12th September 2024
Share

TUMAKURU:SHAKTHIPEETA FOUNDATION

‘ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಜಾರಿಗೆ ದಿನಾಂಕ:21.10.2019 ರಂದು ನಡೆದ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ.

ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆ ಜಾರಿಗೆ ರಾಜ್ಯದ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಂದ ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರಿಗೆ ತುಮಕೂರು ಜಿಲ್ಲೆಯನ್ನು ಪೈಲಟ್ ಯೋಜನೆಯಾಗಿ ಕೈಗೊಳ್ಳಲು ಪತ್ರ ಬರೆಸಿದ್ದಾರೆ.

2022 ರೊಳಗೆ ತುಮಕೂರು ಜಿಲ್ಲೆಯನ್ನು ಡಿಜಿಟಲ್ ಡಾಟಾ ಡಿಸ್ಟ್ರಿಕ್ಟ್ ಎಂದು ಘೋಶಿಸಲು ನಿರ್ಣಯ ಮಾಡಿ, ಪ್ರತಿಯೊಂದು ಇಲಾಖೆಯು ಜಿಐಎಸ್ ಲೇಯರ್ ಮಾಡಲು ಪ್ರತಿಯೊಂದು ಸಭೆಯಲ್ಲೂ ಚರ್ಚೆ ಮಾಡಿದೆ.

ಆದರೂ ಇದೂವರೆಗೂ ಜಿಲ್ಲೆಯ 330 ಗ್ರಾಮ ಪಂಚಾಯಿತಿವಾರು ಮತ್ತು 11 ನಗರ ಸ್ಥಳೀಯ ಸಂಸ್ಥೆವಾರು ಕೆರೆ-ಕಟ್ಟೆಗಳ ನಿಖರವಾದ ಪಟ್ಟಿ ಇಲ್ಲ ಎಂದರೆ, ಕೆಳಕಂಡ ಇಲಾಖೆಗಳ ಅಧಿಕಾರಿಗಳಿಗೆ ಯಾವ ರೀತಿಯ ಹಾರ ಹಾಕಬೇಕು? ಎಲ್ಲಿ ಹಾಕಬೇಕು? ಹೇಗೆ ಹಾಕಬೇಕು?’

ಒನ್ ಬೂತ್-ಟೆನ್ ಯೂತ್ ಘೋಷಣೆ ಮಾಡಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಸುರೇಶ್ ಗೌಡರವರೇ, ನಿಮ್ಮ ಪಕ್ಷದವರೇ ಪ್ರಧಾನ ಮಂತ್ರಿ, ನಿಮ್ಮ ಪಕ್ಷದವರೇ ಮುಖ್ಯ ಮಂತ್ರಿ, ನಿಮ್ಮ ಪಕ್ಷದವರೇ ಜಿಲ್ಲಾ ಉಸ್ತುವಾರಿ ಸಚಿವರು, ನಿಮ್ಮ ಪಕ್ಷದವರೇ ಸಂಸದರು, ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿ ನಿಮ್ಮವರೇ ವಿಧಾನಸಭಾ ಸದಸ್ಯರು. ಆದರೂ ಇದೂವರೆಗೂ ಅಧಿಕೃತ ಪಟ್ಟಿ ಸಿದ್ಧವಾಗಿಲ್ಲ.

‘ಕೆರೆ-ಕಟ್ಟೆಗಳ ಪಕ್ಕಾ ಪಟ್ಟಿ ಮಾಡಿ ಪ್ರದರ್ಶನ 341 ಸ್ಥಳೀಯ ಸಂಸ್ಥೆಗಳಲ್ಲಿ ಪ್ರದಾರ್ಶನ ಮಾಡುವರೆಗೂ ನಿಮ್ಮ ಪಕ್ಷದ ಕಾರ್ಯಕರ್ತರನ್ನು 330 ಗ್ರಾಮ ಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ಮುಂದೆ ಧರಣಿ ಏಕೆ ಕೂರಿಸಬಾರದು?’

ಕೆರೆಕಟ್ಟೆಗಳ ಪಟ್ಟಿ ಯಾರು ಮಾಡಬೇಕು?

