21st November 2024
Share

TUMAKURU:SHAKTHIPEETA FOUNDATION

ಯಾವೊದೋ ಓಬಿರಾಯನ ಕಾಲದಲ್ಲಿ ಕೇಂದ್ರ ಸರ್ಕಾರ ನದಿ ಜೋಡಣೆ ಯೋಜನೆ ಪ್ರಸ್ತಾವನೆ ಸಿದ್ದಪಡಿಸಿ ಇಟ್ಟುಕೊಂಡಿದೆ. ಈಗ ಬದಲಾದ ಸನ್ನಿವೇಶದಲ್ಲಿ ರಾಜ್ಯಗಳಿಗೆ ಅನೂಕೂಲವಾಗುವ ರೀತಿ ಮಾಡಿ ಎಂದರೆ, ಯಾವೊದೋ ರಾಜ್ಯಕ್ಕೆ ಅನೂಕೂಲ ಮಾಡಲು ಹೊರಟಂತಿದೆ ಕೇಂದ್ರ ಸರ್ಕಾರ.

ಭೆಡ್ತಿ-ವರದಾ ನದಿ ಜೋಡಣೆ ಮಾಡಿ ತುಂಗಾ-ಭಧ್ರಾ  ಡ್ಯಾಂ ಗೆ ಹಾಕುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದರೆ, ನಮ್ಮ ರಾಜ್ಯ ತುಂಗಾ-ಭಧ್ರಾ ಡ್ಯಾಂನಲ್ಲಿ ಹೂಳು ತುಂಬಿದೆ ನಮ್ಮ ಪಾಲಿನ ನೀರು ನೆರೆ ರಾಜ್ಯಗಳಿಗೆ ಹರಿದು ಹೋಗುತ್ತದೆ. ಅಷ್ಟು ಪ್ರಮಾಣದ ಹೂಳು ತೆಗೆಯುವುದು ಕಷ್ಟ, ನಾವು ಇನ್ನೊಂದು ನವಲೆ ಡ್ಯಾಂ ನಿರ್ಮಾಣ ಮಾಡಬೇಕು ಎಂದು ಮುಂಗಡ ಪತ್ರದಲ್ಲಿ ಹಣ ಇಟ್ಟು ಯೋಜನೆಗೆ ಚಾಲನೆ ನೀಡಿದೆ.

ಈ ಹಿನ್ನಲೆಯಲ್ಲಿ ಬೇಡ್ತಿ-ವರದಾ ನದಿ ಜೋಡಣೆ ನೀರನ್ನು ಹಿರೇವಡ್ಡಟ್ಟಿ ಬಳಿ ಹೋಸ ಡ್ಯಾಂ ನಿರ್ಮಾಣ ಮಾಡಿ ಹಾಕಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಇಲ್ಲಿ ಯಾರೋ ಪಕ್ಕದ ರಾಜ್ಯದ ಮೇಲೆ ಪ್ರೀತಿ ಇರಬೇಕು ಇಲ್ಲ ನಾವು ತುಂಗಾ-ಭಧ್ರಾ ಡ್ಯಾಂಗೆ ಹಾಕುತ್ತೇವೆ ಎನ್ನುತ್ತಿದ್ದಾರೆ.

ಈ ಬಗೆ ಕೇಂದ್ರ ಜಲಶಕ್ತಿ ಸಮಿತಿ ಸದಸ್ಯ  ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರಾಜ್ಯ ಸರ್ಕಾರದ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ.

ನೋಡಿ ಈ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರದ ಅಪg ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್ ಬಳಿ ಬಂದು ಸಮಾಲೋಚನೆ ನಡೆಸಿದ್ದಾರೆ. ಅವರು ಈ ಬಗ್ಗೆ ಶ್ರೀ ಜಿ.ಎಸ್.ಬಸವರಾಜ್ ರವರನ್ನು ಸಭೆಗೆ ಆಹ್ವಾನಿಸಿ ಚರ್ಚೆ ಮಾಡೋಣ ಎಂದು ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯ ಮಂತ್ರಿಯವರು ಈ ವಿಚಾರವನ್ನು ಗಂಭೀರವಾಗಿ ತೆಗೆದು ಕೊಳ್ಳಬೇಕಿದೆ.