21st November 2024
Share

TUMAKURU:SHAKTHIPEETA FOUNDATION

ನಾನು ಕಳೆದ 25 ವರ್ಷಗಳಿಂದ ನೀರಾವರಿ ಬಗ್ಗೆ ವಿಶೇಷ ಗಮನ ಹರಿಸಿದ್ದೇನೆ, ಕಡತಗಳ ಅನುಸರಣೆ ಮಾಡುವುದು ನಮ್ಮ ಸಂಸ್ಥೆಯ ಖ್ಯಾತಿ. ಪ್ರಸ್ತುತ ರಾಜ್ಯ ಸರ್ಕಾರದ ಹೆಸರು ಹೇಳಲು ಇಚ್ಚಿಸದ ಒಬ್ಬ ಹಿರಿಯ ಅಧಿಕಾರಿಯೊಬ್ಬರೂ ನನಗೆ ಸಲಹೆ ನೀಡಿದ್ದರು.

ನೀವೂ ರಾಜ್ಯ ಸರ್ಕಾರದ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಜೊತೆ ಸೇರಿ ಏಕೆ ಕೆಲವು ವಿಷಯಗಳ ಬಗ್ಗೆ ಮೌಲ್ಯಮಾಪನ ವರದಿ ಸಿದ್ಧಪಡಿಸಬಾರದು ಎಂಬ ಪ್ರಶ್ನೆ ಹಾಕಿದರು. ನನಗೆ ಈ ಪ್ರಾಧಿಕಾರದ ಬಗ್ಗೆ ಏನೂ ತಿಳಿಯದ ನಾನು ಅಂದು  ಪ್ರತಿಕ್ರಿಯೇ ನೀಡಲಿಲ್ಲ. ನಂತರ ಕೆಇಎ ಜಾತಕ ಜಾಲಾಡಿದ ನಂತರ ನನಗೆ ಆಸಕ್ತಿ ಬರಲಿಲ್ಲ.

‘ನನ್ನ ಅಭಿವೃದ್ಧಿ ಚಳುವಳಿ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ. ಇಲ್ಲಿ ಒಂದು ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಯ ಮೌಲ್ಯಮಾಪನ. ಮತ್ತೊಂದು ಸುಳ್ಳಿನ ವರದಿ, ಇನ್ನೂ ತಿನ್ನುವವರಿಗೆ ಒಂದು ಪಾಲು. ನಾನು ಈ ಬಗ್ಗೆ ಮಾತನಾಡಲಿಲ್ಲ. ಈ ವಿಚಾರಗಳು ಅಗತ್ಯವಿದೆ.’

ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಮೌಲ್ಯಮಾಪನ ಮಾಡಲು ತಿಳಿಸಿದಾಗ, ನನಗೆ  ಉಚಿತವಾಗಿ ಮಾಡಲು ಅನುಮತಿ ನೀಡಿದ್ದಾರೆ. ನಾನು ಮೊದಲು 9 ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ.

  1. ಇದರಲ್ಲಿ ಮೊದಲನೇ ವಿಷಯವೇ ಜಲಗ್ರಂಥ.
  2. ಎಫ್.ಡಿ.ಐ.
  3. ಪಿಪಿಪಿ ಯೋಜನೆ.
  4. ಕೇಂದ್ರ ಸರ್ಕಾರದ ಅನುದಾನ.
  5. ಬೃಹತ್ ಬೆಂಗಳೂರು ಸೇರಿದಂತೆ ಮಹಾನಗರಪಾಲಿಕೆಗಳ ಘನತ್ಯಾಜ್ಯ ವಸ್ತು ನಿರ್ವಹಣೆ.
  6. ಬಯೋಡೈವರ್ಸಿಟಿ.
  7. ಆಯುಷ್.
  8. ಮುಜರಾಯಿ.
  9. ಗಣಿ ಅನುದಾನ.

