23rd June 2024
Share

ಮಾನ್ಯ ಶಾಸಕರೇ ಪಟ್ಟಿಯಲ್ಲಿರುವ ಮಾಹಿತಿಗಳ ಅಧ್ಯಯನ ಮಾಡಿ ಸ್ವಾಮಿ, ನಿಮಗೆ ತೃಪ್ತಿ ಆದರೇ ಸಾಕು ಅಲ್ಲವೇ?

TUMAKURU:SHAKTHIPEETA FOUNDATION

ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು  ಮತ್ತು ಲೋಕಸಭಾ ಸದಸ್ಯ ಹಾಗೂ ಜಿಲ್ಲಾ ಮಟ್ಟದ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ರವರು ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಘೋಷಣೆಯಡಿ ಕೇಂದ್ರ ಸರ್ಕಾರಕ್ಕೆ  ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆಯಲು ಶ್ರಮಿಸುತ್ತಿದ್ದಾರೆ.

ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಭಧ್ರಾ ಭುನಾದಿ ಹಾಕಲು ಮುಂದಾಗಿದ್ದಾರೆ, ಕಡಿಮೆ ಆಗುವ ನದಿ ನೀರಿಗೂ ಚಿಂತನೆ ಮಾಡುತ್ತಿದ್ದಾರೆ.ಪಕ್ಷಾತೀತವಾಗಿ ಎಲ್ಲಾ ಪಕ್ಷದ ನಾಯಕರು ಒಗ್ಗಟ್ಟಾಗಿ ಶ್ರಮಿಸುವುದು ಒಳ್ಳೆಯದು.

ತುಮಕೂರು ಜಿಲ್ಲೆಯಲ್ಲಿ ಅಧಿಕೃತವಾಗಿ ಮಾಲೀಕತ್ವದ  ದಾಖಲೆಗಳಿರುವ 1475 ಕೆರೆಗಳಿಗೆ ಅಗತ್ಯವಿರುವ ನೀರಿನ ಮಾಹಿತಿಯನ್ನು ತಾಲ್ಲೂಕುವಾರು ಸಣ್ಣ ನೀರಾವರಿ ಇಲಾಖೆ ಪಟ್ಟಿ ಮಾಡಲಾಗಿದೆ.

ಯಾವ ಕೆರೆಗೆ ಯಾವ ನದಿ ನೀರು ಹೇಮಾವತಿ, ಭಧ್ರಾಮೇಲ್ದ0ಡೆ ಮತ್ತು ಎತ್ತಿನಹೊಳೆ ನೀರು ಅಲೋಕೇಷನ್ ಎಂಬ ಮಾಹಿತಿಯನ್ನು ಸಂಗ್ರಹ ಮಾಡಿದ್ದಾರೆ.ಇದು ಅಧಿಕೃತವಾಗಬೇಕಿದೆ.

ಮಾಲೀಕತ್ವದ ಮಾಹಿತಿ ಇಲ್ಲದೆ ಸುಮಾರು ಕೆರೆ-ಕಟ್ಟೆಗಳು ಗ್ರಾಮವಾರು ಇವೆ, ಅವುಗಳ ಮಾಹಿತಿಯನ್ನು ಗ್ರಾಮಪಂಚಾಯಿತಿಗಳು, ಗ್ರಾಮವಾರು ನೀಡಬೇಕಿದೆ.

ಗ್ರಾಮಪಂಚಾಯಿತಿವಾರು, ಯಾವುದೇ ಗ್ರಾಮಗಳಲ್ಲಿ ಕೆರೆ ಕಟ್ಟೆಗಳಿಲ್ಲದೆ ಇದ್ದಲ್ಲಿ, ಹೊಸದಾಗಿ ಯಾವ ರೀತಿಯ ಜಲಸಂಗ್ರಹಾಗಾರ ನಿರ್ಮಾಣ ಮಾಡಬಹುದು ಎಂಬ ಮಾಹಿತಿಯನ್ನು ನಕ್ಷೆ ಸಹಿತ, ಗ್ರಾಮವಾರು ನೀಡುವುದು ಗ್ರಾಮಪಂಚಾಯಿತಿ ಹೊಣೆಗಾರಿಕೆ.

ಆಯಾ ವಿಧಾನಸಭಾ ಕ್ಷೇತ್ರದ ಸದಸ್ಯರು ಪರಿಶೀಲನೆ ಮಾಡಿ ನೀಡುವುದು ಅವರವರ ಜವಾಬ್ಧಾರಿ.ಆಯಾ ಗ್ರಾಮದ ಜನರು ಎಚ್ಚರದಿಂದ ನಮ್ಮೂರಿನ ಕೆರೆ-ಕಟ್ಟೆಗೆ ಯಾವ ನದೀ ನೀರು ಎಂಬ ಬಗ್ಗೆ ಮಾಹಿತಿ ಅರಿಯುವುದು ಉತ್ತಮ.

ತುಮಕೂರು ಜಿಲ್ಲೆಯ 330 ಗ್ರಾಮಪಂಚಾಯಿತಿ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳವಾರು ನಕ್ಷೆ ಮತ್ತು ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಣೆ ಮಾಡಬೇಕಿದೆ.  

ಬಿಜೆಪಿಯವರು ನಮ್ಮ ಸರ್ಕಾರ ನಿಮ್ಮೂರಿಗೆ ಇಂಥಹ ನದಿ ನೀರು ನೀಡಲಿದೆ ಎಂಬ ಬಗ್ಗೆ ಪ್ರಚಾರ ಮಾಡಿದರೆ, ವಿರೋಧ ಪಕ್ಷಗಳು ಇಂಥಹ ಊರಿಗೆ ಯಾವುದೇ ನದಿ ನೀರು ನೀಡುತ್ತಿಲ್ಲ ಎಂಬ ಕೂಗು ಹಾಕಬೇಕಲ್ಲವೇ?