TUMAKURU:SHAKTHIPEETA FOUNDATION
‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆ ಜಾರಿಗಾಗಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಒಂದು ಚಾಲೇಂಗ್ ಆಗಿ ತೆಗೆದುಕೊಂಡಿದೆ.
ಸ್ವಾತಂತ್ರ ಬಂದು 75 ವರ್ಷ ತುಂಬಲಿದೆ.
ಡಿಜಿಟಲ್ ಇಂಡಿಯಾ ಬಂದು 7 ವರ್ಷ ತುಂಬುತ್ತಾ ಬಂದಿದೆ.
ಗ್ರಾಮಪಂಚಾಯಿತಿವಾರು/ನಗರಸ್ಥಳೀಯ ಸಂಸ್ಥೆವಾರು ಕೆರೆ-ಕಟ್ಟೆಗಳ ನಿಖರವಾದ ಮಾಹಿತಿ ನೀಡುವ ತಾಕತ್ತು ಯಾವ ಇಲಾಖೆಗೆ ಇದೆ. ಸುಳ್ಳು ಡಾಟಾ, ಕಟ್ ಅಂಡ್ ಪೇಸ್ಟ್ ಡಾಟಾ, ನೋಡಿ, ನೋಡಿ ತಲೆ ಕೆಟ್ಟಿದೆ
ದಿನಾಂಕ:21.09.2021 ರಂದು ಕಾವೇರಿ ನೀರಾವರಿ ನಿಗಮದ ತುಮಕೂರು ನಾಲಾ ವಲಯದ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ವಿವಿಧ ಇಲಾಖೆಗಳ ಸಭೆಯನ್ನು ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ಕರೆದಿದ್ದರು.
ತುಮಕೂರು ವಿಭಾಗದ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಶ್ರೀ ಚಂದ್ರುರವರು ಮಾತ್ರ ತುಮಕೂರು ತಾಲ್ಲೂಕಿನ 42 ಗ್ರಾಮಪಂಚಾಯಿತಿಯ ವ್ಯಾಪ್ತಿಯ ಕೆರೆಗಳ ಪಟ್ಟಿ ಮತ್ತು ಕೆರೆಗಳಿಲ್ಲದ ಗ್ರಾಮಗಳ ಪಟ್ಟಿ ಸಿದ್ಧಪಡಿಸಿದ್ದರು. ಉಳಿದಂತೆ ಗ್ರಾಮಪಂಚಾಯಿತಿವಾರು ಯಾವುದೇ ತಾಲ್ಲೂಕಿನವರು ಮಾಡಿರಲಿಲ್ಲ.
ಒತ್ತುವರಿ ತೆರವಿಗೆ ಕೆರೆಗಳ ಪಟ್ಟಿಯನ್ನು ಡಿಡಿಎಲ್‍ಆರ್ ಮಾಡಿಕೊಂಡಿದ್ದಾರೆ.ಅದರಲ್ಲಿ ಗ್ರಾಮಪಂಚಾಯಿತಿವಾರು ಮಾಹಿತಿ ದೊರೆಯುವುದಿಲ್ಲ. ಅವರಿಗೆ ಅನೂಕೂಲವಾಗುವಂತೆ ಮಾಡಿದ್ದಾರೆ.ಆ ಪಟ್ಟಿಯನ್ನು ಇಂದು ನೀಡಿದ್ದಾರೆ.
ಸಂಸದರು 330 ಗ್ರಾಮಪಂಚಾಯಿತಿವಾರು ಮತ್ತು 11 ನಗರ ಸ್ಥಳೀಯ ಸಂಸ್ಥೆವಾರು ಕೆರೆ-ಕಟ್ಟೆಗಳ ಮತ್ತು ಕೆರೆ-ಕಟ್ಟೆಗಳಿಲ್ಲದ ಗ್ರಾಮಗಳ ಪಟ್ಟಿ ನೀಡಲೇ ಬೇಕು ಎಂದು ಪಟ್ಟು ಹಿಡಿದರು.
ಒಬ್ಬ ಇಂಜಿನಿಯರ್ ನನ್ನ ಕಿವಿ ಬಳಿ ಬಂದು ಹೇಳಿದ ಮಾತು ಸಾರ್ ಎಂಪಿಯವರು ಮತ್ತು ನೀವೂ ಹಾಕಿಕೊಂಡು ರುಬ್ಬುತ್ತಿದ್ದೀರಿ, ಒಂದು ಹಂತಕ್ಕೆ ಬಂದಿದೆ ಈಗ ಈ ಕಾವು ಬಿಡಬೇಡಿ ಸಾರ್ ಎಂದು ತಿಳಿಸಿದರು.
ಈ ಮಾಹಿತಿ ಅರಿತ ಸಂಸದರು ಇಂದು ಜಿಲ್ಲಾ ಪಂಚಾಯತ್ ಸಿಇಓ ರವರಿಗೆ ಪತ್ರ ಬರೆದು ಗ್ರಾಮ ಪಂಚಾಯಿತಿವಾರು ಮಾಹಿತಿ ಪಡೆಯಲು ಸೂಚಿಸಿದ್ದಾರೆ. ಇಂದೇ ಗುಬ್ಬಿ ತಾಲ್ಲೋಕು ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ರವರಾದ ಶ್ರೀ ಮತಿ ತನುಜರವರು ಪಟ್ಟಿ ಮಾಡಿ ಕಳುಹಿಸಿದ್ದಾರೆ.
‘ಮೊದಲ ಹಂತದಲ್ಲಿ ಒಂದೇ ದಿನದಲ್ಲಿ ಎಲ್ಲಾ 330 ಗ್ರಾಮಪಂಚಾಯಿತಿವಾರು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳಿಂದ ಇಷ್ಟು ಮಾಹಿತಿ ತರಿಸುವರೇ ಸಿಇಓ ರವರು ಕಾದು ನೋಡಬೇಕು.’
ನಂತರ ವಿಸ್ಥೀರ್ಣ, ಲ್ಯಾಟ್ ಲ್ಯಾಗ್, ಬೇಸಿನ್, ಮಾಲೀಕತ್ವದ ಇಲಾಖೆ, ಯಾವ ನದಿ ನೀರಿನಿಂದ ತುಂಬ ಬಹುದು, ಒತ್ತುವರಿ ಇತ್ಯಾದಿ ಮಾಹಿತಿ ಸಂಗ್ರಹಮಾಡಬಹುದಾಗಿದೆ.