ಪೈಲಟ್ ಮೌಲ್ಯ ಮಾಪನ ವರದಿ ಜಲಗ್ರಂಥವಾಗಲಿದೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ದಿನಾಂಕ:27.08.2021 ಮತ್ತು ದಿನಾಂಕ:14.01.2022 ರಂದು ಜಲಸಂಪನ್ಮೂಲ ಸಚಿವರಿಗೆ ಮತ್ತು ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರ ಮತ್ತು ನಾನು ಈಗಾಗಲೇ ಬರೆದಿರುವ ನೀರಾವರಿ  ಪುಸ್ತಕಗಳಲ್ಲಿನ ಯೋಜನೆಗಳ ಬಗ್ಗೆ ಇಲಾಖೆಗಳಲ್ಲಿ ಮಾಹಿತಿ ಸಂಗ್ರಹವೇ ಒಂದು ಜಲಗ್ರಂಥವಾಗಲಿದೆ. ಇದರಲ್ಲಿ ಇಲ್ಲದ ವಿಷಯದ ಮಾಹಿತಿ ಸಿಕ್ಕರೆ ನನಗೆ ಹೆಚ್ಚು ಖುಷಿಯಾಗಲಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳಿಂದಲೂ ಅಧಿಕೃತ ಮಾಹಿತಿ ಪಡೆಯುವುದಾಗಿದೆ. ಏಕೆಂದರೆ ಈ ಜಲಗ್ರಂಥ ‘ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ, ರಾಜ್ಯದ ಜಲಸಂಪನ್ಮೂಲ ಇಲಾಖೆ, ಕೇಂದ್ರ ಸರ್ಕಾರದ ಜಲಶಕ್ತಿ ಇಲಾಖೆ ಮತ್ತು ಶಕ್ತಿಪೀಠ ಫೌಂಡೇಷನ್’ ಸಹಭಾಗಿತ್ವದಲ್ಲಿ ಹೊರಬರಲಿದೆ.

ಈ ಬಗ್ಗೆ ರಾಜ್ಯದ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮುಖ್ಯ ಇಂಜಿನಿಯರ್,  ಎಸ್.ಇ ಮತ್ತು ಇ.ಇ ರವರೊಂದಿಗೆ ಸಮಾಲೋಚನೆ ನಡೆಸಲಾಯಿತು. ಈ ಹುದ್ದೆಗಳು ಈಗ ಜಲಗ್ರಂಥದ ಪ್ರಥಮ ಮೆಟ್ಟಿಲು.

‘ನೀರಿನ ಮಾತೃ ಸಂಸ್ಥೆ ಇದಾಗಿದೆ. ಇದನ್ನು ಎಷ್ಟು ಬೇಕೋ ಅಷ್ಟು ಸಾಯಿಸಿದ್ದಾರೆ. ಪುನಶ್ಚೇತನ ನೀಡಲು ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಶ್ರೀ ಬಸವರಾಜ್ ಬೊಮ್ಮಾಯಿರವರು ಕಡತ ಆರಂಭಿಸಿದ್ದರು. ಈಗ ಅವರಿಗೇ ಅಧಿಕಾರವಿದೆ ಕಾದು ನೋಡೋಣ ಏನು ಮಾಡುತ್ತಾರೆ.’

ಈಗ ಪ್ರಭಾರ ಮುಖ್ಯ ಇಂಜಿನಿಯರ್ ಆಗಿ ಶ್ರೀ ಲಕ್ಷಣ ರಾವ್ ಪೇಶ್ವೆರವರು ಇದ್ದಾರೆ.ಅವರು ಎಸ್.ಇ. ಶ್ರೀಮತಿ ಸುಜಾತ ಜಾದವ್ ರವರು ಮತ್ತು ಇ.ಇ.ಶ್ರೀಮತಿ ಪದ್ಮರವರಿಗೆ ಪ್ರತಿಯೊಂದು ಅಂಶದ ಬಗ್ಗೆ ಸಂಬಂದಿಸಿದ ಎಲ್ಲಾ ಇಲಾಖೆಗಳಿಗೂ ಪತ್ರ ಬರೆಯಲು ಸೂಚಿಸಿದ್ದಾರೆ.

ಸುಮಾರು 113 ವಿಷಯಗಳ ಬಗ್ಗೆಯೂ  ಚಿಂತನೆ ನಡೆಸಿ ಮಾಹಿತಿ ಸಂಗ್ರಹಿಸುವ ಕೆಲಸ ಆರಂಭವಾಗಿದೆ.

ಅರ್ಜಿ ನೀಡಿದ ದಿನದಿಂದ ಯಾವ ಅಧಿಕಾರಿ ಮತ್ತು ನೌಕರರ ಬಳಿ ಎಷ್ಟು ದಿವಸ ಅರ್ಜಿ ಇತ್ತು ಎಂಬ ಬಗ್ಗೆಯೂ ಮೌಲ್ಯಮಾಪನ ವರದಿಯಲ್ಲಿ ಒಂದು ಅಧ್ಯಾಯ ಇರಲಿದೆ ಎಂಬ ಅಂಶವನ್ನು ನಾನು ಆರಂಭದಲ್ಲಿಯೇ ಎಲ್ಲರ ಗಮನಕ್ಕೆ ತರಬಯಸುತ್ತೇನೆ.

ತಾವೂ ನನ್ನ ಜೊತೆ ಕೈಜೋಡಿಸಬಹುದು. ಲಿಖಿತವಾಗಿ ನಿಮ್ಮ ಹೆಸರಿನಲ್ಲಿಯೇ ಬರೆಯಲಾಗುವುದು.