22nd December 2024
Share

ಇದು ನಮ್ಮ ತೋಟ ನೋಡಿ, ದರೋಡೆಕೋರರು ಕರಾಬುಹಳ್ಳ ಮುಚ್ಚಿಕೊಂಡಿರುವ ಪರಿಣಾಮ ಇದು. ಇದನ್ನು ತೆಗೆಸಲು ಹೋದವರೇ ವಿಲನ್ ಗಳು. ನಾನು ಈ ಕರಾಬುಹಳ್ಳ ಒತ್ತುವರಿ ತೆಗೆಸದೆ ಬೇರೆಯವರಿಗೆ ಹೇಳುವುದೇ ಮೂರ್ಖತನ ಅಲ್ಲವೇ? ಒತ್ತುವರಿ ಯುದ್ಧ ಆರಂಭಾವಾಗಿದೆ. ಈಗ ಒತ್ತುವರಿದಾರರು ಬೆಂಬಲ ನೀಡಬಹುದು. ಕಾದು ನೋಡೋಣ?

TUMAKURU:SHAKTHIPEETA FOUNDATION

ರಾಜ್ಯದ ಯಾವುದೇ ಮೂಲೆಗಳಿಗೆ ಹೋಗಿ ಕರಾಬುಹಳ್ಳಗಳು, ಕೋಡಿಹಳ್ಳಗಳು, ರಾಜಕಾಲುವೆಗಳ ಅತ್ಯಾಚಾರವಾಗಿದೆ. ಇವುಗಳನ್ನು ದರೋಡೆಕೋರರು ಹಗಲು ದರೋಡೆ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಈ ದರೋಡೆಕೋರರಿಗೆ ಮತ್ತು ಒತ್ತುವರಿ ನೋಡಿಕೊಂಡು ಸುಮ್ಮನೆ ಕುಳಿತಿರುವವರಿಗೆ ಜೈಲು ಶಿಕ್ಷೆ ಕಾನೂನು ಇದೆ. ಇದು ಹಲ್ಲು ಕಿತ್ತ ಹಾವಿನಂತಾಗಿದೆ.

ನರೇಗಾ ಯೋಜನೆಯಲ್ಲಿ ಒಂದು ಆಂದೋಲನದ ರೀತಿಯಲ್ಲಿ ಅಭಿವೃದ್ಧಿ ಮಾಡಬಹುದಾಗಿದೆ, ಆದರೆ ಅಭಿವೃದ್ಧಿ ಮಾಡಲು ಹೋದರೆ ಮತ ಬೆದರಿಕೆ ರಾಜಕಾರಣಿಗಳಿಗೆ ಇದೆ. ಒತ್ತುವರಿ ತೆಗೆದರೆ ನಮ್ಮ ಓಟು ಹೋಗುತ್ತವೆ ಎಂಬ ಭ್ರಮೆ ಚುನಾಯಿತ ಜನಪ್ರತಿನಿಧಿಗಳಿಗೆ ಇದೆ. ಅಧಿಕಾರಿಗಳಿಗೆ ಜೀವ ಬೆದರಿಕೆ ಇದೆ. ಮತ್ತೆ ಮಾಡುವರು ಯಾರು?

ಹಿಂದೆ ಪ್ರತಿಯೊಂದು ಗ್ರಾಮದ ಜನ ಬಿಟ್ಟಿ ಹಾಳು ಮಾಡಿಕೊಂಡು ನಿರಂತರವಾಗಿ ಅಭಿವೃದ್ಧಿ ಪಡಿಸುತ್ತಿದ್ದರು, ಎಷ್ಟೆ ಮಳೆ ಆದರೂ ಪ್ರವಾಹ ಬರುತ್ತಿರಲಿಲ್ಲ. ಈಗ ಪ್ರವಾಹವೇ ಒಂದು ದೊಡ್ಡ ದಂದೆಯಾಗಿದೆ. ಇದೊಂದು ಅಕ್ಷಯಪಾತ್ರೆ. ಪ್ರವಾಹದ ಹೆಸರು ಹೇಳಿಕೊಂಡು ಕೋಟಿಗಟ್ಟಲೆ ನುಂಗಬಹುದು.

ಈಗ ಸ್ಮಶಾನ ವೈರಾಗ್ಯದಂತೆ, ಪ್ರವಾಹದಲ್ಲಿ ಹಾಳುಮಾಡಿಕೊಂಡಿರುವವರು ಬೆಂಬಲ ನೀಡುತ್ತಾರೆ. ಒತ್ತುವರಿ ತೆಗೆದು ಅಭಿವೃದ್ಧಿ ಪಡಿಸುವ ಭೂಪ ಬೇಕು? ಅಂಥವರು ಯಾರಿದ್ದಾರೆ ಕಾದು ನೋಡಬೇಕು? 

ಹಲವಾರು ಇಲಾಖೆಗಳು ಈ ಕರಾಬು ಹಳ್ಳಗಳ ಮಾಲೀಕತ್ವ ಹೊಂದಿವೆ, ಒಬ್ಬರ ಮೇಲೆ ಒಬ್ಬರು ತೋರಿ ಸುಮ್ಮನಾಗುತ್ತಾರೆ.

ರಾಜ್ಯ ಮಟ್ಟದ ದಿಶಾ ಸಮಿತಿ. ಕರ್ನಾಟಕ

ಕ್ರಮಾಂಕ: ಎನ್‍ಆರ್‍ಡಿಎಂಎಸ್/3/2021                                           ದಿನಾಂಕ:20.11.2021

ಗೆ.

