27th July 2024
Share

TUMAKURU:SHAKTHIPEETA FOUNDATION

  ಲೋಕಸಭಾ ಸದಸ್ಯರಿಗೆ ಅವರ ಅಧ್ಯಕ್ಷತೆಯಲ್ಲಿ ಯಾವುದೇ ಸಮಿತಿಗಳು ಇರಲಿಲ್ಲ. ಕೇವಲ ಸದಸ್ಯರಾಗಿ ಸಭೆಗೆ ಭಾಗವಹಿಸಬೇಕಿತ್ತು. 1999 ರಲ್ಲಿ ತುಮಕೂರು ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ರವರ ಮೂಲಕ ನಾನೇ ಕೇಂದ್ರ ಸರ್ಕಾರಕ್ಕೆ ಸಂಸದರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಪತ್ರ ಬರೆಸಿದ್ದು ಇತಿಹಾಸ.

 ಕಾಕತಾಳೀಯ ಆಗಿನ ಪ್ರಧಾನಿಯವರಾದ ದಿ.ಅಟಲ್ ಬಿಹಾರಿ ವಾಜಪೇಯಿರವರು ಕೇಂದ್ರ ಸರ್ಕಾರದ ಅನುದಾನಗಳ ಪರಾಮರ್ಷೆಗೆ ವಿಜಿಲೆನ್ಸ್  ಅಂಡ್ ಮಾನಿಟರಿಂಗ್ ಸಮಿತಿ ರಚಿಸಿದರು. ಆಗ ಬಸವರಾಜ್ ರವರ ಕೇಂದ್ರ ಸರ್ಕಾರದ ಪತ್ರಗಳನ್ನು ನಿವೃತ್ತ ತಹಶೀಲ್ಧಾರ್ ದಿ.ಅಜೀಬ್ ಒಬ್ಬರು ನೋಡಿ ಕೊಳ್ಳುತ್ತಿದ್ದರು. (ಅವರ ಪೂರ್ಣ ಹೆಸರು ಮರೆತಿದ್ದೇನೆ).

 ಅವರು ಪತ್ರ ಬರೆಯುವಾಗ  ರಮೇಶ್ ರವರೇ ಇವೆಲ್ಲಾ ನಿಮಗೆ ಹೇಗೆ ಗೋಚರವಾಗುತ್ತವೆ ಎಂದಿದ್ದರು. ನಾನು ಅವರಿಗೆ ಕೇಳಿದೆ ನೀವೂ ತಹಶೀಲ್ಧಾರ್ ಆಗಿದ್ದವರು ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದಾಗ ಅವರು ಹೇಳಿದ್ದು ಐಡಿಯಾ ಸರಿಯಾಗಿದೆ. ಆದರೇ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತು ಬಸವರಾಜ್ ರವರು ಕಾಂಗ್ರೆಸ್ ಸಂಸದರು ಅಲ್ಲವೇ ಎಂದರು.

ನಾನು ಅವರಿಗೆ ಮರುಪ್ರಶ್ನೆ ಹಾಕಿದೆ ವಾಜಪೇಯಿರವರು ಪಕ್ಷ ರಾಜಕಾರಣ ಮಾಡುತ್ತಾರೆಯೇ? ಅವರೊಬ್ಬ ಸ್ಟೇಟ್ಸ್ ಮನ್ ಎಂಬುದು ನಿಮಗೆ ಗೊತ್ತಿಲ್ಲವೇ ಸಾರ್ ಎಂದಾಗ ಅವರು ಸಹ ಈ ಮಾತಿಗೆ ಸಹಮತ ವ್ಯಕ್ತಪಡಿಸಿದ್ದರು. ಸಮಿತಿ ಆದೇಶ ಬಂದಾಗ ನನಗಿಂತ ಅವರಿಗೆ ಖುಷಿಯಾಗಿತ್ತು. ಸಂಸದರು ಆ ಸಮಿತಿಗೆ ನನ್ನನ್ನು ಸದಸ್ಯನಾಗಿ ನೇಮಕ ಮಾಡಿದ್ದು ಇತಿಹಾಸ.

