27th July 2024
Share

TUMAKURU:SHAKTHIPEETA FOUNDATION

ರಾಜ್ಯ ಸರ್ಕಾರ ಕರ್ನಾಟಕ ಮುಕ್ತ ದತ್ತಾಂಶ ನೀತಿ-2021 ರ ಪ್ರಕಾರ ಮಾಹಿತಿ ಕಣಜ ಆರಂಭಿಸಿದೆ.ರಾಜ್ಯದ ಪ್ರತಿಯೊಂದು ಗ್ರಾಮದ, ಪ್ರತಿಯೊಂದು ಸರ್ವೇ ನಂಬರ್ ಗಳ, ಪ್ರತಿಯೊಂದು ಕುಟುಂಬದ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಮಾಹಿತಿ ಇಲ್ಲಿ ಸಂಗ್ರಹವಾಗುತ್ತಿದೆ. ನಿಮಗೂ ನಮಗೂ ಗೊತ್ತೆ ಇಲ್ಲ! ಆದರೂ ಸತ್ಯ.

ಅಂಕಿ ಅಂಶಗಳ ಇಲಾಖೆಗೆ ರಿಯಲ್ ಟೈಮ್ ಡಾಟಾ ದೊರೆಯಬೇಕಾದರೆ, ಮಾಹಿತಿ ಕಣಜಕ್ಕೆ ಪಕ್ಕಾ ಡಾಟಾ ತುಂಬ ಬೇಕಾದರೆ, ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಗೆ ಜಿಐಎಸ್ ಲೇಯರ್ ಮಾಡಲು ತಾಜಾ ಮಾಹಿತಿ ದೊರೆಯಬೇಕಾದರೆ. ಊರಿಗೊಬ್ಬ ಡಾಟಾ ಮಿತ್ರ ಅಗತ್ಯವಿದೆ. ಅವರಿಗೆ ಈ ಕೆಳಕಂಡ ಮೂರು ಹೆಸರುಗಳಲ್ಲಿ ಯಾವುದಾದರೂ ನೀಡಬಹುದು ಅಥವಾ ಸರ್ಕಾರದ ಹಂತದಲ್ಲಿ ಹೇಗೆ ಬೇಕಾದರೂ ಕರೆಯಬಹುದು.

ಈ ಹೆಸರುಗಳಲ್ಲಿ ನಿಮ್ಮ ಆಯ್ಕೆ ಯಾವುದು ?

  1. DDS:DISHA DATA  SOLDIERS
  2. DDS:DIGITAL DIALOGUE  SOLDIERS
  3. DDS:DEVELOPMENT SOLDIERS

   ನಮ್ಮ ರಾಜ್ಯ ಸರ್ಕಾರ ಮಾಹಿತಿ ಕಣಜದ ಬಗ್ಗೆ ಚರ್ಚೆ ಮಾಡಲು ಆಗಿಂದಾಗ್ಗೆ DIGITAL DIALOGUE  ಕಾರ್ಯಕ್ರಮ ಆಯೋಜಿಸುತ್ತಿದೆ. ಈ ಕಾರ್ಯಕ್ರಮವನ್ನು ಎಸಿ ರೂಂ ನಲ್ಲಿ ಕುಳಿತುಕೊಂಡು ಮಾಡುವುÀದಕ್ಕೆ ಬದಲಾಗಿ ಹಳ್ಳಿಯಲ್ಲೂ ಏಕೆ ಮಾಡಬಾರದು?’  ಎಂಬ ಆಲೋಚನೆ ಸರ್ಕಾರಕ್ಕಿದೆ.

ಈ ಹಿನ್ನಲೆಯಲ್ಲಿ ಮಾಹಿತಿ ಕಣಜದ ಯೋಜನಾ ನಿರ್ದೇಶಕರಾದ ಶ್ರೀ ಶ್ರೀವ್ಯಾಸ್ ರವರೊಂದಿಗೆ ಬಹುಮಹಡಿಗಳ ಕಟ್ಟಡದಲ್ಲಿ ಸಮಾಲೋಚನೆ ನಡೆಯಿತು. ಉನ್ನತ ಮಟ್ಟದ ಅಧಿಕಾರಿಗಳ ಇಚ್ಚಿಸಿದರೆ ಮೊಟ್ಟ ಮೊದಲ ಸಭೆಯನ್ನು ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು, ನಿಟ್ಟೂರು ಹೋಬಳಿ, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದರನಹಳ್ಳಿಯಲ್ಲಿ ಆಯೋಜಿಸಲು ಆಹ್ವಾನ ನೀಡಿದ್ದೇನೆ.

ಇದು ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿದೆ. ನಂತರ ರಾಜ್ಯದ ಎಲ್ಲಾ ಸಂಸದರ ಆದರ್ಶ ಗ್ರಾಮ ಯೋಜನೆ ವ್ಯಾಪ್ತಿಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲು ಚರ್ಚೆ ಆರಂಭವಾಗಿದೆ.

ಜೊತೆಗೆ ರಾಜ್ಯದ ಪ್ರತಿಗ್ರಾಮದಲ್ಲೂ DDS ಆಯ್ಕೆ ಮಾಡಿ, ಸರ್ಕಾರದಿಂದಲೇ ಒಂದೊಂದು ಮೊಬೈಲ್ ನೀಡಿ, ಅಗತ್ಯವಿರುವ ಡಾಟಾ ಒಂದಕ್ಕೆ ಬೆಲೆ ನಿಗದಿ ಮಾಡಿ, ಅವರಿಂದಲೇ ಎಲ್ಲಾ ಡಾಟಾ ಅಫ್ ಲೋಡ್ ಮಾಡಿಸಿದರೆ ಹೇಗೆ ಎಂಬ ಚರ್ಚೆಯೂ ಆರಂಭವಾಗಿದೆ.

ಕರ್ನಾಟಕ ರಾಜ್ಯದಲ್ಲಿ ಇನ್ನೊಂಡು ಡಿಜಿಟಲ್ ಕ್ರಾಂತಿ ಮುನ್ಸೂಚನೆ ಇದೆ. ಹೀಗೇನಾದರೂ ಆದರೆ ಮುಂದೆ ಯಾವುದೇ ಗಣತಿ ಅಗತ್ಯವಿಲ್ಲ, ಮಾಹಿತಿ ಹಕ್ಕು ಅರ್ಜಿಯ ಕಾಟ ಇರುವುದಿಲ್ಲ. ಎಲ್ಲವೂ ಮಾಹಿತಿ ಕಣಜದ ಪೋರ್ಟಲ್‍ನಲ್ಲಿ ಮತ್ತು K-GIS ಪೋರ್ಟಲ್‍ನಲ್ಲಿ ಲಭ್ಯವಾಗಲಿದೆ.