22nd December 2024
Share

TUMAKURU:SHAKTHI PEETA FOUNDATION

ತುಮಕೂರಿನ ಶಕ್ತಿಪೀಠ ಫೌಂಡೇಷನ್ ಶಕ್ತಿಪೀಠ ಡಾಟಾ ಪಾರ್ಕ್/ಸೆಂಟರ್  ಸ್ಥಾಪಿಸಲು ಚಿಂತನೆ ನಡೆಸಿದೆ. ದೇಶದ ಪ್ರತಿಯೊಂದು ಗ್ರಾಮಗಳಲ್ಲಿ ಇರುವ ಜಲಸಂಗ್ರಹಾಗಾರಗಳು ಗಂಗಾಮಾತೆ ದೇವಾಲಯ ಎಂದು ಭಾವಿಸಿ, ಅವುಗಳ ಸ್ವಚ್ಚತೆ ಮತ್ತು ಅಭಿವೃದ್ಧಿಗೆ ಆಯಾ ಗ್ರಾಮದ ಆಸಕ್ತ ಮಹಿಳೆಯರನ್ನು ಹುರಿದುಂಬಿಸುವುದು ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.

ನನ್ನ ಹುಟ್ಟೂರು ಕುಂದರನಹಳ್ಳಿ ಮತ್ತು ಸೋಪನಹಳ್ಳಿ ಗ್ರಾಮದಲ್ಲಿರುವ ಕೆರೆ, ಕಟ್ಟೆ, ಮತ್ತು ಸೋಪನಹಳ್ಳಿ ಕೆರೆಯಿಂದ ಅದಲಗೆರೆ ರಸ್ತೆವರೆಗಿನ ಕರಾಬು ಹಳ್ಳ ಮತ್ತು ಆ ಹಳ್ಳದಲ್ಲಿರುವ ಸುಮಾರು 7 ಪಿಕ್ ಅಫ್‍ಗಳ ಒತ್ತುವರಿ ತೆರವು, ಗಡಿ ಗುರುತಿಸಿ ಮರಗಿಡ ಬೆಳೆಸುವುದು, ಒತ್ತುವರಿ ಸ್ಥಳದಲ್ಲಿ ಮರಗಳು ಇದ್ದರೆ ಹಾಗೇಯೇ ಉಳಿಸುವುದು.

ಊಳು ತೆಗೆಯುವುದು, ಅಭಿವೃದ್ಧಿ ಪಡಿಸುವುದು ಮತ್ತು ಹೇಮಾವತಿ ನದಿ ನೀರಿನಿಂದ ತುಂಬಿಸಿ, ಗ್ರಾಮದ ಅಂvರ್ ಜಲದ ಬಗ್ಗೆ ಅಧ್ಯಯನ ನಡೆಸುವುದು, ಗ್ರಾಮದಲ್ಲಿರುವ ಎಲ್ಲಾ ತೆರೆದ ಭಾವಿಗಳು, ಬೋರೆ ವೆಲ್‍ಗಳ ಅಧ್ಯಯನ ಮಾಡುವುದು.

ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆಯ ಬೆಸ್ಟ್ ಪ್ರಾಕ್ಟೀಸಸ್ ಯೋಜನೆಯಾಗಿ ಮಾರ್ಪಾಡು ಮಾಡುವುದು ನನ್ನ ಕನಸಾಗಿದೆ. ಹೌದು ಹರಿಯುವ ನೀರನ್ನು ತಡೆಯಿರಿತಡೆದ ನೀರನ್ನು ಹಿಂಗಿಸಿರಿ ಘೋಷಣೆಯ ಅಂಗವಾಗಿ, ಈ ಹಳ್ಳದಲ್ಲಿ 7 ಪಿಕ್ ಅಫ್ ನಿರ್ಮಾಣ ಮಾಡಿದ್ದರೂ 2000 ನೇ ಇಸವಿಯಲ್ಲಿ ಮತ್ತು 2021 ನೇ ಇಸವಿಯಲ್ಲಿ ಎಲ್ಲಾ ಪಿಕ್ ಅಫ್ ಗಳು ತುಂಬಿವೆ.

ನಂತರ ಯಾವುದೇ ವರ್ಷ ಎಲ್ಲಾ ಪಿಕ್ ಅಫ್ ಗಳು ತುಂಬಿಲ್ಲ, ಕಾರಣ ಬೋರ್ ವೆಲ್ ಬಕಾಸುರನ ಹಾವಳಿ.ಆದ್ದರಿಂದ ಈ ಹಳ್ಳವನ್ನು ತೊರೆಯಾಗಿ ಮಾರ್ಪಾಡು ಮಾಡುವುದು ನನ್ನ 20 ವರ್ಷಗಳ ಕನಸು.

