22nd December 2024
Share

TUMAKURU:SHAKTHIPEETA FOUNDATION

 ತುಮಕೂರಿನ ಪ್ರಜಾಪ್ರಗತಿ ಮತ್ತು ಪ್ರಗತಿ ಟಿವಿಯ ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರವರ ಜೊತೆ ನಾನು ಮತ್ತು ಶ್ರೀ ಪ್ರಕಾಶ್ ಕಮ್ಮರಡಿಯವರು ಭಾಗವಹಿದ್ದೆವು.

ವಿರಾಮದ ವೇಳೆಯಲ್ಲಿ ಬಹಳ ಸ್ವಾರಸ್ಯಕರ ಚರ್ಚೆ ನಡೆಯಿತು, ಶಿರಾ ಅಭಿವೃದ್ಧಿಗಾಗಿ ಅವರ ಅವಧಿಯಲ್ಲಿ ಸುಮಾರು ರೂ 2500 ಕೋಟಿ ವೆಚ್ಚದ ಯೋಜನೆಗಳ ಬಗ್ಗೆ  ಚರ್ಚೆ ನಡೆಯಿತು.

ಸದಾ ಕೇಂದ್ರ ಸರ್ಕಾರ ಟೀಕೀಸುತ್ತಲೇ ಇದ್ದ ಜಯಚಂದ್ರರವರು ಮೊದಲೂರು ಕೆರೆ ಯೋಜನೆಗೆ ನೆರವು ನೀಡಿದ ನಮ್ಮ ಮನಮೋಹನ್ ಸಿಂಗ್ ರವರ ಕೊಡುಗೆ ಎಂದರು.

ಶಿರಾದ ಬ್ಯಾರೇಜ್ ಗಳ ವಿಚಾರ ಬಂದಾಗ ನಮ್ಮ ಉಮಾಭಾರತಿಯವರ ಕೊಡುಗೆ ಎನ್ನುವ ಮೂಲಕ ಅಭಿವೃದ್ಧಿ ವಿಚಾರದಲ್ಲಿ ಮೋದಿಯವರ ಸರ್ಕಾರವನ್ನು ಅಭಿನಂದಿಸಿದಂತಿತ್ತು.

ನಂತರ ಶಿರಾದ ಯುಜಿಡಿ ಯೋಜನೆಯ ಮಂಜೂರಾತಿ ಬಗ್ಗೆ ಮಾಹಿತಿ ನೀಡಿದಾಗ ಸ್ಟುಡಿಯೋದಲ್ಲಿ ಇದ್ದ ಶ್ರೀ ಮಧು, ಶ್ರೀ ಸಾ.ಚಿ.ರಾಜಕುಮಾರ್, ಶ್ರೀ ಹರೀಶ್ ಆಚಾರ್ಯ, ಶ್ರೀ ಈಶ್ವರಯ್ಯನವರು ಸೇರಿದಂತೆ ಎಲ್ಲರೂ ಬಿದ್ದು ಬಿದ್ದು ನಕ್ಕರು.

ಖಾಸಗಿಯಾಗಿ ಮಾತನಾಡಿದ ವಿಚಾರಗಳನ್ನು ಬಹಿರಂಗ ಗೊಳಿಸಬಾರದು. ರಹಸ್ಯವಾಗಿಡುವುದು ಪತ್ರಿಕಾಧರ್ಮ.

ಆದರೇ ಅವರ ಕನಸಿನ ಕರ್ನಾಟಕ ಹರಿಟೇಜ್ ಹಬ್ ವಿಚಾರ ಬಂದಾಗ ಅವರ ನುಡಿಗಳು ಕರುಳು ಕಿತ್ತು ಬರುವಂತಿತ್ತು. ಒಬ್ಬ ರಾಜಕಾರಣಿ ಕಂಡ ಕನಸುಗಳು ನನಸಾಗದೇ ಇದ್ದಾಗ ಆಗುವ ಅನುಭವ ನಿಜಕ್ಕೂ ನೋವು ತರಲಿದೆ.

ಕರ್ನಾಟಕ ಹರಿಟೇಜ್ ಹಬ್ ವಿಚಾರದಲ್ಲಿ ಕೇಂದ್ರ ಸಚಿವರಾದ ಶ್ರೀ ನಾರಾಯಣಸ್ವಾಮಿಯವರ ಸ್ಪಂದನೆ ಇದ್ದರೂ, ಶಿರಾದ ಶಾಸಕರಾದ ಶ್ರೀ ರಾಜೇಶ್ ಗೌಡರ ಮೌನ, ಹಿರಿಯೂರು ಶಾಸಕಿ ಶ್ರೀಮತಿ ಪೂರ್ಣಿಮಾಶ್ರೀನಿವಾಸ್‍ರವರ ಜಾಣ ನಡೆ,  ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳ ಗೊಂದಲ. ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ರವರ ಕಳಕಳಿ ಇದ್ದರೂ ಯೋಜನೆ ಹಳ್ಳಹಿಡಿದಿರುವುದು ನಿಜಕ್ಕೂ ಖಂಡನೀಯ.