12th September 2024
Share

TUMAKURU:SHAKKTHI PEETA FOUNDATION

ತುಮಕೂರು ನೂತನ ಏರ್ ಪೋರ್ಟ್ ಶಿರಾ-ಮಧುಗಿರಿ-ಕೊರಟಗೆರೆ ಮೂರು ವಿಧಾನಸಭಾ ಕ್ಷೇತ್ರದ ಸಂಗಮದಲ್ಲಿ? ತುಮಕೂರು ನಿಮ್ಜ್ ನಿಂದ ಕೇವಲ ನಾಲ್ಕು ಕೀಮೀ, ಬೆಂಗಳೂರು-ಬಾಂಬೆ ಹೆದ್ದಾರಿಯಿದಂಲೂ ಕೇವಲ ನಾಲ್ಕು ಕೀಮೀ ಸುಮಾರು ಒಂದು ಸಾವಿರ ಎಕರೆ ಸರ್ಕಾರಿ ಜಾಗ ಇದೆ ಎಂದು ಸರ್ಕಾರ ಗುರುತಿಸಿದೆ.

ಈ ಜಮೀನನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಸಲಹೆ ಮೇರೆಗೆ ಕೇಂದ್ರ ಸರ್ಕಾರಕ್ಕೆ ಜವಳಿ ಪಾರ್ಕ್ ಮಾಡಲು ಜಿಲ್ಲಾಡಳಿತ ಕಳುಹಿಸಿದೆ. ಈಗ ಈ ಜಮೀನು ನೋಡಿದರೆ ತುಮಕೂರು ಏರ್ ಪೋರ್ಟ್‍ಗೆ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಸಂಸದರು.

ಅಂತರ ರಾಷ್ಟ್ರೀಯ ವಿಮಾನ ನಿಲ್ಧಾಣ-2 ಮಾಡಲು ಚಿಂತನೆ ನಡೆದಿದೆ. ರಾಜ್ಯ ಯೋಜನಾ ಇಲಾಖೆ ತುಮಕೂರು ಜಿಲ್ಲೆ ಸೂಕ್ತ ಎಂದಿದೆ. ರಾಮನಗರ ಲಾಭಿ ಬಿಡದಿಯಲ್ಲಿ ಮಾಡಿ ಎನ್ನುತ್ತಿದೆ. ಬಸವರಾಜ್ ರವರು ತುಮಕೂರಿನಲ್ಲಿ ಮಾಡಲು ಲಾಭಿ ಆರಂಭಿಸಿದ್ದಾರೆ. ಒಂದು ಸಾವಿರ ಎಕರೆ ಸರ್ಕಾರಿ ಜಮೀನು ಇದ್ದಲ್ಲಿ ಉಳಿದ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳಲಿದೆ ಸರ್ಕಾರ.

ಈ ಹಿಂದೆ ಉದ್ದೇಶಿತ ಜಾಲಗುಣಿ ಡ್ಯಾಂ ಮಾಡುವ ಸ್ಥಳದ ಪ್ರಸ್ತಾವನೆಯನ್ನು ಜಿಲ್ಲಾಡಳಿತದಿಂದ ಸಲ್ಲಿಸಲಾಗಿದೆ. ಈಗ ನೋಡಿದರೆ ಶಿರಾ ಮಧುಗಿರಿ ಕೊರಟಗೆರೆ ಜಮೀನು ಸೂಕ್ತ ಎನಿಸುತ್ತಿದೆ. ಮೂರು ಜನ ಶಾಸಕರು, ಒಬ್ಬರು ಸಂಸದರು ಕೇಂದ್ರ ಸಚಿವರು, ಇನ್ನೊಬ್ಬ ಸಂಸದರು ಎಲ್ಲಿಗೆ ನಿಲ್ಲುತ್ತೇ, ಅಭಿವೃದ್ಧಿ ಲಾಭಿ ನೋಡೋಣ?

ಗುಬ್ಬಿ ತುಮಕೂರು ಜಾಗದಿಂದ ಶಿರಾ ಮಧುಗಿರಿ ಕೊರಟಗೆರೆ ಯತ್ತ ಏರ್ ಪೋರ್ಟ್ ಪ್ರಯಾಣ ಬೆಳೆಸಲು ಆರಂಭಿಸಿದೆ ?