ಕೇಂದ್ರದಲ್ಲಿ ಪ್ರಧಾನಿ ಶ್ರೀ ನರೇಂದ್ರಮೋದಿಯವರ ನೇತೃತ್ವದ ಸರ್ಕಾರ ಬಂದಾಗ ಈ ಸಮಿತಿ ಬದಲಾಯಿಸಿ, ದಿಶಾ ಸಮಿತಿ ರಚಿಸಿದ್ದಾರೆ. ಜಿಲ್ಲಾ ಮಟ್ಟದ ದಿಶಾ ಸಮಿತಿ ಇರಲಿ ತೊಂದರೆ ಇಲ್ಲ. ಆದರೇ ಲೋಕಸಭಾ ಸದಸ್ಯರ ವ್ಯಾಪ್ತಿಗೆ ಆಯಾ ಲೋಕಸಭಾ ಸದಸ್ಯರೇ ಅಧ್ಯಕ್ಷತೆ ವಹಿಸುವಂತೆ ತಿದ್ದುಪಡಿ ಆಗಲೇ ಬೇಕು.

ತುಮಕೂರು ಜಿಲ್ಲೆಯಲ್ಲಿ ಅಘೋಶಿತವಾಗಿ ಈ ಕಾರ್ಯ ನಡೆಯುತ್ತಿದೆ, ಶಿರಾ ಮತ್ತು ಪಾವಗಡ ವಿಧಾನ ಸಭಾ ಕ್ಷೇತ್ರದಲ್ಲಿ ಇದೂವರೆಗೂ ಶ್ರೀ ಎ.ನಾರಾಯಣ ಸ್ವಾಮಿರವರು ಸಭೆ ನಡೆಸುತ್ತಿದ್ದರು ಹಾಗೆಯೇ ಕುಣಿಗಲ್ ನಲ್ಲಿ ಶ್ರೀ ಡಿ.ಕೆ.ಸುರೇಶ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸುತ್ತಿದ್ದರು. ಬಸವರಾಜ್ ರವರು ಎಂದು ಆಕ್ಷೇಪಣೆ ಮಾಡಿರಲಿಲ್ಲ ಇದು ಸರಿ ಎನ್ನುತ್ತಿದ್ದರು.

ಆದರೇ ಮೈಸೂರು ಜಿಲ್ಲೆಯಲ್ಲಿ ದಿಶಾ ಸಮಿತಿ ಅಧ್ಯಕ್ಷರಾಗಿದ್ದ ಶ್ರೀ ಪ್ರತಾಪಸಿಂಹರವರಿಗೂ, ಮಂಡ್ಯಲೋಕಸಬಾ ಸದಸ್ಯರಾದ ಶ್ರೀ ಮತಿ ಸುಮಲಥರವರಿಗೂ ವಿವಾದ ಆಗಿತ್ತಂತೆ. ನನ್ನ ಜಿಲ್ಲೆ ಅವರು ಹೇಗೆ ಸಭೆ ಮಾಡುತ್ತಾರೆ ಎಂದು ಸಿಂಹರವರು, ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಅವರು ಹೇಗೆ ತಡೆಯುತ್ತಾರೆ ಮಾಡಿಯೇ ತೀರುತ್ತೇನೆ ಎಂದು ಸುಮಲಥರವರು  ಸಭೆ ಮಾಡಿದ್ದರು.

 ಬೆಂಗಳೂರಿನಲ್ಲಿ 3 ಜನ ಲೋಕಸಭಾ ¸ದಸ್ಯರು ಇದ್ದು ಅಲ್ಲಿಯೂ ಇದೇ ಸಮಸ್ಯೆ ಆಗಿದೆ. ಈ ರೀತಿ ಹಲವಾರು ಕಡೆ ಸಮಸ್ಯೆ ಆಗಿದೆ. ಬೆಂಗಳೂರಿನ ಸಂಸದರಾದ ಶ್ರೀ ತೇಜಸ್ವಿಸೂರ್ಯ ರವರ ಆಪ್ರರೊಬ್ಬರನ್ನು ನಾನು ಈ ಹಿಂದೆ ಕೇಳಿದಾಗ ಅವರು ಹೇಳಿದ್ದು ಸಾರ್ ಶ್ರೀ ಸದಾನಂದಗೌಡರವರು ದಿಶಾ ಸಮಿತಿ ಅಧ್ಯಕ್ಷರು, ಇವರು ಉಪಾಧ್ಯಕ್ಷರು ಹೇಗೆ ಸಭೆ ಕರೆಯುತ್ತಾರೆ ನೀವೇ ಹೇಳಿ ಎಂದಿದ್ದರು. ನಾನು ಅಂದೇ ಅವರಿಗೆ ಹೇಳಿದ್ದೆ ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಬಹುದಲ್ಲಾ ಎಂದು. ಆದರೇ ಬೆಂಕಿಗೆ ಗಂಟೆ ಕಟ್ಟುವರು ಬೇಕಲ್ಲ.

