24th April 2024
Share

 ನಿಮ್ಮ ಯೋಜನೆ ಯಾರಿಗಾಗಿ ಉನ್ನತ ಅಧಿಕಾರಿಗಳ ಪ್ರಶ್ನೆ.

 TUMAKURU:SHAKTHIPEETA FOUNDATION

  ದೆಹಲಿಯಲ್ಲಿ ಹಿರಿಯ ಉನ್ನತ ಅಧಿಕಾರಿಗಳ ಬಳಿ ನನ್ನ ಕನಸಿನ ಯೋಜನೆ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು. ಅವರು ನನಗೆ ಕೇಳಿದ ಮೊದಲ ಪ್ರಶ್ನೆ ನಿಮ್ಮ ಯೋಜನೆ ಯಾರಿಗಾಗಿ, ನೀವೂ ಸರ್ಕಾರದ ಪರವಾಗಿ ಕಾರ್ಯನಿರ್ವಹಿಸಲು ಯೋಚಿಸುತ್ತಿದ್ದೀರಿ, ಅಂದರೆ ‘ಸರ್ಕಾರದ ಬೋನಿನನಲ್ಲಿ ಬೀಳುತ್ತಿದ್ದೀರಿ ಅದು ನಿಮ್ಮ ಕರ್ಮ.

 ಆದರೇ ಮೊದಲು ಈ ಯೋಜನೆಗೆ ಸರ್ಕಾರದ ಸಹಮತ ಇದೆಯಾ ಎಂಬ ಬಗ್ಗೆ ಖಾತರಿ ಮಾಡಿಕೊಳ್ಳಿ ನಂತರ ತಮ್ಮ ನಿರ್ಧಾರ ಕೈಗೊಳ್ಳಿ. ಆದಷ್ಟೂ ಸರ್ಕಾರದ ಬೋನಿಗೆ ಬೀಳದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದು ಒಳ್ಳೆಯ ನಿರ್ಧಾರ ಎಂಬ ಸಲಹೆ ನೀಡಿದ್ದಾರೆ.

  ಕಳೆದ 2017 ರಿಂದಲೂ ನಾನು ಈ ಬಗ್ಗೆ ಸರ್ಕಾರದ ಜೊತೆ ಸಮಾಲೋಚನೆ ನಡೆಸುತ್ತಾ ಬಂದಿದ್ದರೂ, ಒಂದು ದೃಢ ನಿರ್ಧಾರಕ್ಕೆ ಬರಲು ಸುಮಾರು 5 ವರ್ಷಗಳಾಗಿದೆ. ದಿನಾಂಕ:31.03.2022 ರೊಳಗೆ ಅಂತಿಮ ನಿರ್ಧಾರ ಕೈಗೊಳ್ಳಲು ಯೋಚಿಸಲಾಗಿದೆ.

  ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಅತಿ ಹೆಚ್ಚು ಅನುದಾನ ಪಡೆದ ರಾಜ್ಯವಾಗಲು ಮತ್ತು ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಕ್ಕಾಗಿ ಶ್ರಮಿಸುವುದೇ ನಮ್ಮ ಸಂಸ್ಥೆಯ ಪ್ರಮುಖ ಉದ್ದೇಶ.

  ದಿನಾಂಕ:22.02.2022 ರಂದು ಜಮ್ಮು ಮತ್ತು ಕಾಶ್ಮೀರದ ವೈಷ್ಣವೋದೇವಿಗೆ ನನ್ನ ಮಗ ಪೂಜೆ ಸಲ್ಲಿಸಿದರೆ, ಅಂದೇ ನಾನು ಈ ಕೆಳಕಂಡ ಎಲ್ಲಾ ಇಲಾಖೆಗಳಿಗೂ ಪರಿಕಲ್ಪನಾ ವರದಿ’ಯನ್ನು ನೀಡಲಾಗಿದೆ. ಸರ್ಕಾರದ ಸೂಕ್ತ ಅಭಿಪ್ರಾಯದ ನಂತರ ನಮ್ಮ ಉದ್ದೇಶಿತ ಶಕ್ತಿಪೀಠ ಕ್ಯಾಂಪಸ್ ರೂಪುರೇಷೆಯನ್ನು ನಿರ್ಧರಿಸ ಬೇಕಾಗಿದೆ.

