TUMAKURU:SHAKTHI PEETA FOUNDATION
ತುಮಕೂರು ಸ್ಮಾರ್ಟ್ ಸಿಟಿ ಸಮನ್ವಯ ಸಮಿತಿ ಸಭೆಯಲ್ಲಿ, ತುಮಕೂರು ಅಮಾನಿಕೆರೆಯಲ್ಲಿ ಒಂದು ಅನಧಿಕೃತ ಕುಟುಂಬ ಇದೆ, ಅದನ್ನು ತೆರವುಗೊಳಿಸಬೇಕು ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಂಗಸ್ವಾಮಿರವರು ಹೇಳಿದಾಗ, ಟೂಡಾ ಆಯುಕ್ತರಾದ ಶ್ರೀ ಯೋಗಾನಂದ್ ರವರು ಕೆರೆ ಅಂಗಳದಲ್ಲಿ ಇರುವ ಮನೆಗೆ ದಾಖಲೆ ಮಾಡಿಕೊಟ್ಟಿದ್ದಾರೆ ಎಂಬ ಮಾತು ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರಿಗೆ ಸಿಟ್ಟು ಭರಿಸಿತು.
ಕೆರೆ ಅಂಗಳದಲ್ಲಿ ಕಟ್ಟಡ ಇದೆ ಎಂದು ಗೊತ್ತಾದರೂ ತೆರವು ಗೊಳಿಸದೇ ಇರುವ ಅಧಿಕಾರಿಗಳ ಮೇಲೂ ಕ್ರಿಮಿನಲ್ ಕೇಸ್ ಹಾಕಲು ಕಾನೂನಿನಲ್ಲಿ ಅವಕಾಶವಿದೆ ಎಂಬ ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿಗಳ ಮಾತಿಗೆ ತ್ತರಿಸಿದ ಅಧಿಕಾರಿಗಳು ಒಂದು ವಾರದಲ್ಲಿ ತೆರವುಗೊಳಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರು ಮಾತನಾಡಿ ನಗರದಲ್ಲಿನ ಸರ್ಕಾರಿ ಜಮೀನು ರಕ್ಷಣೆ ಮಾಡಲು ಅಧಿಕಾರಿಗಳಿಗೆ ಖಡಕ್ ಆಗಿ ಸೂಚಿಸಿದರು. ಎಲ್ಲೆಲ್ಲಿ ಸರ್ಕಾರಿ ಜಮೀನು ಒತ್ತವರಿ ಆಗಿದೆ ಎಂಬ ವರದಿ ಪಡೆದು ಒತ್ತುವರಿ ತೆರವು ಆಂದೋಲನ ರೂಪಿಸಲು ಸಲಹೆ ನೀಡಿದರು.
ದಿನಾಂಕ:29.09.2021 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಶ್ರೀ, ಟಿ.ಆರ್.ರಘೋತ್ತಮರಾವ್ ಮತ್ತು ಕುಂದರನಹಳ್ಳಿ ರಮೇಶ್, ಆಯುಕ್ತೆ ಶ್ರೀ ರೇಣುಕರವರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.