ಅಪರ ಮುಖ್ಯ ಕಾರ್ಯದರ್ಶಿ.

ಯೋಜನೆ,ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.

ಹಾಗೂ ಸದಸ್ಯ ಕಾರ್ಯದರ್ಶಿ. ರಾಜ್ಯ ಮಟ್ಟದ ದಿಶಾ ಸಮಿತಿ

ಬಹುಮಹಡಿಗಳ ಕಟ್ಟಡ. ಬೆಂಗಳೂರು .

GEO-SPATIAL  –  ಅಧಿಕಾರಿಗಳ ಆಂದೋಲನಾ. ಪತ್ರ-3

ರಾಜ್ಯಾದ್ಯಾಂತ ಕರಾಬುಹಳ್ಳಗಳು, ಕೋಡಿಹಳ್ಳಗಳು, ರಾಜಕಾಲುವೆಗಳ ಆಂದೋಲನ ನಡೆಯ ಬೇಕು.

  1. ಹಳ್ಳಗಳಲ್ಲಿ ನೂರಾರು ಪಿಕ್‍ಅಪ್ ನಿರ್ಮಾಣ ಮಾಡಿದ್ದಾರೆ, ಇವುಗಳಲ್ಲಿ ಸಂಗ್ರಹವಾಗುವ ಹೂಳನ್ನು ತೆಗೆಯುವ ಗೋಜಿಗೆ ಹೋಗಿಲ್ಲ. ಹಳ್ಳಗಳು ತುಂಬಿ ಪ್ರವಾಹಕ್ಕೆ ಇದು ಬಾಗಿಲು ಆಗಿದೆ. ಆದ್ದರಿಂದ ಎಷ್ಟು ಹಳ್ಳಗಳಿಂದ ಯಾವ ಯಾವ ಕಡೆ ನೀರು ನುಗ್ಗಿದೆ ಎಂಬ ಮಾಹಿತಿ ಸಂಗ್ರಹಿಸಬೇಕಿದೆ.
  2. ಬಹುತೇಕ ಕರಾಬುಹಳ್ಳಗಳು ಒತ್ತುವರಿ ಮಾಡಿಕೊಂಡಿದ್ದಾರೆ, ಇವುಗಳ ಡಾಟಾ ಬೇಸ್ ಪಕ್ಕಾ ಆಗಿದೆಯೇ?
  3. ಅಟಲ್ ಭೂಜಲ್ ಯೋಜನೆಯಡಿ ಇವುಗಳ ಉದ್ದ, ಅಗಲ, ಎಷ್ಟು ಎಕರೆ ವಿಸ್ಥೀರ್ಣ ಇದೆ, ಇದರಲ್ಲಿ ಎಷ್ಟು ಎಕರೆ ಒತ್ತುವರಿ ಆಗಿದೆ. ಯಾರು ಒತ್ತುವರಿ ಮಾಡಿದ್ದಾರೆ, ಒತ್ತುವರಿ ಮಾಡಿರುವವರನ್ನು ಮತ್ತು ಒತ್ತುವರಿ ನೋಡಿಕೊಂಡು ಸುಮ್ಮನೆ ಇರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕೊದ್ದಮೆ ಹೂಡಲೇಬೇಕು.ಎಲ್ಲೆಲ್ಲಿ ಎಷ್ಟು ಜನರ ಮೇಲೆ ಮೊಕೊದ್ದಮೆ ಹೂಡಲಾಗಿದೆ.
  4. ಒಂದು ವಿಪರ್ಯಾಸ ಎಂದರೆ ಎಂದರೆ ಅಟಲ್ ಭೂಜಲ್ ಯೋಜನೆಯಡಿ ಕರಾಬುಹಳ್ಳಗಳು ಮತ್ತು ಪಿಕ್ ಅಪ್ ಗಳನ್ನು ವಾಟರ್ ಆಡಿಟ್ ಗೆ ಗಣನೆಗೆ ತೆಗೆದುಕೊಂಡಿಲ್ಲವಂತೆ, ಇದೊಂದು ದುರಂತವಾಗಿದೆ. ಈ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗಬೇಕಿದೆ.ಈ ಬಗ್ಗೆ ವಿವರಣೆ ನೀಡುವುದು.
  5. ರಾಜ್ಯಾಧ್ಯಾಂತ ಎಲ್ಲಾ 31 ಜಿಲ್ಲೆಗಳ ಎನ್.ಆರ್.ಡಿ.ಎಸ್ ಪ್ರತಿಯೊಂದು ಗ್ರಾಮದ ಕೆರೆ-ಕಟ್ಟೆಗಳು ನೀರಿನಿಂದ ತುಂಬಿವೆ, ಎಷ್ಟು ತುಂಬಿಲ್ಲ, ಎಷ್ಟು ಸಾಮಾಥ್ರ್ಯದ ನೀರು ಬಂದಿದೆ ಎಂಬ ಕೆರೆ-ಕಟ್ಟೆವಾರುಜಿಐಎಸ್ ಲೇಯರ್ ಮಾಡುವುದು.

ಈ ಮಾಹಿತಿಗಳನ್ನು ನೀಡಲು ಈ ಮೂಲಕ ಕೋರಿದೆ.

ವಂದನೆಗಳೊಂದಿಗೆ                                            ತಮ್ಮ ವಿಶ್ವಾಸಿ

          ಕುಂದರನಹಳ್ಳಿ ರಮೇಶ್, ಮೊ:9886774477.    ಸದಸ್ಯ. ರಾಜ್ಯ ಮಟ್ಟದ ದಿಶಾ ಸಮಿತಿ.