22nd November 2024
Share

ERANNA KADADI. PAVAGADA SHIVAPRASAD, PAVAGADA SRIRAM & KUNDARANAHALLI RAMESH

TUMAKURU:SHAKTHIPEETA FOUNDATION

ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಮತ್ತು ರಾಜ್ಯದಲ್ಲೂ ಬಿಜೆಪಿ ಸರ್ಕಾರ, ಡಬ್ಬಲ್ ಎಂಜಿನ್ ಸರ್ಕಾರದಲ್ಲಿ ಕೇಂದ್ರ ಸರ್ಕಾರದಿಂದ  ಅನುದಾನ ಪಡೆದಿರುವ ಮಾಹಿತಿ ಯಾರ ಬಳಿ ಇದೆ ಎಂಬ ಸ್ವಾರಸ್ಯಕರವಾದ  ಚರ್ಚೆ ದಿನಾಂಕ:18.02.2022 ನೇ ಶುಕ್ರವಾರ ಮಧ್ಯಾಹ್ನ 4.45 ಗಂಟೆಗೆ ಬೆಂಗಳೂರಿನ ವಿಕಾಸ ಸೌಧದ ಮೆಟ್ಟಲಿನಲ್ಲಿ ನಡೆಯಿತು.

ಕರ್ನಾಟಕದಿಂದ ಬಿಜೆಪಿ ಪಕ್ಷದಿಂದ, ರಾಜ್ಯ ಸಭಾ ಸದಸ್ಯರಾಗಿರುವ ಶ್ರೀ ಈರಣ್ಣ ಕಡಾಡಿಯವರು ಮತ್ತು ತುಮಕೂರು ಜಿಲ್ಲೆಯ ಬಿಜೆಪಿ ನಾಯಕರಾದ ಶ್ರೀ ಪಾವಗಡ ಶಿವಪ್ರಸಾದ್ ರವರು, ಹೋರಾಟಗಾರ ಶ್ರೀ ಪಾವಗಡ ಶ್ರೀರಾಮ್‍ರವರು ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ ಕುಂದರನಹಳ್ಳಿ ರಮೇಶ್ ಈ ಚರ್ಚೆಯಲ್ಲಿ ಆಕಸ್ಮಿಕವಾಗಿ ಸೇರ್ಪಡೆ.

ಶಿವಪ್ರಸಾದ್ ರವರು ರಾಜ್ಯಸಭಾ ಸದಸ್ಯರಿಗೆ ಇವರು ರಾಜ್ಯಮಟ್ಟದ ದಿಶಾ ಸಮಿತಿ ಸದಸ್ಯರು ಎಂದು ಪರಿಚಯ ಮಾಡಿದಾಗ ಕೇಂದ್ರ ಸರ್ಕಾರದ ಅನುದಾನಗಳ ಬಗ್ಗೆ ಚರ್ಚೆ ನಡೆಯಿತು. ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆದ ರಾಜ್ಯ ಕರ್ನಾಟಕ ರಾಜ್ಯವಾಗಬೇಕು ಎಂಬ ಕನಸು ನಮ್ಮ ಸಂಸ್ಥೆಯದ್ದಾಗಿದೆ.

ತಾವೂ ರಾಜ್ಯಸಭಾ ಸದಸ್ಯರಾಗಿದ್ದೀರಿ, ಹೋರಾಟಗಾರರಾಗಿದ್ದೀರಿ, ಚಿಂತಕರೂ ಆಗಿದ್ದೀರಿ, ತಮ್ಮ ನೆಚ್ಚಿನ ನಾಯಕರಾದ ಶ್ರೀ ನರೇಂದ್ರಮೋದಿಯವರು ಜಾರಿಗೊಳಿಸಿರುವ ಮಾನ್ಯಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿರುವ ರಾಜ್ಯಮಟ್ಟದ ದಿಶಾ ಸಮಿತಿ ಮತ್ತು ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಮಟ್ಟದ ದಿಶಾ ಸಮಿತಿಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ ಮಾತ್ರ, ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಬಹುದು.

2016 ರಲ್ಲಿ ರಾಜ್ಯಮಟ್ಟದ ದಿಶಾ ಸಮಿತಿ ರಚಿಸಲು ಕೇಂದ್ರ ಸರ್ಕಾರ ಆದೇಶ ನೀಡಿದ್ದರೂ, ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಮತ್ತು ಶ್ರೀ ಹೆಚ್.ಡಿ.ಕುಮಾರಸ್ವಾಮಿರವರು ಸಮಿತಿ ರಚಿಸಲೇ ಇಲ್ಲ. ಶ್ರೀ ಬಿ.ಎಸ್.ಯಡಿಯೂರಪ್ಪನವರು ರಾಜ್ಯಮಟ್ಟದ ದಿಶಾ ಸಮಿತಿ ರಚಿಸಿ, ಮೂರು ಭಾರಿ ದಿಶಾ ಸಮಿತಿ ಸಭೆ ಕರೆದರೂ ವಿವಿಧ ಕಾರಣಗಳಿಂದ ಮುಂದೂಡಲಾಯಿತು.

