13th June 2024
Share

ಶಕ್ತಿಪೀಠ ಕ್ಯಾಂಪಸ್: ಅನ್ನಪರಿಸರಜ್ಞಾನ ಕಟ್ಟಡದ ಅಂತಿಮ ರೂಪುರೇಷೆ.

TUMKURU:SHAKTHIPEETA FOUNDATION

ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಜೆ.ಜಿ.ಹಳ್ಳಿ ಹೋಬಳಿ, ಗೌಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಶಕ್ತಿಪೀಠ ಕ್ಯಾಂಪಸ್ ನಲ್ಲಿ ಪ್ರಥಮ ಕಟ್ಟಡವನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಭಿಮಾನಿಗಳು ಅವರ 80 ನೇ ವರ್ಷದ ನನೆಪಿಗಾಗಿ ನಿರ್ಮಾಣ ಮಾಡಿ¸ಲು ಮುಂದೆ ಬಂದಿದ್ದಾರೆ ಎಂದು ತಿಳಿಸಲು ಹರ್ಷಿಸುತ್ತೇನೆ.

 ಈ ಕಟ್ಟಡಕ್ಕೆ ಅನ್ನಪರಿಸರಜ್ಞಾನ ಎಂದು ಹೆಸರು ಇಡಲು ಚರ್ಚೆ ಆರಂಭವಾಗಿದೆ. ಸುಮಾರು 100 ರಿಂದ 120 ಚದುರದ ಕಟ್ಟಡವನ್ನು ಬೆಂಗಳೂರಿನ ಪಿರಮಿಡ್ ಬಿಲ್ಡ್ ಟೆಕ್ ನ ಶ್ರೀ ಅಶೋಕ್‍ರವರು ಕಟ್ಟಡದ ಕಾಮಗಾರಿ ಆರಂಭಿಸಿದ್ದಾರೆ.

ಕ್ಯಾಂಪಸ್ ಸ್ಥಳದ ಪರಿಸರ, ದರಗಳ ಹೆಚ್ಚುವರಿ, ಕಟ್ಟಡಕ್ಕೆ ಬಳಸುವ ಮೆಟಿರಿಯಲ್ ಬೆಲೆ, ಗುತ್ತಿಗೆದಾರರ ಲಾಭ.ಎಲ್ಲಾ ವಿಧವಾದ ತೆರಿಗೆಗೆಳು, ವಿದ್ಯುತ್ ಶುಲ್ಕ/ಜನರೇಟರ್ ಶುಲ್ಕ, ಇತರೆ ವೆಚ್ಚಗಳು ಸೇರಿದಂತೆ  ಸಿವಿಲ್ ಕಾಮಗಾರಿ ಕೆಲಸವನ್ನು ಒಂದು ಚದುರಕ್ಕೆ ರೂ 1.10 ಲಕ್ಷದಿಂದ ರೂ 1.50 ಲಕ್ಷದವರೆಗೆ ಮತ್ತು ಎ ಟು ಝಡ್ ಕೆಲಸವನ್ನು ಒಂದು ಚದುರಕ್ಕೆ ರೂ 2.00 ಲಕ್ಷದಿಂದ 3.00 ಲಕ್ಷದವರೆಗೆ ಕ್ವಾಲಿಟಿ ಮೆಟಿರಿಯಲ್ ಗಳಿಗೆ ಅನುಗುಣವಾಗಿ ಮೂರು ರೀತಿಯ ದರಗಳ  ಅಂದಾಜು ಪಟ್ಟಿಗಳನ್ನು ನೀಡಿ, ಅಂತಿಮವಾಗಿ ಎಂ.ಓ.ಯು ಮಾಡಿಕೊಳ್ಳಲು ಸಿದ್ಧತೆ ನಡೆದಿದೆ.

 ಪ್ರತಿಯೊಂದು ಮೆಟಿರಿಯಲ್ ಸ್ಪೆಷಿಫಿಕೇಷನ್ ಸಹಿತ ಅಂದಾಜು ಪಟ್ಟಿ ಸಿದ್ಧಪಡಿಸುವುದು. ಪೇಮೆಂಟ್ ಷಡ್ಯೂಲ್ ಪಟ್ಟಿ ನೀಡುವುದು. ಲೋಕೋಪಯೋಗಿ ಅಥವಾ ಕೇಂದ್ರ ಲೋಕೋಪಯೋಗಿ ಇಲಾಖೆ ಕಾಮಗಾರಿ ವೀಕ್ಷಣೆ ಮಾಡುವುದರಿಂದ ನಿಯಾಮುನುಸಾರ ಎಲ್ಲಾ ಕ್ರಮಗಳನ್ನು ಅನುಸರಿಸಲು ಚರ್ಚೆ ನಡೆದಿದೆ.

