3rd December 2024
Share

TUMAKURU:SHAKTHIPEETA FOUNDATION

ನಿನ್ನೆ ಇಬ್ಬರು ಮಾಧ್ಯಮ ಸ್ನೇಹಿತರು ಇದ್ದಕ್ಕಿದ್ದ ಹಾಗೆ ಫೋನ್ ಮಾಡಿ, ಯಾಕ್ ಸಾರ್ ಇತ್ತೀಚೆಗೆ ಪ್ರೆಸ್ ಮೀಟ್ ಮಾಡುತ್ತಿಲ್ಲ, ಇನ್ನೂ ಮುಂದೆ ಪ್ರೆಸ್ ಮೀಟ್ ಮಾಡಲ್ವ ಎಂದು ಕೇಳಿದರು.

ನಾನು ಅವರಿಗೆ ಹೇಳಿದೆ, ಹಿಂದೆ ಪ್ರವಾಸಿ ಮಂದಿರಲ್ಲಿ ಉಚಿತವಾಗಿ ಪ್ರೆಸ್ ಮೀಟ್ ಮಾಡುತ್ತಿದ್ದೆ. ಈಗ ಅವರು ಯಾರಿಗೂ ಸ್ಥಳ ಕೊಡುವುದಿಲ್ಲಾ ಎಂದು ನಿಯಮ ಮಾಡಿಕೊಂಡಿದ್ದಾರೆ.

ವಾರ್ತಾ ಭವನದಲ್ಲಿ ಪ್ರೆಸ್ ಮೀಟ್ ಮಾಡಿದರೆ ರೂ 1000 ಶುಲ್ಕ ನೀಡಬೇಕು. ಹೊಯ್ಸಳ ಹೋಟೆಲ್ ನಲ್ಲಿ ಮಾಡಿದರೆ ಸುಮಾರು ರೂ 3 ರಿಂದ 5 ಸಾವಿರ ಬಿಲ್ ಬರುತ್ತದೆ. ಮರದ ಕೆಳಗೆ ಕರೆದರೆ ನೀವೂ ಬರಬೇಕಲ್ಲ. ನಾವು ಹೇಗೆ ಪ್ರೆಸ್ ಮೀಟ್ ಮಾಡಬೇಕು ಹೇಳಿ ಗುರು ಎಂದೆ.

ಎಂಪಿಯವರ ಆಫೀಸ್‍ನಲ್ಲಿ ಮಾಡಬಹುದಲ್ಲ ಎಂದಾಗ, ಹೌದು ಎಂಪಿಯವರ ಪ್ರೆಸ್ ಮೀಟ್‍ನಲ್ಲಿ ಬಾಯಿಗೆ ಬಂದ ಹಾಗೆ ಪ್ರಶ್ನೆ ಕೇಳುತ್ತೀರಿ. ನಾನು ಉತ್ತರ ಕೊಡಲು  ಮುಂದಾದರೆ ನೀವೂ ಮಾತನಾಡಬೇಡಿ ಎನ್ನುತ್ತೀರಿ,

ಎಂಪಿಯವರು ಪಕ್ಕದಲ್ಲಿ ಕುಳಿತು ಕೊಂಡು ಕೈಹಿಡಿದು ನೀವೂ ಸುಮ್ಮನಿರಿ ಅಂತಾರೆ, ಅವರು  ನೀವೂ ಕೇಳುವ ಪ್ರಶ್ನೆಗೆ ಒಂದು ಎಕ್ಟ್ರ ಮಾತ್ರೆ ನುಂಗಬೇಕು. ಯಾವ ಸಂಪತ್ತಿಗೆ ಮಾಡಬೇಕು ಹೇಳಿ ಎಂದಾಗ ಅವರು ಪಕ-ಪಕನೆ ನಕ್ಕರು.

ನಾನು ಅವರಿಗೆ ಹೇಳಿದೆ, ನೋಡಿ ಸರ್ಕಾರಿ ಜೂನಿಯರ್ ಕಾಲೇಜ್ ಮುಂಬಾಗ ಆಲದ ಮರಗಳ ಮಧ್ಯೆ, ತುಮಕೂರು ಸ್ಮಾರ್ಟ್ ಸಿಟಿಯವರು ಒಂದು ಪಾರ್ಕ್ ಮಾಡಿದ್ದಾರೆ. ಪಕ್ಕದ ಬಾರ್ ನಲ್ಲಿ ಎಣ್ಣೆ ತಂದು ಅಲ್ಲಿ ಹೊಡೆಯುತ್ತಿದ್ದಾರೆ.

ಆ ಜಾಗದಲ್ಲಿ ಪ್ರೆಸ್ ಮೀಟ್ ಮತ್ತು ಅಭಿವೃದ್ಧಿ ಚರ್ಚೆ ಮಾಡಲು ಬಹಳ ಚೆನ್ನಾಗಿದೆ.  ಪ್ರೆಸ್ ನಲ್ಲಿ ಇರುವ ಎಡಪಂಥೀಯ ಮತ್ತು ಬಲಪಂಥೀಯ ವ್ಯಾಜ್ಯ ಬಿಟ್ಟು ಒಟ್ಟಾಗಿ ನಿರ್ವಹಣೆಗಾಗಿ ಪಡೆಯಿರಿ. ಅಥವಾ ಎಲ್ಲಾ ಗುಂಪುಗಳು ಅದೇ ಸ್ಥಳದಲ್ಲಿ ಬೇರೆ ಬೇರೆ ಜಾಗ ಪಡೆಯಿರಿ.

ಅಭಿವೃದ್ಧಿ ಪರ ಮಾತನಾಡುವ ನಮ್ಮಂಥವರಿಗೆ ಉಚಿತವಾಗಿ ನೀಡಿ,  ರಾಜಕೀಯ ಪಕ್ಷಗಳು, ವ್ಯಾಪಾರಿಗಳು ಇತ್ಯಾದಿಯವರಿಗೆ  ರೂ 1000 ಶುಲ್ಕ ನಿಗದಿ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ. ಆದರೇ ಆ ಜಾಗದಲ್ಲಿ ಕುಡಿತ, ಇಸ್ಪೀಟ್ ನಿಷೇಧ. ಬೇಕಾದರೆ ಸಂಜೆ ವೇಳೆ ಮನರಂಜನೆ ಕಾರ್ಯಕ್ರಮ ಮಾಡಿ.

ಉಸ್ತುವಾರಿ ಸಚಿವರು, ಸಂಸದರು, ಶಾಸಕರೊಂದಿಗೂ ಚರ್ಚೆ ಮಾಡೋಣ ಎಂದು ಸಲಹೆ ನೀಡಿದ್ದೇನೆ. ಇಂಡಿಯಾ ಪಾಕಿಸ್ಥಾನ ಒಟ್ಟಿಗಾದರೂ ತುಮಕೂರು ಪ್ರೆಸ್ ಗುಂಪುಗಳು ಒಟ್ಟಾಗುವುದಿಲ್ಲ, ಪಕ್ಸಟ್ಟೆ ಸಲಹೆ ನೀಡಲು ಬಂಡವಾಳ ಹಾಕಬೇಕಾ?