ನೋಡಿ ಇಡೀ ಕರ್ನಾಟಕ ರಾಜ್ಯದಲ್ಲಿಯೇ ಈ ಲೋಕಸಭಾ ಸದಸ್ಯರ ಅವಧಿಯಲ್ಲಿ ಹೆಚ್ಚಿಗೆ ಸಭೆ ನಡೆಸಿರುವುದು ಶ್ರೀ ಜಿ.ಎಸ್.ಬಸವರಾಜ್ ರವರು ಒಬ್ಬರೇ, ಅಷ್ಟೇ ಅಲ್ಲ ಇಲ್ಲಿ ಚರ್ಚೆಯಾಗುವ ವಿಷಯಗಳು ಬೇರೆ ಯಾವುದೇ ಜಿಲ್ಲೆಯ ಸಭೆಗಳಲ್ಲೂ ಚರ್ಚೆ ಆಗಿಲ್ಲ. ಅನುಷ್ಠಾನ ಮಾಡಲು ಶ್ರಮಿಸುವುದು ಸದಸ್ಯ ಕಾರ್ಯದರ್ಶಿಯವರ ಕೆಲಸ.

ಈ ವಯಸ್ಸಿನಲ್ಲಿ ಈಗ ಇಷ್ಟು ಆಕ್ಟೀವ್ ಆಗಿ ಕೆಲಸ ಮಾಡುವ ಸಂಸದರು ಅವರ ಕೇತ್ರದ ವಿಚಾರಗಳಲ್ಲಿ ಸಭೆ ನಡೆಸಲು ಅರ್ಹರೇ ಅಲ್ಲವೇ ಎಂಬ ಬಗ್ಗೆ ಚರ್ಚೆ ಆಗಲೇಬೇಕು.ಇದು ಇವರೊಬ್ಬರ ಪ್ರಶ್ನೆಯಲ್ಲಿ ಇಡೀ ದೇಶದ ನೂರಾರು ಲೋಕಸಭಾ ಸದಸ್ಯರ ಪ್ರಶ್ನೆ.  ಕೇಂದ್ರ ಸರ್ಕಾರದಿಂದ ಈ ಬಗ್ಗೆ ಮಾಹಿತಿ ಪಡೆಯುವುದು ಅಗತ್ಯವಾಗಿದೆ.

ವಿಚಾರವಾಗಿ ಶ್ರೀ ಜಿ.ಎಸ್.ಬಸವರಾಜ್ ರವರ ಬಳಿ ಚರ್ಚೆ ನಡೆಸಿದಾಗ ನಾನು ಬಗ್ಗೆ ತ್ರ ಬರೆಯುವುದಿಲ್ಲಾ, ಹೆಣ ಹೊರಲು ಹಿಂದಾದರೇನು, ಮುಂದಾದರೇನು ಎಂಬ ಡೈಲಾಗ್ ಹೊಡೆದಿದ್ದಾರೆ. ಆದರೇ ವಿಧಾನಸಭಾ ಕ್ಷೇತ್ರವಾರು ಸಭೆ ಮಾಡೋಣ ಎಂದಿದ್ದಾರೆ. ಬಗ್ಗೆ ಕೇಂದ್ರ ಸರ್ಕಾರದ ಸ್ಪಷ್ಟನೆ ಬೇಕು ಎಂಬುದು ನನ್ನ ವಾದ.

 ಈ ಬಗ್ಗೆ ಇಂದಿನ (05.02.2022) ತುಮಕೂರು ಜಿಲ್ಲಾ ದಿಶಾ ಸಭೆಯಲ್ಲಿ ಕೇಂದ್ರ ಸಚಿವರಾದ ಶ್ರೀ ಎ.ನಾರಾಯಣಸ್ವಾಮಿರವರ ಮೂಲಕವೇ ಕೇಂದ್ರ ಸರ್ಕಾರಕ್ಕೆ  ನಿರ್ಧಾರ ಕಳುಹಿಸಲು ಪ್ರಯತ್ನಿಸುತ್ತೇನೆ. ತುಮಕೂರು ಲೋಕಸಭಾ ಕ್ಷೇತ್ರದ ವಿಚಾರ ದೇಶದ ನೂರಾರು ಸಂಸದರ ಧ್ವನಿಯಾಗುವುದೇ ಕಾದು ನೋಡೋಣ?