  1. 2002 ರ ನಂತರ ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಚಿಸಿರುವ ಜೀವ ವೈವಿಧ್ಯ ದಾಖಲಾತಿ ಮ್ಯಾನೇಜ್ ಮೆಂಟ್ ಸಮಿತಿಯವರು ಪ್ರತಿ ಗ್ರಾಮವಾರು ಕೆರೆ-ಕಟ್ಟೆಗಳ ಪಟ್ಟಿ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದನ್ನು ಮಾಡಲು ಒಂದು ಗ್ರಾಮಪಂಚಾಯಿತಿಗೆ ರೂ 25000 ಮತ್ತು ಮಹಾನಗರ ಪಾಲಿಕೆಗೆ ರೂ 200000 ಹಣ ನೀಡಿದೆ.(ಸಾಮಾಜಿಕ ಅರಣ್ಯ ಇಲಾಖೆ)
  2. ತುಮಕೂರು ಜಿಲ್ಲಾಪಂಚಾಯಿತಿಯಲ್ಲಿರುವ ಎನ್.ಆರ್.ಡಿ.ಎಂ.ಎಸ್ ಜಿಐಎಸ್ ಲೇಯರ್ ಮಾಡಲು ಪ್ರತಿ ಗ್ರಾಮವಾರು ಕೆರೆ-ಕಟ್ಟೆಗಳ ಪಟ್ಟಿಯನ್ನು ನಕ್ಷೆ ಸಹಿತ ಮಾಡಿರಬೇಕು.(ಜಿಲ್ಲಾ ಪಂಚಾಯತ್)
  3. ಜಲಾಮೃತ ಯೋಜನೆಯಡಿ ವಾಟರ್ ಬಡ್ಜೆಟ್-ವಾಟರ್ ಆಡಿಟ್- ವಾಟರ್ ಸ್ಟ್ರಾಟಜಿ ಮಾಡಲು ಪ್ರತಿ ಗ್ರಾಮವಾರು ಕೆರೆ-ಕಟ್ಟೆಗಳ ಪಟ್ಟಿಯನ್ನು ನಕ್ಷೆ ಸಹಿತ ಮಾಡಿರಬೇಕು.(ಜಿಲ್ಲಾ ಪಂಚಾಯತ್)
  4. ಅಟಲ್ ಭೂಜಲ್  ಯೋಜನೆಯಡಿ ವಾಟರ್ ಬಡ್ಜೆಟ್-ವಾಟರ್ ಆಡಿಟ್- ವಾಟರ್ ಸ್ಟ್ರಾಟಜಿ ಮಾಡಲು 199 ಗ್ರಾಮ ಪಂಚಾಯಿತಿ ಗಳಲ್ಲಿ ಪ್ರತಿ ಗ್ರಾಮವಾರು ಕೆರೆ-ಕಟ್ಟೆಗಳ ಪಟ್ಟಿಯನ್ನು ನಕ್ಷೆ ಸಹಿತ ಮಾಡಿರಬೇಕು.(ಸಣ್ಣ ನೀರಾವರಿ ಇಲಾಖೆ)
  5. ನ್ಯಾಯಾಲಯದ ಆದೇಶದ ಪ್ರಕಾರ ಪ್ರತಿ ಗ್ರಾಮವಾರು ಕೆರೆ-ಕಟ್ಟೆಗಳ ಒತ್ತುವರಿ ತೆರವುಗೊಳಿಸಲು ಕೆರೆ-ಕಟ್ಟೆಗಳ ಪಟ್ಟಿಯನ್ನು ನಕ್ಷೆ ಸಹಿತ ಮಾಡಿರಬೇಕು.(ಕಂದಾಯ ಇಲಾಖೆ)
  6. ಕೆರೆ ಅಭಿವೃದ್ಧಿ ಪ್ರಾಧಿಕಾರದವರು ಪ್ರತಿ ಗ್ರಾಮವಾರು ಕೆರೆ-ಕಟ್ಟೆಗಳ ಪಟ್ಟಿಯನ್ನು ನಕ್ಷೆ ಸಹಿತ ಮಾಡಿರಬೇಕು.(ಸಣ್ಣ ನೀರಾವರಿ ಇಲಾಖೆ ಅಥವಾ ಪ್ರಾಧಿಕಾರ)
  7. ಜಿಲ್ಲಾ ಉಸ್ತವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು ಮತ್ತು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆ ಜಾರಿಗೊಳಿಸಬೇಕಾದರೆ ಪ್ರತಿ ಗ್ರಾಮವಾರು ಕೆರೆ-ಕಟ್ಟೆಗಳ ಪಟ್ಟಿಯನ್ನು ನಕ್ಷೆ ಸಹಿತ ಮಾಡಿರಬೇಕು.(ಸಣ್ಣ ನೀರಾವರಿ ಇಲಾಖೆ)
  8. ಭೂ ಬಳಕೆಯಲ್ಲಿ ಜಲಸಂಗ್ರಹಾರಗಳ ವ್ಯಾಪ್ತಿಯನ್ನು ಜಿಲ್ಲಾ ಅಂಕಿ ಅಂಶಗಳ ಇಲಾಖೆಯಲ್ಲಿ ಪ್ರಕಟಿಸಲು ಪ್ರತಿ ಗ್ರಾಮವಾರು ಕೆರೆ-ಕಟ್ಟೆಗಳ ಪಟ್ಟಿಯನ್ನು ಮಾಡಿರಬೇಕು. (ಆಂಕಿ ಅಂಶಗಳ ಇಲಾಖೆ)
  9. ಪ್ರತಿ ಗ್ರಾಮದಲ್ಲಿರುವ ಸರ್ಕಾರಿ ಆಸ್ತಿಗಳನ್ನು ಘೋಷಣೆ ಮಾಡಲು, ಪ್ರತಿ ಗ್ರಾಮವಾರು ಕೆರೆ-ಕಟ್ಟೆಗಳ ಪಟ್ಟಿಯನ್ನು ನಕ್ಷೆ ಸಹಿತ ಮಾಡಿರಬೇಕು.(ಕಂದಾಯ ಇಲಾಖೆ)
  10. ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ವಿಲೇಜ್ ಆಕ್ಷನ್ ಪ್ಲಾನ್ ಮಾಡಲು, ಪ್ರತಿ ಗ್ರಾಮವಾರು ಕೆರೆ-ಕಟ್ಟೆಗಳ ಪಟ್ಟಿಯನ್ನು ನಕ್ಷೆ ಸಹಿತ ಮಾಡಿರಬೇಕು.(ಗ್ರಾಮೀಣ ಕುಡಿಯುವ ನೀರು ಇಲಾಖೆ)