27th July 2024
Share

TUMALKURU:SHAKTHIPEETAFOUNDATION

ಕೇಂದ್ರ ಸರ್ಕಾರ ದಿಂದ ಅನುದಾನ ಪಡೆಯಲು ಕೆಲವು ಕಡೆ ಚುನಾಯಿತ ಜನಪ್ರತಿನಿಧಿಗಳು ಅಧಿಕಾರಿಗಳ ಮಾತಿಗೆ ಕಿಮ್ಮತ್ತು ನೀಡುವುದಿಲ್ಲ.

ಇನ್ನೂ ಕೆಲವು ಕಡೆ ಚುನಾಯಿತ ಜನಪ್ರತಿನಿಧಿಗಳೇ ಅಧಿಕಾರಿಗಳಿಗೆ ಕೆಲಸ ಹೇಳಿದರೆ ಅಸಡ್ಡೆ ಮಾಡುತ್ತಾರೆ.

ಇನ್ನೂ ಕೆಲವು ಕಡೆ ಚುನಾಯಿತ ಜನಪ್ರತಿನಿಧಿಗಳ ಸಹಕಾರ ಇಲ್ಲದೆ ಅಧಿಕಾರಿಗಳೇ ಉತ್ತಮವಾದ ಯೋಜನೆಗಳನ್ನು ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸುತ್ತಾರೆ.

ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಅಭಿವೃದ್ಧಿ ಯೋಜನೆ ಈ ಮೂರು ಅಂಶಗಳ ಮಿಶ್ರಣವಾಗಿದೆ. ಇಲ್ಲಿ ಕುರುಡಿ ಅನ್ನುವುದಕ್ಕಿಂತ ಚೆನ್ನಮ್ಮ ಅನ್ನುವುದೇ ಲೇಸು’ ಎಂಬ ಗಾದೆಯಂತೆ ತಾಳ್ಮೆ ವಹಿಸಬೇಕಿದೆ.

ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿಯವರು ಸಕಾರಾತ್ಮಕವಾಗಿ ಸ್ಪಂಧಿಸುತ್ತಿದ್ದಾರೆ. ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು  ಏನು ಮಾಡುತ್ತಾರೋ? ತುಮಕೂರು ಜಿಲ್ಲೆ ಫೈಲಟ್ ಯೋಜನೆಯಾಗಿ ಕಾಮಗಾರಿಗೆ ಚಾಲನೆ ನೀಡುತ್ತಾರೋ, ಇಲ್ಲವೋ ಅಗ್ನಿ ಪರೀಕ್ಷೆ ಮಾಡುವ ಕಾಲ ಸನ್ನಿಹತವಾಗಿದೆ.

ಶ್ರೀ ಜೆ.ಸಿ.ಮಾಧುಸ್ವಾಮಿಯವರ  ಸಣ್ಣ ನೀರಾವರಿ ಇಲಾಖೆಯವರಂತೂ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಭದ್ಧತೆ ಪ್ರದರ್ಶಿಸಿದ್ದಾರೆ. ಪರೀಷ್ಕತ ಪ್ರಸ್ತಾವನೆಗೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬಹಳ ತಾಳ್ಮೆಯಿಂದ ಶ್ರೀ ಜಿ.ಎಸ್.ಬಸವರಾಜ್ ರವರು  ನಿಯಮ ಪ್ರಕಾರ ಮುನ್ನುಗ್ಗುತ್ತಿದ್ದಾರೆ, ಪಲಿತಾಂಶಕ್ಕಾಗಿ ಕಾಯಬೇಕಿದೆ.

ತುಮಕೂರು ಜಿಲ್ಲೆಯ ಜನರು ಮತ್ತು ವಿರೋಧ ಪಕ್ಷಗಳು ಮೌ ನ ವಹಿಸಿರುವುದು ಆಶ್ಚರ್ಯ ತಂದಿದೆ.