22nd December 2024
Share

TUMAKURU:SHAKTHIPEETA FOUNDATION

 ಇದೊಂದು ಹೊಸ ಪರಿಕಲ್ಪನೆ. ಇದೂವರೆಗೂ ನಾವು ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳುವುದು ವಾಡಿಕೆ, ಆದರೆ ಈಗ ಅಧಿಕಾರಿಗಳ ಆಂದೋಲನಾ ಹಮ್ಮಿಕೊಳ್ಳಲು ಚಿಂತನೆ ನಡೆಸಿದ್ದೇನೆ. ಇದಕ್ಕೆ ಸೂಕ್ತ ಹೆಸರು ಸೂಚಿಸಲು ಮನವಿ.

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ತುಮಕೂರು ಜೆಲ್ಲೆಯನ್ನು 2022 ರೊಳಗೆ ಡಾಟಾ ಜಿಲ್ಲೆಯಾಗಿ ಘೋಷಣೆ ಮಾಡಲು ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ಹರಸಾಹಸ ಪಡುತ್ತಿದ್ದಾರೆ.

ದಿಶಾ ಸಮಿತಿ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಈ ವಿಷಯದ ಬಗ್ಗೆ ಚರ್ಚೆ ಮಾಡಿದಾಗ, ಕೆಲವು ಅಧಿಕಾರಿಗಳು ನನಗೆ ಹೇಳಿದ್ದು ಸಾರ್ ನಾವು ಏನೇನು ಮಾಡಬೇಕು ಮೊದಲು ಹೇಳಿ, ನಾವು ಹಾಗೆ ಮಾಡುತ್ತೇವೆ, ಇದು ನಮಗೆ ಹೊಸದು. ಅನುಭವವಿಲ್ಲ ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಗಿದೆ ಈ ಜಿಐಎಸ್ ಲೇಯರ್ ಎನ್ನುತ್ತಾರೆ.

ನಾನು ಅವರ ಸಲಹೆಯಂತೆ ಈ ಪತ್ರ ಚಳುವಳಿ ಆಂದೋಲನವನ್ನು ರಾಜ್ಯದ 31 ಜಿಲ್ಲೆಗಳಿಗೂ ಆರಂಭಿಸಲು ಯೋಚಿಸಿದ್ದೇನೆ. ನೋಡೋಣ ಯಾವ ಜಿಲ್ಲೆ ಯಾವ ರೀತಿ ಕಾರ್ಯಕ್ರಮ ರೂಪಿಸಲಿದೆ ಎಂಬ ಬಗ್ಗೆ ರಿಯಲ್ ಟೈಮ್/ಲೈವ್ ಅಧ್ಯಯನ ಮಾಡೋಣ.

ರಾಜ್ಯ ಮಟ್ಟದ ದಿಶಾ ಸಮಿತಿ. ಕರ್ನಾಟಕ

ಕ್ರಮಾಂಕ: ಎನ್‍ಆರ್‍ಡಿಎಂಎಸ್/1/2021                                           ದಿನಾಂಕ:14.11.2021

ಗೆ.

ಅಪರ ಮುಖ್ಯ ಕಾರ್ಯದರ್ಶಿ.

ಯೋಜನೆ,ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.

ಬಹುಮಹಡಿಗಳ ಕಟ್ಟಡ. ಬೆಂಗಳೂರು .

GEO-SPATIAL – ಅಧಿಕಾರಿಗಳ ಆಂದೋಲನಾ. ಪತ್ರ-1

ದಿನಾಂಕ:14.06.2021 ರಂದು ತಮ್ಮ ಇಲಾಖೆಯಿಂದ ಒಂದು ಸುತ್ತೋಲೆ ಹೊರಡಿಸಿ ಜಿಲ್ಲಾ ಪಂಚಾಯತ್ ಯೋಜನಾ ಘಟಕ ಮತ್ತು ತಾಲ್ಲೋಕು ಪಂಚಾಯತ್ ಯೋಜನಾ ಘಟಕದ ಅಧಿಕಾರಿಗಳು ಯಾರು, ಯಾರು ಏನೇನು ಮಾಡಬೇಕು ಎಂಬ ಬಗ್ಗೆ ಮನವರಿಕೆ ಮಾಡಿರುವುದು ಸ್ವಾಗಾತಾರ್ಹ.

   ಕೇಂದ್ರ ಸರ್ಕಾರ ಯಾವುದೇ ಯೋಜನೆಗಳನ್ನು ಮಂಜೂರು ಮಾಡಿದರೂ ಜಿಐಎಸ್ ಲೇಯರ್ ಮಾಡಲು ಸೂಚಿಸುವುದು ಸಾಮಾನ್ಯವಾಗಿದೆ. ದಿಶಾ ಸಮಿತಿಯ ಜಿಲ್ಲಾ ಘಟಕಗಳಲ್ಲಿ ಆಗಲಿ ಅಥವಾ ಜಿಲ್ಲಾ ಪಂಚಾಯತ್ ನಲ್ಲಿರುವ ಎನ್.ಆರ್.ಡಿ.ಎಂ.ಎಸ್ ನಲ್ಲಾಗಲಿ ಆಧುನಿಕ ವ್ಯವಸ್ಥೆಗೆ ಅನೂಕೂಲವಾಗುವ ಕಂಪ್ಯೂಟರ್‍ಗಳಾಗಲಿ, ಸಾಪ್ಟ್ ವೇರ್‍ಗಳಾಗಲಿ ಇಲ್ಲ. ಈ ಬಗ್ಗೆ ವಿಶೇಷ ಗಮನ ಹರಿಸಲು ಮನವಿ.