ಹೆಚ್.ಎ.ಎಲ್ ಗೆ ನೀಡಿದ ಜಮೀನು ಹುಳುಮೆ ಮಾಡುತ್ತಿರುವ ಎಲ್ಲರೂ ಜಮೀನು ಕಿತ್ತುಕೊಂಡರೂ ಎಂದು ಈಗಾಗಲೇ ಸಿಟ್ಟಾಗಿದ್ದಾರೆ, ಈ ಹಳ್ಳ ಮತ್ತು ಕೆರೆ-ಕಟ್ಟೆ ಒತ್ತುವರಿ ತೆರವು ಮಾಡಿದರೆ ಬಹುತೇಕ ಎಲ್ಲರೂ ವಿರೋಧವಾಗಬಹುದು.

ಆದರೂ ಏನೂ ಮಾಡಲು ಸಾಧ್ಯಾವಿಲ್ಲ, ಎಲ್ಲರ ಮನವೋಲಿಸಿ, ಯಾವುದೇ ಜಗಳ ಆಗದ ರೀತಿಯಲ್ಲಿ ಈ ಯೋಜನೆ ಪೂರ್ಣಗೊಳಿಸಬೇಕು ಎಂಬುದು ನನ್ನ ಅನಿಸಿಕೆ.

ಬಯೋಡೈವರ್ಸಿಟಿ ಆಕ್ಟ್ ಅಡಿಯಲ್ಲಿ, ಗ್ರಾಮಪಂಚಾಯಿತಿ ವ್ಯಾಪ್ತಿಯ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ ಉಸ್ತುವಾರಿ ವಹಿಸಬೇಕಿದೆ. ಎಲ್ಲಾ ನಡವಳಿಕೆಗಳನ್ನು ನೇರವಾಗಿ ಸಂಸದರ ಆದರ್ಶ ಗ್ರಾಮ ಯೋಜನೆಯ ಪೋರ್ಟಲ್‍ನಲ್ಲಿ ಅಫ್ ಲೋಡ್ ಮಾಡಲು ಸೂಚಿಸಲಾಗುವುದು.

ಒತ್ತುವರಿ ತೆರವು ಸರ್ಕಾರದ ಕೆಲಸ, ಜಿಲ್ಲಾಧಿಕಾರಿಗಳು, ಎಡಿಡಿಸಿ, ಉಪವಿಭಾಗಾಧಿಕಾರಿಗಳು, ತಹಶೀಲ್ಧಾರ್, ಮಾರಶೆಟ್ಟಿಹಳ್ಳಿ ಪಿಡಿಓ, ಆರ್.ಐ. ಗ್ರಾಮ ಲೆಕ್ಕಿಗರು, ಸರ್ವೆಯರ್ ಎಲ್ಲರಿಗೂ ಈಗಾಗಲೇ ಒತ್ತುವರಿ ತೆರವು ಮಾಡಲು ಮನವಿ ಮಾಡಿದೆ.

ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರ ನಾಯಕತ್ವದಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆ ನಡೆಯಬೇಕಿದೆ. ಪ್ರಧಾನಿ ಮೋದಿಯವರ ಕನಸಿನ ಪ್ರತಿಯೊಂದು ಅಂಶಗಳು ಪಕ್ಕಾ ಆಗುವವರೆಗೂ ಶ್ರಮಿಸಲು ಚಿಂತನೆ ನಡೆಸಲಾಗಿದೆ.

ಕುಂದರನಹಳ್ಳಿ ಮತ್ತು ಸೋಪನಹಳ್ಳಿ ಗ್ರಾಮದ ಜನರ ಒಂದು ತಂಡ ಒತ್ತುವರಿ ತೆರವುದಾರರ ಮನವೋಲಿಸಲು ಸಿದ್ಧವಾಗ ಬೇಕಿದೆ. ನೋಡೋಣ ಎಲ್ಲಿಗೆ ಮುಟ್ಟತ್ತದೆ ನನ್ನ ಕನಸು.

08.05.2022 ರಂದು ಕುಂದರನಹಳ್ಳಿಯಲ್ಲಿ ಆರಂಭವಾಗುವ ಈ ಡಿಜಿಟಲ್ ಆಂದೋಲನ, ದೇಶದ ಪ್ರಧಾನಿಯವರಿಗೆ ‘ಜಲಗ್ರಂಥ’ ದ ಪಕ್ಕಾ ಡಿಜಿಟಲ್ ದಾಖಲೆಗಳೊಂದಿಗೆ ವರದಿ ನೀಡುವ ಮೂಲಕ ಅಂತ್ಯವಾಗಲಿದೆ.

ಎಲ್ಲಾ ಹಂತದಲ್ಲೂ ಯಶಸ್ವಿಯಾಗಿ ಚಾಲನೆ ನೀಡಲಾಗಿದೆ. ಆಸಕ್ತರು ಕೈಜೋಡಿಸಬಹುದು.