TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆಯಲ್ಲಿರುವ 330 ಗ್ರಾಮಪಂಚಾಯಿತಿಗಳ ಪಿಡಿಓ ರವರು ಪ್ರತಿಯೊಂದು ಗ್ರಾಮಗಳ ಇತಿಹಾಸ ಪುಸ್ತಕ ಮತ್ತು ಊರಿಗೊಂದು ಬಯೋಡೈವರ್ಸಿಟಿ ಪಾರ್ಕ್ ಹಾಗೂ ಜಿಐಎಸ್ ಲೇಯರ್ ಮಾಡಲು, ಈಗಾಗಲೇ ರಾಜ್ಯ ಸರ್ಕಾರ ಸೂಚಿಸಿರುವ GEO-SPATIAL ಮುಖಾಂತರ ತಾಜಾ ಡಾಟಾ ಸಿದ್ಧಪಡಿಸಲು ಸೈನಿಕರಂತೆ ಸನ್ನದ್ಧರಾಗಲು ಮುಂದೆ ಬಂದಿದ್ದಾರೆ.
ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ದತ್ತಾಂಶಗಳನ್ನು ಇಂಡೀಕರಿಸಲಾಗಿದೆ. ಅವುಗಳ ಪಟ್ಟಿಯನ್ನು ನೀಡಿದ್ದಾರೆ. ಇನ್ನೂ ಇವುಗಳ ಜೊತೆಗೆ ಯಾವುದಾದರೂ ಇದ್ದಲ್ಲಿ ಆಸಕ್ತರು ತಿಳಿಸಬಹುದಾಗಿದೆ.
GEO-SPATIAL :- ಎನ್.ಆರ್.ಡಿ.ಎಂ.ಎಸ್ ನಲ್ಲಿ ಹಾಲಿ ಇರುವ ಜಿಐಎಸ್ ಲೇಯರ್ ಮಾಹಿತಿಯನ್ನು ನಕ್ಷೆವಾರು ಕಳುಹಿಸಿದರೆ, ಸಂಬಂಧಿಸಿದ ಸಮಿತಿಗಳಲ್ಲಿ ಚರ್ಚಿಸಿ ಪಕ್ಕಾ ಮಾಡಲಾಗುವುದು. ನಂತರ ಉಳಿದ ಯಾವ ಯಾವ ಜಿಐಎಸ್ ಲೇಯರ್ ಮಾಡಬೇಕು ಎಂಬ ಬಗ್ಗೆ ತಿಳಿಸಿದರೆ, ಅವುಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಮುಂದೆ ಬಂದಿದ್ದಾರೆ.
ಗ್ರಾಮ ಇತಿಹಾಸ ಪುಸ್ತಕ: ಮಾದರಿ ಪುಸ್ತಕ ರಚಿಸಿ ಸಲ್ಲಿಸಿದರೆ, ಅದೇ ರೀತಿ ಪುಸ್ತಕ ಸಿದ್ಧಪಡಿಸಲು ಮುಂದೆ ಬಂದಿದ್ದಾರೆ.
ಊರಿಗೊಂದು ಬಯೋಡೈವರ್ಸಿಟಿ ಪಾರ್ಕ್:- ಈಗಾಗಲೇ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ ಜಿಲ್ಲಾಧಿಕಾರಿಗಳು ಎಲ್ಲಾ ತಹಶೀಲ್ಧಾರ್ ರವರಿಗೆ ಪತ್ರ ಬರೆದು ಊರಿಗೊಂದು ಬಯೋಡೈವರ್ಸಿಟಿ ಪಾರ್ಕ್ ನಿರ್ಮಾಣ ಮಾಡಲು ಸರ್ಕಾರಿ ಜಾಗ ಗುರುತಿಸಲು ಸೂಚಿಸಿದ್ದಾರೆ.ನಾವೂ ಸಹ ಕಡತ ಅನುಸರಣೆ ಮಾಡಲು ಶ್ರಮಿಸುತ್ತೇವೆ ಎಂಬ ಬರವಸೆ ನೀಡಿದ್ದಾರೆ.
ಸರ್ಕಾರಿ ಜಾಗ, ಗ್ರಾಮಠಾಣ ಜಾಗ, ಗುಂಡು ತೋಪು, ಕಟ್ಟೆ-ಕೆರೆಗಳ ಸುತ್ತ, ದೊಡ್ಡ ಕರಾಬು ಹಳ್ಳಗಳ ಅಕ್ಕ-ಪಕ್ಕ ಹೀಗೆ ಸ್ಥಳ ದೊರಕುವ ಕಡೆ ಪಾರ್ಕ್ ನಿರ್ಮಾಣ ಮಾಡುವ ಇಂಗಿತ ವ್ಯಕ್ತ ಪಡಿಸಿದ್ದಾರೆ.
ಆಸಕ್ತಿ ಇರುವ ಪಿಡಿಓ ಗಳು ಒಂದೆಡೆ ಸೇರಿ ಸಮಾಲೋಚನೆ ನಡೆಸಲು ಚಿಂತನೆ ನಡೆಸಿದ್ದಾರೆ. ಜಿಲ್ಲಾ ಪಂಚಾಯತ್ ಸಿಇಓ ರವರಿಂದ ಒಂದು ಸೂಚನೆ ಪತ್ರ ರವಾನಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಈಗ ಒಂದು ತಿಂಗಳುಗಳ ಕಾಲ ರಾಜಕಾರಣಿಗಳ ಕಾಟವಿಲ್ಲ, ಈ ಬಗ್ಗೆ ಯೋಜನೆ ರೂಪಿಸಲು ಒಳ್ಳೆಯ ಅವಕಾಶ.