ನಾನು ಇಂದಿನಿಂದ ಜಿಯೋ ಸ್ಪೇಶಿಯಲ್ ಅಧಿಕಾರಿಗಳ ಆಂದೋಲನಾ ಆರಂಭಿಸಲು ಇಚ್ಚಿಸಿದ್ದೇನೆ. ಈ ಬಗ್ಗೆ ತಮ್ಮ ಇಲಾಖೆಗೆ ನನ್ನ ಅನಿಸಿಕೆ ಮತ್ತು ಅಭಿಪ್ರಾಯಗಳ ಬಗ್ಗೆ ಪತ್ರ ಬರೆಯುವ ಮೂಲಕ ಒಂದಿಷ್ಟು ಪರಿಕಲ್ಪನೆಗಳನ್ನು ಹಂಚಿಕೊಳ್ಳಲು ಯೋಚಿಸಿದ್ದೇನೆ ಆದ್ದರಿಂದ ಈ ಕೆಲಖಂಡ ಮಾಹಿತಿ ನೀಡಲು ಕೋರಿದೆ.

  1. ಈ ಸೂಚನಾ ಪತ್ರದಲ್ಲಿ ತಿಳಿಸಿದಂತೆ ರಾಜ್ಯದ 31 ಜಿಲ್ಲೆಗಳಲ್ಲಿಯೂ ಒಂದೊಂದು ತಜ್ಞ ಸಂಸ್ಥೆಯನ್ನು ನೇಮಕ ಮಾಡಿಕೊಳ್ಳಬೇಕು. 31 ಜಿಲ್ಲೆಯ ತಜ್ಞ ಸಂಸ್ಥೆಗಳ ಮೊಬೈಲ್, ಇ-ಮೇಲ್ ಮತ್ತು ವಿಳಾಸ ನೀಡುವುದು.
  2. 31 ಜಿಲ್ಲೆಗಳ ಎನ್.ಆರ್.ಡಿ.ಎಂ.ಎಸ್ ನಲ್ಲಿ ಹಾಲಿ ಈಗಾಗಲೇ ಇರುವ ಇಲಾಖಾವಾರು ಜಿಐಎಸ್ ಲೇಯರ್ ಮಾಹಿತಿ ನೀಡುವುದು ಹಾಗೂ ಮುಂದೆ ಇಲಾಖಾವಾರು ಮಾಡಲು ಉದ್ದೇಶಿರುವ ಜಿಐಎಸ್ ಲೇಯರ್ ಮಾಹಿತಿ ನೀಡುವುದು.
  3. 31 ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಇಲಾಖಾವಾರು ಅನುದಾನ, ಖರ್ಚಾಗಿರುವ ಮೊತ್ತ, ಬಿಡುಗಡೆಯಾಗಬೇಕಾಗಿರುವ ಮೊತ್ತ ಮತ್ತು ಉಳಿಕೆಹಣದ ಮಾಹಿತಿಯನ್ನು ಈ ಲೋಕಸಭಾ ಅವಧಿಯ 2019-20, 2020-21 ಮತ್ತು 2021-2022  ರ ಸಾಲಿನ ಜಿಲ್ಲಾವಾರು ಮಾಹಿತಿ ನೀಡುವುದು.
  4. ಜಿಲ್ಲಾ ಯೋಜನಾ ಸಮಿತಿ ಸಭೆಗಳನ್ನು ವರ್ಷದಲ್ಲಿ ಎಷ್ಟು ಭಾರಿ ಮಾಡಬೇಕು. ಕಳೆದ 10 ವರ್ಷದಲ್ಲಿ ಯಾವ ಯಾವ ಜಿಲ್ಲೆಯಲ್ಲಿ ವಾರ್ಷಿಕವಾಗಿ ಎಷ್ಟೆಷ್ಟು ಸಭೆಗಳನ್ನು ಮಾಡಿದ್ದಾರೆ ಪಟ್ಟಿ ನೀಡುವುದು.
  5. ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ, ರಾಜ್ಯ ಸರ್ಕಾರದ ಮನೆ ಮನೆಗೆ ಗಂಗೆ ಘೋಷಣೆಯಡಿ ರಾಜ್ಯದ ಪ್ರತಿಯೊಂದು ಗ್ರಾಮದಲ್ಲೂ ವಿಲೇಜ್ ಆಕ್ಷನ್ ಮಾಡಬೇಕು, ಇದೂವರೆಗೂ ವಿಲೇಜ್ ಆಕ್ಷನ್ ಪ್ಲಾನ್ ಮಾಡಿರುವ ಗ್ರಾಮಗಳ ನಕ್ಷೆ ಸಹಿತ ಮಾಹಿತಿ ನೀಡುವುದು.

ವಂದನೆಗಳೊಂದಿಗೆ                                            ತಮ್ಮ ವಿಶ್ವಾಸಿ

          ಕುಂದರನಹಳ್ಳಿ ರಮೇಶ್, ಮೊ:9886774477.    ಸದಸ್ಯ. ರಾಜ್ಯಮಟ್ಟದ ದಿಶಾ ಸಮಿತಿ.