22nd December 2024
Share

G.S.BASAVARAJ, IDD ACS B.H.ANILKUMAR, CNNL MD K.JAIPRAKASH.KNNL MD MALLIKARJUN GUNGE, CE SHANKAREGOWDA. MURULIDHAR NAYAK & KUNDARANAHALLI RAM

TUMAKURU:SHAKTHIPEETA FOUNDATION

ದೆಹಲಿಯಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮನೆಯಲ್ಲಿ ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಬಗ್ಗೆ ಒಂದು ಚಿಂತನಾ ಸಭೆ ನಡೆಯಿತು.

ದೆಹಲಿಗೆ ಬಂದ ಅಧಿಕಾರಿಗಳನ್ನು ಮತ್ತು ದೆಹಲಿಯಲ್ಲಿನ ಅಧಿಕಾರಿಗಳನ್ನು ಬಸವರಾಜ್ ರವರು ಮನೆಗೆ ಊಟಕ್ಕೆ ಕರೆಯುವುದು ಅವರ ಒಂದು ವಾಡಿಕೆ ಎಂದರೆ ತಪ್ಪಾಗಲಾರದು.

ದೆಲಿಯಲ್ಲಿ ಸಂಸದರ ಸಭೆಯನ್ನು ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು  ನಡೆಸಿದ ಸಂದರ್ಭದಲ್ಲಿ, ದೆಹಲಿಗೆ ಆಗಮಿಸಿದ್ದ ನೀರಾವರಿ ಅಧಿಕಾರಿಗಳನ್ನು ಮನೆಗೆ ಆಹ್ವಾನಿಸಿ, ನೀರಾವರಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಕೇಂದ್ರ ಜಲಶಕ್ತಿ ಸಮಿತಿ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಗೆ ಜಲಶಕ್ತಿ ಸಚಿವಾಲಯದ ಯೋಜನೆಗಳ ಬಗ್ಗೆ ವಿಶೇಷ ಆಸಕ್ತಿ. ಕೇಂದ್ರ ಸರ್ಕಾರದಲ್ಲಿನ ಯೋಜನೆಗಳ ಬಗ್ಗೆ ವಿವರವಾದ ದಾಖಲೆ ನೀಡುವುದು ರಾಜ್ಯ ಸರ್ಕಾರದ ಅಧಿಕಾರಿಗಳ ಕರ್ತವ್ಯವೂ ಆಗಿದೆ.

ಕಡತಗಳ ಮಾಹಿತಿ ಇಲ್ಲದೆ ಸಭೆಯಲ್ಲಿ ಮಾತನಾಡಲು ಸಾಧ್ಯಾವಿಲ್ಲ. ಅಧಿಕಾರಿಗಳು ಇನ್ನೂ ಚುರುಕು ಆಗಬೇಕು.ಬೆರಳು ತೋರಿಸಿದರೆ ಹಸ್ತ ನುಂಗವಂತಿರಬೇಕು. ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿಯವರು ಒಂದು ದಿವಸ ಬಸವರಾಜ್ ರವರಿಗೆ ಮಾತನಾಡುತ್ತಾ, ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ನೀಡಲು ನಮ್ಮ ಅಧಿಕಾರಿಗಳಿಗೆ ಏನಾಗಿದೆ.

ನಾನು ಸಂದರ್ಭ ಬಂದಾಗ ಸಂಬಂಧಿಸಿದ ಸಚಿವರೊಂದಿಗೆ ಚರ್ಚೆ ಮಾಡಲು ಅನೂಕೂಲÀವಾಗುವುದಿಲ್ಲವೇ ಎಂದು ಹೇಳಿದ್ದು ಉಂಟು. ಇದು ಕೆಲವರಿಗೆ ಸಿಟ್ಟು ತರಿಸಬಹುದು. ಕೇಂದ್ರ ಸಚಿವರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಆಗಿಲ್ಲ ಎಂದರೆ ತಪ್ಪು ಯಾರದು.