nd November 2024
Share

TUMAKURU:SHAKTHIPEEA FOUNDATION

ತುಮಕೂರು ಲೋಕಸಾಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಯಾವುದೇ ಇಲಾಖೆಯಲ್ಲಿ ಯಾವುದೇ ವಿಚಾರಕ್ಕೆ ಸಭೆ ಕರೆದರೂ ಅದು ದಿಶಾ ಇಲಾಖಾವಾರು ಸಭೆ ಆಗಿರುತ್ತದೆ ಎಂದು ದಿಶಾ ಸಭೆಯಲ್ಲಿ ಹೇಳಿದ್ದರೂ ಈ ನೋಟಿಸ್ ನಲ್ಲಿ ದಿಶಾ ಪದವೇ ಬಂದಿಲ್ಲ.

ಸಂಸದರ ಕಚೇರಿ ಸಿಬ್ಬಂಧಿ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇದೇ ಉದಾಹರಣೆ.

  1. ಕಳೆದ 2 ವರ್ಷದಿಂದ ಹೇಮಾವತಿ ನೀರಿಗೆ ಸಂಭಂದಿಸಿದಂತೆ ಹತ್ತಾರು ವಿಚಾರಗಳನ್ನು ದಿಶಾ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಹಲವಾರು ಇಲಾಖೆಗಳ ಸಹಭಾಗಿತ್ವದಲ್ಲಿ ಕುಡಿಯುವ ಮತ್ತು ಕೈಗಾರಿಕಾ ನೀರಿನಯೋಜನೆಗಳು ಇವೆ. ಆ ಇಲಾಖೆಗಳ ಅಧಿಕಾರಿಗಳು ಇಲ್ಲದಿದ್ದರೇ ಉತ್ತರಿಸುವರು ಯಾರು?
  2. ಬಹಗ್ರಾಮ ಯೋಜನೆಗಳು ಕೆಟ್ಟು ಕೆರ ಹಿಡಿದಿವೆ, ಪೊಲಿಟಿಕಲ್ ಯೋಜನೆಗಳಾಗಿವೆ. ನಾಮಕವಸ್ಥೆಯಾಗಿವೆ, ಇದೇ ಕಾರಣದಿಂದ ತುಮಕೂರಿನಲ್ಲಿ ಜಲಜೀವನ್ ಮಿಷನ್ ಯೋಜನೆ ಸಾದ್ಯಾವಿಲ್ಲ ಎಂಬ ಆದೇಶ ದಂದಿದ್ದು. ಈ ಬಗ್ಗೆ ಅಧ್ಯಯನ ಮಾಡಿ ದಿಶಾ ಸಭೆಗೆ ವರದಿ ನೀಡಲು ಸಂಸದರು ಸೂಚಿಸಿದ್ದಾರೆ.
  3. ಜಲಜೀವನ್ ಮಿಷನ್ ಯೋಜನೆಯಡಿ ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಯಾವ ಕೆರೆಯಿಂದ ಯಾವ ಗ್ರಾಮಕ್ಕೆ ನೀರು ನೀಡಬೇಕು. ಆ ಕೆರೆಗಳಿಗೆ ಅಲೋಕೇಷನ್ ಹೇಗೆ ಎಂಬ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಿಎಂದು ಈಗಾಗಲೇ ಹೇಳಿಯಾಗಿದೆ.
  4. ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಮೈಕ್ರೋ ಇರ್ರಿಗೇಷನ್ ಮಾಡಿದರೆ ನೀರು ಎಷ್ಟು ಉಳಿಯಲ್ಲಿದೆ ಲಿಕ್ಕಾ ಮಾಡಿ ಎಂದು ಎರಡು ವರ್ಷದಿಂದ ನೂರಾರು ಭಾರಿ ಹೇಳಿಯಾಗಿದೆ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಬೇಕಿದೆ.
  5. ಕೈಗಾರಿಕೆಗಳಿಗೆ ನೀರಿನ ಸ್ಥಿತಿ ಹೇಗಿದೆ?
  6. ನಗರ ಪ್ರದೇಶಗಳ ಕುಡಿಯುವ ನೀರಿನ ಸ್ಥಿತಿ ಹೇಗಿದೆ ಎಂಬ ಬಗ್ಗೆ ಚರ್ಚೆ ಮಾಡಲಾಗಿದೆ.
  7. ಜೊತೆಗೆ ಹೇಮಾವತಿ ನಾಲೆಯ ಸ್ವತ್ತನ್ನು ಜಿ.ಐ.ಎಸ್.ಲೇಯರ್ ಮಾಡಲು ಸೂಚಿಸಲಾಗಿದೆ.
  8. ಇದೂವರೆಗೂ ಅನಧಿಕೃತವಾಗಿ ಕೆರೆಗಳಿಗೆ ನೀರು ಬಿಡಲಾಗುತ್ತಿದೆಯೇ ಎಂಬ ಬಗ್ಗೆ ವರದಿ ನೀಡಲು ಸೂಚಿಸಲಾಗಿದೆ.
  9. ಅಧಿಕೃತ ಮಾಡಲು ಇರುವ ಉಪಾಯ ಏನು ಎಂಬ ಬಗ್ಗೆ ವರದಿ ನೀಡಲು ಸೂಚಿಸಲಾಗಿದೆ.
  10. ಹೇಮಾವತಿ ಕಾಲುವೆ ಅಕ್ಕ ಪಕ್ಕದ ಜಾಗದಲ್ಲಿ ಬೆಳೆದಿರುವ ಪೊದೆ ತೆಗೆಸುವರು ಯಾರು?
  11. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆಯ ಸಿದ್ಧಪಡಿಸುತ್ತಿದ್ದಾರೆ. ನೀರು ಹೇಗೆ ಎಂಬ ಬಗ್ಗೆ ಚರ್ಚೆಯೂ ನಡೆಯಬೇಕಿದೆ.
  12. ಹೇಮಾವತಿ ಭೂಮಿ ಕಳೆದು ಕೊಂಡವರಿಗೆ ಇನ್ನೂ ಪರಿಹಾರ ನೀಡಿಲ್ಲ  ಏಕೆ ವಿಳಂಭವಾಗಿದೆ.

ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.