ಕಾಮಗಾರಿ ಬಿಲ್ ನೀಡಿದ ನಂತರ, ವಿವಿಧ ತಜ್ಞರುಗಳ ಪರಿಶೀಲನೆ, ಆಡಿಟ್ ಪರಿಶೀಲನೆ, ವಕೀಲರ ಪರಿಶೀಲನೆ ನಂತರ ಬಿಲ್ ಪಾಸ್ ಮಾಡಲು ಚಿಂತನೆ ನಡೆದಿದೆ. ಬಿಲ್ ನೀಡಿದ 10 ದಿವಸಗಳ ಒಳಗಾಗಿ ಪಾವತಿಗೆ ಚಿಂತನೆಯಿದೆ. ಎಂ.ಓ.ಯು ನಲ್ಲಿ ಎಲ್ಲವನ್ನು ನಿಖರವಾಗಿ ನಮೂದಿಸುವುದು. ಶಕ್ತಿಪೀಠ ಕ್ಯಾಂಪಸ್ ಕಾಮಗಾರಿ ಆರಂಭದಿಂದಲೂ ಪಾರದರ್ಶಕವಾಗಿ, ಇರಬೇಕಾಗಿರುವುದರಿಂದ ತಮ್ಮ ಸಲಹೆಗಳನ್ನು ಪರಿಗಣಿಸಿ ಅಗತ್ಯ ಎಲ್ಲಾ ಕ್ರಮಗಳನ್ನು ಅನುಸರಿಸುವುದು ಸೂಕ್ತವಾಗಿದೆ.

                       ಕಟ್ಟಡದ ವಿವರ

ಕರ್ನಾಟಕ ರಾಜ್ಯದ 31 ಜಿಲ್ಲೆಗಳಿಗೂ ಒಂದೊಂದು ಅಧ್ಯಯನ ಕೊಠಡಿಯಂತೆ 31 ಕೊಠಡಿಗಳು ನಿರ್ಮಾಣವಾಗಲಿವೆ.

 1. ನೆಲ ಅಂತಸ್ತು – ಅಡುಗೆ ಮನೆ, ಊಟದ ಕೊಠಡಿ, ಸ್ಟೋರ್, ಒಂದು ರೂಮು, ಮೀಟಿಂಗ್ ಹಾಲ್ ಮತ್ತು ಹೊರಾಂಗಣ ನಿರ್ಮಾಣ.
 2. ಮೊದಲನೇ ಅಂತಸ್ತು -8 ಕೊಠಡಿಗಳ ನಿರ್ಮಾಣ
 3. ಎರಡನೇ ಅಂತಸ್ತು – 8 ಕೊಠಡಿಗಳ ನಿರ್ಮಾಣ
 4. ಮೂರನೇ ಅಂತಸ್ತು -8 ಕೊಠಡಿಗಳ ನಿರ್ಮಾಣ
 5. ನಾಲ್ಕನೇ ಅಂತಸ್ತು – 8 ಕೊಠಡಿಗಳ ನಿರ್ಮಾಣ
 6. ನೀರಿನ ಸಂಪ್.
 7. ಲೆಟರಿನ್ ಪಿಟ್.
 8. ಪಬ್ಲಿಕ್ ಟಾಯ್‍ಲೆಟ್ ಮಹಿಳೆ ಮತ್ತು ಪುರುಷ.
 9. ಗೋಡಾನ್ ಮತ್ತು ಮೇಟಿ ಕೊಠಡಿ.
 10. ಕಟ್ಟಡದ ಮುಂಬಾಗ ಸುಮಾರು 60 ಮೀಟರ್ ಉದ್ದ ಮತ್ತು 3 ಮೀಟರ್ ಅಗಲದ ಆಯುಷ್ ಥೆರಫಿ.
 11. ಕಟ್ಟಡದ ಹಿಂಭಾಗ ಮತ್ತು ಪಕ್ಕದಲ್ಲಿ ಕುಳಿತು ಕೊಳ್ಳಲು ಗೋಡೆ.
 12. ಕಾಮನ್ ಎಸ್.ಟಿ.ಪಿ ಅಥವಾ ಈ ಕಟ್ಟಡಕ್ಕೆ ಲೆಟರಿನ್ ಪಿಟ್ ಅಧ್ಯಯನ ಮಾಡಿ ಅಂತಿಮ ಗೊಳಿಸಲಾಗುವುದು.