 ಈಗಿನ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರಿಗೆ, ಮುಖ್ಯ ಮಂತ್ರಿಯವರಾದ ಆರಂಭದಲ್ಲಿಯೇ, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ ಯಾಗಿರುವ ಯೋಜನಾ ಇಲಾಖೆಯ ಅಪರಮುಖ್ಯಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್ ರವರು ದಿಶಾ ಸಮಿತಿ ಸಭೆಗೆ ಸಮಯ ಕೋರಿ ಪತ್ರ ಬರೆದಿದ್ದಾರೆ.

 ಮುಖ್ಯಮಂತ್ರಿಯವರ ಕಚೇರಿಯಲ್ಲಿ ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿರವರಾದ ಶ್ರೀ ಜಿ.ಜಗದೀಶ್ ರವರಿಗೆ ಯೋಜನಾ ಇಲಾಖೆ ಬರುತ್ತದೆ.  ಅವರು ಸಭೆ ದಿನಾಂಕ ನಿಗದಿಗೊಳಿಸಲು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಜಂಟಿ ಕಾರ್ಯದರ್ಶಿ ಶ್ರೀ ಬಿ.ಪಿ.ಚನ್ನಬಸವೇಶರವರಿಗೆ ಕಡತ ಕಳುಹಿಸಿದ್ದಾರಂತೆ ಎಂಬ ಮಾಹಿತಿಯನ್ನು ರಾಜ್ಯಸಭಾ ಸದಸ್ಯರಿಗೆ ತಿಳಿಸಲಾಯಿತು.

‘ಶ್ರೀ ಈರಣ್ಣಕಡಾಡಿಯವರು ಪ್ರತಿಕ್ರಿಯೇ ನೀಡಿ, ಇನ್ನೂ ವಿಚಾರ ಬಿಡಿ ನಾನು ರಾಜ್ಯಮಟ್ಟದ ದಿಶಾ ಸಮಿತಿ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ ಟಾನಿಕ್ ನೀಡುವ ಕೆಲಸ ಮಾಡುತ್ತೇನೆ. ಭಾರತ ದೇಶದಲ್ಲಿಯೇ ನಮ್ಮ ರಾಜ್ಯದ ದಿಶಾ ಸಮಿತಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ನಾನೂ ಕೈಜೋಡಿಸುತ್ತೇನೆ. ಇದು ನನ್ನ ಪ್ರತಿಜ್ಞೆ ಎಂಬ ಧಾಟಿಯಲ್ಲಿ ಭರವಸೆ ನೀಡಿದ್ದಾರೆ’.

ಸಾಕ್ಷಿಯಾಗಿ ಪಾವಗಡದ ದಿಗ್ಗಜರಾದ ಶ್ರೀ ಶಿವಪ್ರಸಾದ್ ರವರು ಮತ್ತು ಶ್ರೀರಾಮ್ ರವರು ಇದ್ದರು. ಅವರಿಬ್ಬರೂ ತುಮಕೂರು ಜಿಲ್ಲೆಯ ದಿಶಾ ಸಮಿತಿ ಕಾರ್ಯವೈಖರಿ ಮತ್ತು ಕೇಂದ್ರ ಸರ್ಕಾರದ ಅನುದಾನಗಳ ಲಾಭಿ ಬಗ್ಗೆ ರಾಜ್ಯಸಭಾ ಸದಸ್ಯರಿಗೆ ಮಾಹಿತಿ ನೀಡಿದರು.

ಶಿವಪ್ರಸಾದ್ ರವರೇ ನಾನು ಕೇಂದ್ರ ಸರ್ಕಾರದ ಅನುದಾನದ ಬಗ್ಗೆ ಮಾತನಾಡುವಾಗ, ನೀವೂ ಇವರ ಬಗ್ಗೆ ಬಹಳ ದಿವಸ ನನ್ನೊಂದಿಗೆ ಚರ್ಚೆ ಮಾಡಿದ್ದೀರಿ ಎಂದಾಗ ಹೌದು ಸಾರ್, ಇವರೇ ಅವರು ಎಂದು ಹೇಳಿದರು.

‘ಕಡಾಡಿಯವರು ರಾಜ್ಯಮಟ್ಟದ ದಿಶಾ ಸಮಿತಿಗೆ ಟಾನಿಕ್ ನೀಡುವರೇ? ಕಾದು ನೋಡೋಣ’.