22nd December 2024
Share

TUMAKURU:SHAKTHIPEETA FOUNDATION

ತುಮಕೂರು-ಯಶವಂತಪುರ ನಡುವೆ  ಸಧ್ಯ 8 ಕೋಚ್ ಡೆಮು  ಸೇವೆ ಚಾಲನೆ ಯಲ್ಲಿದ್ದು, ಬೆಂಗಳೂರಿಗೆ ಪ್ರತಿ ನಿತ್ಯ ಕೆಲಸಕ್ಕೆ  ಹೋಗುವ ಸಾವಿರಾರು ಪ್ರಯಾಣಿಕರಿಗೆ  ಪ್ರಯಾಣ ಮಾಡಲು  ದಟ್ಟಣೆಯಿಂದಾಗಿ ನಿಂತು ಕೊಂಡು ಹೋಗಬೇಕಾಗಿತ್ತು ಮತ್ತು ಪ್ರಯಾಣ ಮಾಡಲು ತೊಂದರೆ ಆಗಿತ್ತು.

  ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ ಜಿಎಸ್. ಬಸವರಾಜ್ ರವರು, ಲೋಕಸಭಾ ಅಧಿವೇಶನ ಸಂದರ್ಭದಲ್ಲಿ ಮಾನ್ಯ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದರ ಹಿನ್ನಲೆಯಲ್ಲಿ ತುಮಕೂರು ಬೆಂಗಳೂರು ನಡುವಿನ ರೈಲ್ವೆ ಮಾರ್ಗ ವಿಧ್ದುದ್ದೀಕರಣವಾಗಿ  ಮೆಮೂ ರೈಲು[ವಿಧ್ಯುತ್ ರೈಲು] ಓಡಿಸಲು ಸಂಭಂದಿತ ಅಧಿಕಾರಿಯವರು ಪರಿಶೀಲಿಸಿ ಹಸಿರು ನಿಶಾನೆ ತೋರಿಸಿದ್ದಾರೆ.

  ನೈರುತ್ಯವಲಯ ಅಧಿಕಾರಿಯವರಿಗೆ  ತುಮಕೂರು-ಬೆಂಗಳೂರು ನಡುವೆ 16 ಕೋಚ್ ಮೆಮೂ ರೈಲು[ವಿಧ್ಯುತ್ ರೈಲು] ಓಡಿಸಲು ಸೂಕ್ತ  ಸೂಚನೆ ನೀಡಬೇಕೆಂದು ಕೋರಲಾಗಿತ್ತು. ಈ ಬಗ್ಗೆ ನೈರುತ್ಯವಲಯದ ಜೊನಲ್ ಮ್ಯಾನೇಜರ್ ಹುಬ್ಬಳ್ಳಿ ಇವರಿಗೂ ಪತ್ರ ಬರೆದು ಆಗ್ರಹಿಸಲಾಗಿತ್ತು.

 ಹಾಗೆಯೇ ದಿನಾಂಕ 17/2/2022 ರಂದು ಬೆಂಗಳೂರಿನ ನೈರುತ್ಯವಲಯದ ವಿಭಾಗೀಯ ಅಧಿಕಾರಿ ಶ್ರೀಶ್ಯಾಮ್ ಸಿಂಗ್ ಅವರನ್ನೂ ಭೇಟಿ ಮಾಡಿ ತುಮಕೂರು-ಬೆಂಗಳೂರು ನಡುವೆ 16 ಕೋಚ್ ಮೆಮೂ ರೈಲು[ವಿಧ್ಯುತ್ ರೈಲು] ಓಡಿಸಲು ಮತ್ತು ಅರಸೀಕೆರೆ –ತಿಪಟೂರು-ಬಾಣಸಂದ್ರ-ನಿಟ್ಟೂರು-ಗುಬ್ಬಿ-ತುಮಕೂರು-ಬೆಂಗಳೂರು ನಡುವಿನ ಸಧ್ಯ ಓಡುತ್ತಿರುವ 8 ಕೋಚ್ ಬದಲಾಗಿ 18 ಕೋಚ್ ಐಸಿಎ ಕೋಚ್ ರೈಲು ಓಡಿಸಲು ಪ್ರಯಾಣಿಕರ ಅನುಕೂಲಕ್ಕಾಗಿ  ಚಾಲನೆ ನೀಡಲು ಆಗ್ರಹಿಸಲಾಗಿತ್ತು.

 ದಿನಾಂಕ 8/4/2022 ರಿಂದ  ಜಾರಿಗೆ ಬರುವಂತೆ ಆದೇಶ ನೀಡಿರುವುದಕ್ಕೆ ಅಭಿವೃದ್ಧಿ ಚಿಂತಕರಾದ ಶ್ರೀ ಟಿ.ಆರ್.ರಘೋತ್ತಮರಾವ್  ಮಾನ್ಯ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಜಿಎಸ್. ಬಸವರಾಜ್ ರವರಿಗೆ, ವಲಯ ಮಟ್ಟದ ಮತ್ತು ವಿಭಾಗೀಯ ಮಟ್ಟದ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಗೆ ಹೋದಾಗಲೆಲ್ಲಾ ತುಮಕೂರಿನ ಶ್ರೀ ವೆಂಕಟೇಶ್ ರವರು ಎಂಪಿಯವರಿಗೆ ಮತ್ತು ನನಗೆ ಬೆನ್ನು ಹತ್ತಿದ್ದರು, ನಾನು ಶ್ರೀ ಟಿ.ಆರ್.ರಘೋತ್ತಮರಾವ್  ರವರಿಗೆ ರೈಲು ಬಿಡುವವರಿಗೂ ಎಂಪಿಯವರನ್ನು ಬಿಡಬೇಡಿ ಎಂದು ಹಾಸ್ಯ ಮಾಡುತ್ತಿದ್ದೆ. ಅವರು ಸಹ ದೆಹಲಿಗೆ ಬಂದು ಬಿಡಾರ ಹೂಡಿದ್ದರು.