ವಿಶೇಷ ಸೂಚನೆ:

 1. ಕೆಲವರು ಸಲಹಾಗಾರರು ಉಚಿತವಾಗಿ ಸೇವೆ ಮಾಡಲು ಇಚ್ಚಿಸಿದ್ದಾರೆ, ಅವರ ಅಭಿಪ್ರಾಯ ತಿಳಿದುಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
 2. ಇದು ಶಕ್ತಿದೇವತೆ ಕೆಲಸ ನಿಮ್ಮ ಕೆಲಸ ಎಂದು ತಿಳಿದುಕೊಂಡು ಆದಷ್ಟು ಶೀಘ್ರವಾಗಿ, ಕಾಲಮಿತಿ ಕಾಮಗಾರಿ ವಿವರಗಳೊಂದಿಗೆ ಎಂ.ಓ.ಯು ಮಾಡಿಕೊಂಡು ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಮನವರಿಕೆ ಮಾಡಿದೆ.
 3. ಇಂಟಿರಿಯರ್ ನಿಂದ ಆರಂಭಿಸಿ ಪ್ರತಿಯೊಂದಕ್ಕೂ ನಕ್ಷೆ ಸಹಿತ ಮಾಹಿತಿ ಇರುವುದು ಕಡ್ಡಾಯ.
 4. ತೋರಣ ಕಟ್ಟಿ ಒಳಗೆ ಹೋಗುವವರೆಗೂ ಈ ಎಲ್ಲಾ ಕಾಮಗಾರಿಗಳ ಅಂದಾಜು ಪಟ್ಟಿ ದರ ಪಟ್ಟಿಗಳೊಂದಿಗೆ ಇರಬೇಕಾಗುತ್ತದೆ.
 5. ಸೈಟ್ ಇಂಜಿನಿಯರ್ ಶಕ್ತಿಪೀಠ ಫೌಂಡೇಷನ್ ವತಿಯಿಂದ ಇರುವುದಿಲ್ಲಾ 108 ಶಕ್ತಿದೇವತೆಗಳೇ ಅಂತಿಮ ತಿರ್ಮಾನ ಕೈಗೊಳ್ಳುವರು.
 6. ವಿಷನ್ ಗ್ರೂಪ್ ಗೆ ಇನ್ನೂ ಕೆಲವರು ಸೇರ್ಪಡೆಯಾಗಲಿದ್ದಾರೆ.
 7. ವಿಷನ್ ಗ್ರೂಪ್ ಸದಸ್ಯರ ಅಭಿಪ್ರಾಯ ಪಡೆದುಕೊಳ್ಳಲಾಗುವುದು.
 8. ಅಂತಿಮ ನಿರ್ಧಾರವನ್ನು ಶಕ್ತಿಪೀಠ ಫೌಂಡೇಷನ್ ಕೈಗೊಳ್ಳಲಿದೆ.
 9. ಅಂತಿಮವಾಗಿ ಶ್ರೀ ಜಿ.ಎಸ್.ಬಸವರಾಜ್ ರವರಿಂದ ದರ ಅನುಮೋದನೆಯಾಗಲಿದೆ.

ವಾಸ್ತು ಪರಿಣಿತರಾದ ಶ್ರೀ ಎಂ.ಕೆ. ನಾಗರಾಜ್ ರವರು.ಸಲಹಾಗಾರರಾದ ಶ್ರೀ ಸತ್ಯಾನಂದ್‍ರವರು, ಆರ್ಕಿಟೆಕ್ಟ್ ಶ್ರೀ ಚಿದಾನಂದ್‍ರವರು, ಸ್ಟೀಲ್ ಬ್ರಹ್ಮ ಶ್ರೀ ಮಲ್ಲೇಶ್‍ರವರು, ನಿವೃತ್ತ ಎಸ್.ಇ. ಶ್ರೀ ಹರೀಶ್ ರವರು, ವಕೀಲರಾದ ಶ್ರೀ ಮೋಹನ್ ಕುಮಾರ್ ರವರು ಮತ್ತು ಆಡಿmರ್ ಶ್ರೀ ತ್ರಿನೇತ್ರಸ್ವಾಮಿ ರವರು ಸೇರಿದಂತೆ ಎಲ್ಲರ ಸ್ಪಷ್ಟ ಅಭಿಪ್ರಾಯಗಳು ಸೇರಿದಂತೆ ಅಂತಿಮ ರೂಪುರೇಷೆ ನೀಡಲಾಗುವುದು.

ಆಸಕ್ತರು ಈ ಕಟ್ಟಡದ ವಿಷನ್ ಗ್ರೂಪ್ ಗೆ ಸೇರ್ಪಡೆಯಾಗಲು ಮನವಿ.