3rd March 2024
Share

TUMAKURU:SHAKTHIPEETA FOUNDATION

 ಸಾರ್ ನೀವೂ ಕಾಮನ್ ಮ್ಯಾನ್ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರನ್ನು  ನೀರಾವರಿ ವಿಚಾರದಲ್ಲಿ ಜಾಸ್ತಿ ಹೊಗಳುತ್ತಿದ್ದೀರಿ ಅನ್ನಿಸುವುದಿಲ್ಲವೇ? ಬೆಂಗಳೂರಿಗೆ ನೀರು ಕೊಡ್ತಾರಾ ಬೊಮ್ಮಾಯಿ? ಹೌದು ಬೆಂಗಳೂರಿನ ಕುಡಿಯುವ ನೀರಿನ ಹೋರಾಟಗಾರರ ಮಾತು ಇದು.

ಸಾರ್, ನಿಮಗ್ಯಾಕೆ ಈ ಅನುಮಾನ, ಬಹುಷಃ ಬೊಮ್ಮಾಯಿಯವರು ಅವರ ಮೊಮ್ಮಗ ಮುಖ್ಯಮಂತ್ರಿಯವರಾದರೂ ನೀರಿನ ಸಮಸ್ಯೆ ಬರಬಾರದು ಅಷ್ಟು ನದಿ ನೀರನ್ನು ಬೆಂಗಳೂರಿಗೆ ಅಲೋಕೇಷನ್ ಮಾಡುತ್ತಾರೆ. ಶಂಕುಸ್ಥಾಪನೆಯನ್ನು ಅವರ ಕಾಲದಲ್ಲಿಯೇ ಮಾಡುತ್ತಾರೆ ಇದು ನನಗಿರುವ ಭರವಸೆ, ನೀವೂ ಒಪ್ಪುವುದು ಬಿಡುವುದು ನಿಮಗೆ ಬಿಟ್ಟಿದ್ದು?

ಹಾಗಾದರೆ ಯಾವ ನದಿ ನೀರು ಸಾರ್, ಅದು ನೇತ್ರಾವತಿ ನದಿ ನೀರು ಆಗಬಹುದು,ಕುಮಾರಧಾರ ನದಿ ನೀರು ಆಗಬಹುದು, ಹೇಮಾವತಿ ಪ್ರವಾಹದ ನದಿ ನೀರು ಆಗಬಹುದು, ಶರಾವತಿ ನೀರು ಆಗಬಹುದು, ಅಘಿನಾಶಿನಿ ನೀರು ಆಗಬಹುದು, ಕಾವೇರಿ ನದಿ ನೀರು ಅಂದರೆ ಮೇಕೆದಾಟು ನೀರು ಆಗಬಹುದು, ಕಾವೇರಿ ಅಥವಾ ಕೃಷ್ಣ ಪ್ರವಾಹದ ನದಿ ನೀರು ಆಗಬಹುದು. ಅದು ನಿಮಗೆ ಬೇಕಿಲ್ಲ.

ಒಟ್ಟಿನಲ್ಲಿ ಬೆಂಗಳೂರಿಗೆ ಮುಂದಿನ 50 ವರ್ಷಗಳವರೆಗೆ ಆಗುವಷ್ಟು ನದಿ ನೀರು ನೀಡಲು ಯೋಜನೆಯನ್ನು ಶೇ 100 ರಷ್ಟು ಖಚಿತವಾಗಿ ರೂಪಿಸುತ್ತಾರೆ.ಒಂದು ವೇಳೆ ಯೋಜನೆ ರೂಪಿಸಿದೇ ಇದ್ದರೇ? ನೀವೂ ಏನು ಹೇಳುತ್ತೀರಿ? ಈ ಮಾತನ್ನು ಆರು ತಿಂಗಳು ಬಿಟ್ಟು ಕೇಳಿ ಉತ್ತರಿಸುತ್ತೇನೆ ಎಂದು ಸಮಾಧಾನ ಮಾಡಿದ್ದೇನೆ.

ಬೊಮ್ಮಾಯಿಯವರು ಏನು ಮಾಡುತ್ತಾರೆ ಕಾದು ನೋಡೋಣ?

About The Author