 ನಮ್ಮ ಶಕ್ತಿಪೀಠ ಫೌಂಡೇಷನ್ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಹಕರಿಸಿದರೆ ಸರ್ಕಾರದ ಪರವಾಗಿ, ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ದಿಶಾ ಮಾರ್ಗದರ್ಶಿ ಸೂತ್ರದ ಪ್ರಕಾರ, ಸರ್ಕಾರಗಳು ಹೇಳಿದ ಹಾಗೆ ಕಾರ್ಯನಿರ್ವಹಿಸಬೇಕಿದೆ.

 ಒಂದು ವೇಳೆ ಸರ್ಕಾರಗಳು ಸಹಕರಿಸದೆ ಇದ್ದಲ್ಲಿ ಮಾಜಿ ಪ್ರಧಾನಿಯವರಾದ ಶ್ರೀ ಮನೋಮೋಹನ್ ಸಿಂಗ್ ರವರ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿ ಪಡೆದು ಚುನಾಯಿತ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಜಾಗೃತಿ ಆಂದೋಲನ ಮಾಡುವ ಮೂಲಕ ಗುರಿ ತಲಪಲು ಶ್ರಮಿಸಬೇಕಿದೆ.

ನಮ್ಮ ಸಂಸ್ಥೆಯ ಗುರಿ ರಿಯಲ್ ಟೈಮ್ ಅಧ್ಯಯನ ವಾಗಿದೆ, ಅಂದರೆ ‘ಸಂಶೋಧನೆ ಜೊತೆ,ಜೊತೆಗೆ ಸರ್ಕಾರಗಳ ಹಂತದಲ್ಲೂ ಕಡತಗಳ ಅನುಸರಣೆ ನಡೆಯುತ್ತಿದೆ. ಈ ಕೆಂಕಂಡ 5 ಮೌಲ್ಯ ಮಾಪನ ವರದಿಗಳಲ್ಲಿ ಎಲ್ಲವೂ ತಿಳಿಯಲಿದೆ. ನನಗಂತೂ ವಿಚಿತ್ರ ಅನುಭವ ಆಗುತ್ತಿದೆ.  

  1. CENTER OF EXCELLENCE-CAPTURING GOI FUNDS’– ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ- ದಿಶಾ ವಿಭಾಗ- ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ.
  2. ನದಿ ಜೋಡಣೆ ಥೀಮ್ ಪಾರ್ಕ್- ಜಲಸಂಪನ್ಮೂಲ ಇಲಾಖೆ- ವಿಜೆಎನ್‍ಎಲ್.
  3. ಶಕ್ತಿಪೀಠ ಥೀಮ್ ಪಾರ್ಕ್-ಮುಜರಾಯಿ ಇಲಾಖೆ
  4. ಪಿಪಿಪಿ ಯೋಜನೆಗಳ ಮೌಲ್ಯಮಾಪನ- ಮೂಲಭೂತ ಸೌಕರ್ಯ ಇಲಾಖೆ.
  5. ಎಫ್.ಡಿ.ಐ ಯೋಜನೆಗಳ ಮೌಲ್ಯಮಾಪನ – ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ-ಕರ್ನಾಟಕ ಉದ್ಯೋಗ ಮಿತ್ರ.

ಆಸಕ್ತರು ಈ ವಿಚಾರಗಳ ಬಗ್ಗೆ ತಮ್ಮ ಅನುಭವ ಹಂಚಿಕೊಳ್ಳಲು ಬಹಿರಂಗ ಮನವಿ ಮಾಡಲಾಗಿದೆ.